ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದನ್ನು ಕಾಣಬಹುದು. ಆದರೆ ಮಕ್ಕಳ ಅನಾರೋಗ್ಯ ಚಿಂತೆ ಮೂಡಿಸುತ್ತದೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಕೋವಿಡ್ ಹೊರತಾಗಿ ಕಳೆದ ಕೆಲವು ವರ್ಷಗಳಿಂದ ಜನರ ಜೀವನ ಶೈಲಿಯಿಂದಾಗಿಯೂ ಕೂಡ ಮಕ್ಕಳ ರೋಗ ನಿರೋಧಕ ಶಕ್ತಿಯಲ್ಲಿ ಇಳಿಕೆ ಕಾಣಬಹುದು. ಮಕ್ಕಳು ಪದೇ ಪದೇ ಸೋಂಕಿಗೆ ತುತ್ತಾಗಲು ಕಾರಣ ಕೂಡ ಇದೇ ದುರ್ಬಲ ರೋಗ ನಿರೋಧಕ ವ್ಯವಸ್ಥೆ.
ಇಂದೋರ್ನ ಮಕ್ಕಳ ತಜ್ಞೆ ಡಾ. ಸೋನಾಲಿ ನವಲೆ ಪುರಂಡರೆ ಹೇಳುವ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳ ಆಹಾರ ಶೈಲಿ ಮತ್ತು ದಿನಚರಿಗಳು ಆರೋಗ್ಯಕರವಾಗಿಲ್ಲ. ಇತ್ತೀಚಿನ ದಿನಗಳಲ್ಲಿ, ಹೊರಗಿನ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇದು ತುಂಬಾ ಎಣ್ಣೆ, ಖಾರದ ಜೊತೆಗೆ ಸರಿಯಾಗಿ ಬೇಯಿಸದ ಆಹಾರಗಳಾಗಿರುತ್ತವೆ. ಇಂದಿನ ಕಾಲಮಾನದಲ್ಲಿ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡುತ್ತಾರೆ ಎಂಬ ಕುರಿತು ಪೋಷಕರು ಕೂಡ ಕಾಳಜಿವಹಿಸಬೇಕು.
ಇತ್ತೀಚಿನ ಮಕ್ಕಳು ಹೊರಾಂಗಣ ಮತ್ತು ಒಳಾಂಗಣ ಚಟುವಟಿಕೆಯಲ್ಲಿ ಭಾಗಿಯಾಗುವುದು ಕಡಿಮೆ. ಇದರಿಂದ ದೇಹಕ್ಕೆ ಅಗತ್ಯ, ಆರೋಗ್ಯಕ್ಕೆ ಬೇಕಾದ ದೈಹಿಕ ಚಟುವಟಿಕೆಗಳು ಸಿಗದೇ ಹೋಗಬಹುದು. ಕೋವಿಡ್ನಿಂದಾಗಿ ಮಕ್ಕಳ ಮಲಗುವ-ಏಳುವ ಸಮಯ ಜೊತೆಗೆ ದಿನಚರಿ, ದೈಹಿಕ ಚಟುವಟಿಕೆ ಸೇರಿದಂತೆ ಹಲವರಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.
ಬಹುತೇಕ ಮಕ್ಕಳು ತಮ್ಮ ಸಮಯವನ್ನು ಓದು, ಜ್ಞಾನ ಗಳಿಕೆ ಅಥವಾ ಆಟವಾಡುವ ಬದಲು ಮೊಬೈಲ್, ಟಿವಿಯಲ್ಲಿ ಕಳೆಯುತ್ತಿದ್ದಾರೆ. ಇದು ಅವರ ತಿನ್ನುವ ಮತ್ತು ಮಲಗುವ ಅಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರಿಂದಾಗಿ ಮಕ್ಕಳ ದೃಷ್ಟಿ, ತಲೆನೋವು, ಬೊಜ್ಜು, ಜೀರ್ಣ ಕ್ರಿಯೆ ಸಮಸ್ಯೆ, ಬೇಗ ಅನಾರೋಗ್ಯಕ್ಕೆ ತುತ್ತಾಗುವುದು, ಏಕಾಗ್ರತೆ ಭಂಗ ಮತ್ತು ಇನ್ನಿತರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಯಿಂದಾಗಿ ಮಕ್ಕಳು ನಿರಂತರ ಔಷಧಿ ತೆಗೆದುಕೊಳ್ಳಬೇಕಾಗಬಹುದು. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಮಕ್ಕಳ ದೇಹ ಮತ್ತು ಮಾನಸಿಕ ಬೆಳವಣಿಗೆ ವೇಳೆ ಅನೇಕ ಸಮಸ್ಯೆಗೆ ಒಳಗಾಗುವುದನ್ನು ತಡೆ ಹಿಡಿಯಬೇಕಿದೆ. ಆರೋಗ್ಯಕ್ಕೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಕೂಡ ಸಾಧ್ಯವಾಗುತ್ತದೆ. ಮಕ್ಕಳ ಅರೋಗ್ಯಮ ಜೀವನಶೈಲಿ ಹಿನ್ನೆಲೆಯಲ್ಲಿ ಪೋಷಕರು ಕೂಡ ಕಾಳಜಿವಹಿಸುವುದು ಅಗತ್ಯ. ಮಕ್ಕಳು ಆರೋಗ್ಯಕಕ್ಕೆ ಕೆಲವು ಪ್ರಮುಖ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.