ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು ದೇಹ ತಂಪು ಪಾನೀಯಗಳನ್ನು ಬೇಡುತ್ತದೆ. ಸುಡು ಬಿಸಿಲಿನಿಂದ ರಕ್ಷಣೆ ಜೊತೆ ಆರೋಗ್ಯಯುತ ಪಾನೀಯಗಳ ಆಯ್ಕೆ ವಿಚಾರದಲ್ಲಿ ಲಸ್ಸಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಪಂಜಾಬ್ನ ಸಂಪ್ರಾದಾಯಿಕ ಪಾನೀಯವಾದ ಈ ಲಸ್ಸಿ ಇಂದು ಎಲ್ಲಡೆ ಎಲ್ಲರ ಮನಗೆದ್ದಿದೆ. ಹೆಚ್ಚಿನ ಆರೋಗ್ಯಯುತ ಅಂಶ ಇದರಲ್ಲಿದ್ದು, ಶಾಖದಿಂದ ದೇಹವನ್ನು ಕಾಪಾಡುತ್ತದೆ. ಈ ಲಸ್ಸಿಗಳು ಮೊಸರಿನಿಂದ ಮಾಡಲ್ಪಟ್ಟಿರುತ್ತದೆ. ಇದರಿಂದ ಮೊಸರಿನ ಉತ್ತಮ ಅಂಶ ದೇಹ ಸೇರುತ್ತದೆ. ಲಸ್ಸಿ ದೇಹವನ್ನು ಶಾಖದಿಂದ ತಂಪು ಮಾತ್ರ ಮಾಡುವುದಿಲ್ಲ. ಇದು ಮನಸ್ಸನ್ನು ಉಲ್ಲಾಸಿತಗೊಳಿಸಲಾಗಿದೆ. ಇನ್ನು ಈ ಲಸ್ಸಿಯಲ್ಲೂ ಸಂಪ್ರಾದಾಯಿಕ ಲಸ್ಸಿಗಳ ಹೊರತಾಗಿ ಅನೇಕ ರೀತಿಯ ರುಚಿಕರ ಲಸ್ಸಿಗಳಿವೆ. ಈ ಬೇಸಿಗೆಯ ಬೇಗೆಯನ್ನು ಹೊಡೆದೂಡಿಸಲು ಈ ವಿಧ ವಿಧದ ರುಚಿಕರ ಲಸ್ಸಿಗಳು ಸಹಾಯ ಮಾಡಲಿದೆ.
ಸ್ವೀಟ್ ಲಸ್ಸಿ: ಸಾಂಪ್ರಾದಾಯಿಕ ಲಸ್ಸಿ ಎಂದರೆ ಅದು ಸ್ವೀಟ್ ಲಸ್ಸಿ. ಎಷ್ಟೇ ವಿಧದ ಲಸ್ಸಿ ಬಂದರೂ ಈ ಸ್ವೀಟ್ ಲಸ್ಸಿ ಅನೇಕರ ಅಚ್ಚು ಮೆಚ್ಚು. ಗಟ್ಟಿ ಮೊಸರಿಗೆ ಕೊಂಚ ನೀರು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುವ ಮೂಲಕ ಸುಲಭವಾಗಿ ಇದನ್ನು ತಯಾರಿಸಬಹುದು. ಇದಕ್ಕೆ ಬೇಕಾದಲ್ಲಿ ಕೊಂಚ ಕ್ರೀಮ್ ಅನ್ನು ಮೇಲೆ ಸೇರಿಸಬಹುದು. ಬೇಸಿಗೆಯ ರಜೆ ಮೋಜಿನಲ್ಲಿ ಇವು ಮಕ್ಕಳಿಗೆ ಸಖತ್ ಖುಷಿ ನೀಡುವುದು ಸುಳ್ಳಲ್ಲ.
ಮಾವಿನ ಲಸ್ಸಿ: ಬೇಸಿಗೆಯಲ್ಲಿ ಮಾವು ಯಥೇಚ್ಚವಾಗಿ ಮಾರುಕಟ್ಟೆಗೆ ಬರುವ ಹಿನ್ನಲೆ ಈ ಮಾವಿನ ಲಸ್ಸಿಯನ್ನು ಒಮ್ಮೆ ರುಚಿ ನೋಡಲೇಬೇಕು. ಮೊಸರಿನ ಜೊತೆಗೆ ಮಾವಿನ ತಿರಳನ್ನು ಹಾಕಿ, ಮ್ಯಾಂಗೋ ಶೇಕ್ ರೀತಿ ಇದನ್ನು ತಯಾರಿಸ ಬಹುದು. ಹಣ್ಣಿನ ರಾಜ ಮಾವು ಈ ಲಸ್ಸಿಯ ಸ್ವಾದ ಹೆಚ್ಚಿಸುವುದು ಸುಳ್ಳಲ್ಲ.