ನವದೆಹಲಿ:ದೇಶದಲ್ಲಿ ಎಚ್3ಎನ್2 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಮಾರ್ಚ್ 9ರವರೆಗೆ 3,038 ಇನ್ಫ್ಲುಯೆಂಜಾ ವೈರಸ್ ಎಚ್3ಎನ್2 ಸೇರಿದಂತೆ ಅನೇಕ ಉಪತಳಿಗಳು ಪತ್ತೆಯಾಗಿರುವುದನ್ನು ಪ್ರಯೋಗಾಲಯಗಳು ದೃಢಪಡಿಸಿವೆ ಎಂದು ಐಡಿಎಸ್ಪಿ-ಐಎಚ್ಐಪಿ ಮಾಹಿತಿ ನೀಡಿದೆ. ಇದರಲ್ಲಿ ಜನವರಿಯಲ್ಲಿ 1,245 ಮತ್ತು ಫೆಬ್ರವರಿಯಲ್ಲಿ 1307 ಮತ್ತು ಮಾರ್ಚ್ 9ರವರೆಗೆ 486 ಪ್ರಕರಣಗಳು ಸೇರಿವೆ.
ಹೊರ ರೋಗಿಗಳ ವಿಭಾಗ ಮತ್ತು ಒಪಿಡಿಗಳಲ್ಲಿ ದಾಖಲಾಗುತ್ತಿರುವ ಈ ಪ್ರಕರಣಗಳ ಸಂಬಂಧ ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಣ್ಗಾವಲಿರಿಸಿದೆ. ಎಚ್3ಎನ್2 ಸೋಂಕು ಹೊರತುಪಡಿಸಿ ಮತ್ತೆರಡು ಸೋಂಕುಗಳಾದ ಇನ್ಫ್ಲುಯೆಂಜಾ A H1N1, ಇನ್ಫ್ಲುಯೆಂಜಾ B ಕೂಡ ಹೆಚ್ಚು ಪ್ರಸರಣಗೊಳ್ಳುತ್ತಿದೆ.
ಈ ನಡುವೆ ಮತ್ತೊಂದು ಆತಂಕ ತಲೆದೋರಿದೆ. ಕೋವಿಡ್ ಪ್ರಕರಣಗಳಲ್ಲೂ ಕೂಡ ಏರಿಕೆ ಕಂಡು ಬಂದಿದೆ. ಕಳೆದ ನಾಲ್ಕು ತಿಂಗಳಲ್ಲೇ ಅಧಿಕ ಕೋವಿಡ್ ಪ್ರಕರಣ ಭಾನುವಾರ ದಾಖಲಾಗಿದೆ. ಭಾನುವಾರ ಒಂದೇ ದಿನ 524 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹ್ಯೂಮನ್ ಇನ್‌ಫ್ಲುಯೆಜಾ ವೈರಸ್ ಮತ್ತು SARS-COV-2 ವೈರಸ್‌ನ ಪತ್ತೆಗಾಗಿ ಈಗಾಗಲೇ ತೀವ್ರ ಉಸಿರಾಟದ ಸಮಸ್ಯೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರ ಮೇಲೆ 28 ಸೈಟ್ಗಳ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಗಾವಲು ನೆಟ್ವರ್ಕ್ನಲ್ಲಿ 27 ಡಿಎಚ್ಆರ್-ಐಸಿಎಂಆರ್ನ ವೈರಸ್ ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲ ಮತ್ತು ದೇಶದ ರಾಷ್ಟ್ರೀಯ ಇನ್ಫ್ಲಯೆಂಜ ಕೇಂದ್ರ (ಡಬ್ಲ್ಯೂಎಚ್ಒ-ಎನ್ಐಸಿ) ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಇರಿಸಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದ ಭಾಗವಾಗಿದೆ. ಪ್ರಸಕ್ತ ವರ್ಷಾರಂಭದ 9 ವಾರದ ಅವಧಿಯಲ್ಲಿ ಈ ಕಣ್ಗಾವಲು ನೆಟ್ವರ್ಕ್ಗಳು ಹ್ಯೂಮನ್ ಇನ್ಫ್ಲುಯೆಂಜ ಸೋಂಕು ಮತ್ತು ಸಾರ್ಸ್-ಕೋವ್-3 ಸೋಂಕು ಅನ್ನು ಅನಾರೋಗ್ಯ ಮತ್ತು ಉಸಿರಾಟದ ಸಮಸ್ಯೆ ಪ್ರಕರಣದಲ್ಲಿ ಪತ್ತೆ ಮಾಡಿದೆ.