ಮಕ್ಕಳು ಓದಿನಲ್ಲಿ ಮುಂದಿರಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಇಚ್ಛೆ. ಇದಕ್ಕೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಅವರಿಗೆ ಪೋಷಕಾಂಶಗಳು ಅಗತ್ಯ. ಈ ಪೋಷಕಾಂಶಗಳು ಅವರು ನೆನಪಿನ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಸರಿಯಾದ ಪೋಷಣೆ ಸಿಗದೇ ಹೋದರೆ ಅವರಲ್ಲಿ ಓದಿನಲ್ಲಿ ಎಕಾಗ್ರತೆ ಮತ್ತು ಗ್ರಹಿಸುವಿಕೆ ಸಾಧ್ಯವಾಗದೇ ಹೋಗುತ್ತದೆ. ಈ ಹಿನ್ನಲೆ ಮಕ್ಕಳಿಗೆ ನೀಡುವ ಆಹಾರಗಳು ಅವರ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಂತೆ ಇರಬೇಕು. ಬೆಳೆಯುವ ಮಕ್ಕಳಿಗೆ ಯಾವ ಆಹಾರಗಳು ಅವರ ನೆನಪಿನ ಶಕ್ತಿ ವೃದ್ಧಿಸಲು ಸಹಾಯವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಬ್ಲೂಬೆರ್ರೆ: ಇದು ಮಿದುಳಿ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದು ಮಿದುಳಿನ ನರದ ವ್ಯವಸ್ಥೆಯನ್ನು ಸಕ್ರಿಯವಾಗಿರಿಸಿ, ಸರಾಗ ಚಟುವಟಿಕೆಗೆ ಅನುವು ಮಾಡಿಕೊಡುತ್ತದೆ.
ಬ್ರಾಕೊಲಿ: ಇದರಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಇದು ನೆನಪಿನ ಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಕೂಡ ಕೇಂದ್ರದ ನರದ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ಮಕ್ಕಳಿಗೆ ನೀಡುವುದು ಕೂಡ ಉತ್ತಮ ಆಯ್ಕೆ ಆಗಿದೆ.
ಡ್ರೈ ಫ್ರುಟ್ಸ್ : ಇದು ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಡಯಟ್ನಲ್ಲಿ ಬಳಕೆ ಮಾಡಬಹುದಾಗಿದೆ. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿನ್, ಕೊಬ್ಬಿನ ಆಮ್ಲ, ವಿಟಮಿನ್ ಮತ್ತು ಮಿನರಲ್ಸ್ ಅಂಶಗಳು ಹೆಚ್ಚಿದೆ. ಅದರಲ್ಲೂ ವಾಲ್ನಟ್, ಪಿಸ್ತಾ ಮತ್ತು ಬಾದಾಮಿಗಳು ನರಗಳ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತವೆ.