ಬಾಲಿವುಡ್ ಸೆಲೆಬ್ರಿಟಿಗಳು ತ್ವಚೆಯ ಆರೈಕೆಯಲ್ಲಿ ಸದಾ ದೇಸಿ ಆರೈಕೆಗೆ ಮಹತ್ವ ನೀಡುತ್ತಾರೆ. ಅದರಲ್ಲೂ ಮುಖ್ಯವಾಗಿ ಕಡಲೆ ಹಿಟ್ಟು, ಮೊಸರು, ಅರಿಶಿಣ ಬಳಸುತ್ತಾರೆ. ತ್ವಚೆಯ ರಹಸ್ಯ ಕಾಪಾಡುವಲ್ಲಿ ಈ ಮೂರು ಮ್ಯಾಜಿಕ್ ಪವರ್ ಸೃಷ್ಟಿಸುವುದು ಸುಳ್ಳಲ್ಲ. ಇವು ಭಾರತೀಯರ ಸೌಂದರ್ಯದ ಪ್ರಮುಖ ರಹಸ್ಯವಾಗಿದ್ದು, ಇದರಲ್ಲಿನ ಕೆಲವು ಅಂಶಗಳು ತ್ವಚೆಯ ಹೊಳಪು ಮತ್ತು ಆರೈಕೆ ಮಾಡುವಲ್ಲಿ ಯಶಸ್ವಿಯಾಗಿವೆ. ಈ ಕುರಿತು ಕಾಸ್ಮೆಟೊಲೊಜಿಸ್ಟ್ ಪೂಜಾ ನಾಗ್ದೇವ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅರಿಶಿಣ: ಭಾರತೀಯರ ಅಡುಗೆ ಮನೆಯಲ್ಲಿರುವ ಅರಿಶಿಣ ರೋಗ ಪ್ರತಿರೋಧಕ ಗುಣ ಹೊಂದಿದ್ದು, ಸೌಂದರ್ಯ ಸೇರಿದಂತೆ ಹಲವು ಚಿಕಿತ್ಸೆಯಲ್ಲೂ ಮಹತ್ವ ಪಡೆದಿದೆ.
ಆ್ಯಂಟಿ ಆಕ್ಸಿಡೆಂಟ್ ಅಂಶ: ಅರಿಶಿಣದಲ್ಲಿ ಕ್ಯುರ್ಕುಮಿನ್ ಇದೆ. ಇದು ನೈಸರ್ಗಿಕವಾಗಿ ರಾಡಿಕಲ್ ಮುಕ್ತ ಸಾಮರ್ಥ್ಯ ಹೊಂದಿದೆ. ಇದು ಅವಧಿ ಪೂರ್ವ ವಯಸ್ಸಾಗುವಿಕೆ ಮತ್ತು ತ್ವಚೆ ಹಾನಿ ತಡೆಯುತ್ತದೆ.
ಉರಿಯೂತ ವಿರೋಧಿ ಪರಿಣಾಮ: ಅರಿಶಿಣದಲ್ಲಿ ಉರಿಯೂತ ವಿರೋಧಿ ಗುಣ ಹೊಂದಿದ್ದು, ತ್ವಚೆಯನ್ನು ಮೃದುವಾಗಿಸುತ್ತದೆ. ರೆಡ್ನೆಸ್ ಮತ್ತು ತ್ವಚೆ ಕಿರಿಕಿರಿ ತಡೆಯುತ್ತದೆ.
ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಮೈಕ್ರೊಬಯಲ್:ಅರಿಶಿಣ ನೈಸರ್ಗಿಕವಾಗಿ ರೋಗ ನಿರೋಧಕ ಗುಣ ಹೊಂದಿದ್ದು, ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿಯಂತ್ರಣ ಮಾಡುತ್ತದೆ.
ಕಡಲೆ ಹಿಟ್ಟು:ಕಡಲೆಹಿಟ್ಟು ಎಕ್ಸೊಲಿಯಟ್ ಪರಿಣಾಮ ಹೊಂದಿದ್ದು, ಇದು ಚರ್ಮದಲ್ಲಿನ ಸತ್ತ ಕೋಶ ತೆಗೆದುಹಾಕುತ್ತದೆ. ಚರ್ಮದಲ್ಲಿ ತೆರೆದ ರಂಧ್ರಗಳನ್ನು ಮುಚ್ಚುತ್ತದೆ. ನೈಸರ್ಗಿಕ ಬಣ್ಣ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.