ಸಾಮಾನ್ಯವಾಗಿ ಹತ್ತರಲ್ಲಿ 8 ಮಹಿಳೆಯರು ಪಾಲಿಸ್ಟಿಕ್ ಒವರಿ ಸಿಂಡ್ರೋಮ್ ಅಂದರೆ ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನಾರೋಗ್ಯಕರ ಜೀವನ ಶೈಲಿ, ಕೆಲಸ, ಮನೆ ಅಥವಾ ಓದಿನ ಒತ್ತಡಗಳು ಇದಕ್ಕೆ ಕಾರಣವಾಗಬಹುದು. ಪಿಸಿಒಎಸ್ ಸಮಸ್ಯೆ ಹೊಂದಿರುವರಲ್ಲಿ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವಾಗುವುದರಿಂದ ಅವರು ನಿಯಮಿತವಾಗಿ ವ್ಯಾಯಾಮ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಪಿಸಿಒಎಸ್ ಸಮಸ್ಯೆಗೆ ಜ್ಯೂಸ್ಗಳು ಕೂಡ ಅದ್ಬುತವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿನ ಪ್ರೊಟೀನ್ಗಳು ನಿಮಗೆ ಈ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ಜ್ಯೂಸ್ಗಳನ್ನು ಸೇವಿಸುವುದೊಳಿತು ಎಂದು ಡಯಟೀಶಿಯನ್ ವಿಧಿ ಚವ್ಲಾ ತಿಳಿಸಿದ್ದಾರೆ.
ಮೆಂತ್ಯ, ದಾಲ್ಚಿನ್ನಿ ಮತ್ತು ಕಪ್ಪು ಒಣದ್ರಾಕ್ಷಿ ಪಾನೀಯ:ಆರೋಗ್ಯಕರ ಗುಣ ಹೊಂದಿರುವ ಮೆಂತ್ಯೆ ಮಾಸಿಕ ಋತುಚಕ್ರ ನಿಯಂತ್ರಣಕ್ಕೆ ಸಹಾಯಕ. ದಾಲ್ಚಿನಿ ಇನ್ಸುಲಿನ್ ಉತ್ಪಾದನೆ ಮಾಡಲಿದೆ. ಕಪ್ಪು ಒಣದ್ರಾಕ್ಷಿ ರಕ್ತವನ್ನು ಶುದ್ದೀಕರಣ ಮಾಡುವ ಗುಣ ಹೊಂದಿದೆ.
ಜ್ಯೂಸ್ ಮಾಡುವ ವಿಧಾನ: ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ 3-4 ಕಪ್ಪು ಒಣದ್ರಾಕ್ಷಿ, ದಾಲ್ಚಿನಿ ಮತ್ತು ಮೆಂತ್ಯ ಕಾಳುಗಳನ್ನು ಸೇರಿಸಿ. ಇದನ್ನು ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಪರಿಹಾರ ಕಾಣಬಹುದು. ಇದೇ ರೀತಿ 8 ವಾರ ಅನುಸರಿಸಿದರೆ ಸಮಸ್ಯೆಯಿಂದ ಮುಕ್ತಿ ಕಾಣಬಹುದು.
ಅಲೋವೆರಾ: ತಾಜಾತನದ ಅಂಶ ಹೊಂದಿರುವ ಅಲೋವೆರಾ ದೇಹದಲ್ಲಿನ ರಾಸಾಯನಿಕ ರಚನೆಯನ್ನು ಪ್ರತಿರೋಧಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೂ ಸಹಾಯ ಮಾಡುತ್ತದೆ.
ಜ್ಯೂಸ್ ಮಾಡುವ ವಿಧಾನ: ನೀರಿಗೆ ಅಲೋವೆರಾ ಬೆರೆಸಿ, ಅದರ ರುಚಿ ಹೆಚ್ಚಿಸಲು ಉಪ್ಪು ಮತ್ತು ಜೇನು ತುಪ್ಪವನ್ನು ಬಳಕೆ ಮಾಡಿ. ಇದನ್ನೂ ಕೂಡ ಬೆಳಗ್ಗೆ ಎದ್ದಾಕ್ಷಣ ಕುಡಿಯಬೇಕು.
ಸೋಯಾ ಹಾಲು: ಹೆಚ್ಚಿನ ಪ್ರೊಟೀನ್ ಅಂಶ ಹೊಂದಿರುವ ಸೋಯಾ ಇನ್ಸುಲಿನ್ ಪ್ರತಿರೋಧ ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಕಡಿಮೆ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮತ್ತು ಹಾರ್ಮೋನ್ ಮಟ್ಟ ಕಡಿಮೆ ಮಾಡುತ್ತದೆ. ಪ್ರತಿದಿನ ಸೋಯಾ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಶತಾವರಿ: ಈ ಮೂಲಿಕೆಯು ವಿಟಮಿನ್, ಮಿನರಲ್ಸ್ ಮತ್ತು ಫೋಲಿಕ್ ಆಸಿಡ್ನಿಂದ ಸಮೃದ್ಧವಾಗಿರುತ್ತದೆ. ಇದು ಆ್ಯಂಟಿಆಕ್ಸಿಡೆಂಟ್ ರೀತಿ ಮಹಿಳೆಯರ ಉತ್ಪಾದನಾ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. ಜೊತೆಗೆ ಮಹಿಳೆಯರ ಫಲವತ್ತತೆ ಹೆಚ್ಚಿಸುತ್ತದೆ.