ಹೈದರಾಬಾದ್: ಆರೋಗ್ಯದ ಕಾಳಜಿ ವಿಚಾರ ಇಂದು ಹೆಚ್ಚು ಪ್ರಾಬಲ್ಯದ ಕ್ಷೇತ್ರವಾಗಿದೆ. ಅನೇಕರು ತಮ್ಮ ಮೊಬೈಲ್ಗಳಲ್ಲಿ ಆರೋಗ್ಯದ ಕುರಿತ ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದಾರೆ. ಈ ಹೆಲ್ತ್ಕೇರ್ ಮೊಬೈಲ್ ಆ್ಯಪ್ಗಳು ಇಂದು ಟ್ರೆಂಡ್ ಸೆಟ್ಟರ್ಗಳಾಗಿವೆ.
ಹೆಡ್ಸ್ಪೇಸ್: ಸಾಂಕ್ರಾಮಿಕತೆಯ ಬಳಿಕ ಒತ್ತಡ ಮತ್ತು ಆತಂಕ ಎಂಬೆರಡು ಅತ್ಯಂತ ಕಾಳಜಿಯ ವಿಚಾರವಾಗಿದೆ. ಇದಕ್ಕೆ ಧ್ಯಾನ ಎಂಬುದು ಪರಿಹಾರಾತ್ಮಕ ಚಿಕಿತ್ಸೆ. ಹೆಡ್ಸ್ಪೆಸ್ ಆ್ಯಪ್ ಈ ಧ್ಯಾನದ ಕುರಿತು ವೈಯಕ್ತಿಕ ಮಾರ್ಗದರ್ಶನ ನೀಡುತ್ತದೆ. ಉಸಿರಾಟದ ವ್ಯಾಯಾಮವೂ ಸೇರಿದಂತೆ ಸಂಪೂರ್ಣ ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ದೈನಂದಿನ ಧ್ಯಾನ, ನಿದ್ರಾ ಧ್ಯಾನ, ಒತ್ತಡ ಮತ್ತು ಖಿನ್ನತೆ ಮತ್ತು ಏಕಾಗ್ರತೆಗೆ ಇದು ಸಹಾಯಕ.
ಹೆಲ್ತ್ ಟಿಪ್: ಅಮೆರಿಕದ ಪ್ರಮಾಣಿತ ವೈದ್ಯರು ಕಡಿಮೆ ವೆಚ್ಚದಲ್ಲಿ ಪ್ರೀಮಿಯಮ್ ಸೇವೆ ನೀಡುತ್ತಾರೆ. ಇದು ರೋಗಿಗಳಿಗೆ ವೈದ್ಯರ ಜೊತೆಗೆ ಸಂಪರ್ಕ ಸಾಧಿಸಲು ಪ್ರೈಮರಿ ಕೇರ್ ವಿಡಿಯೋ ಅಪಾಯಿಟುಮೆಂಟ್ ನೀಡುತ್ತದೆ. ಇದರ ಹೊರತಾಗ ಆರೋಗ್ಯ ಸಂಬಂಧಿತ ಪ್ರಶ್ನಾವಳಿಗೆ ಉತ್ತರವನ್ನು ಇದರಲ್ಲಿ ಕಂಡುಕೊಳ್ಳಬಹುದು.
ಸ್ಲೀಪ್ ಸೈಕಲ್: ಸ್ಲೀಪ್ ಸೈಕಲ್ ಎಂಬುದು ಸ್ಮಾರ್ಟ್ ಅಲರಾಂನೊಂದಿಗೆ ನಿದ್ರೆಯನ್ನು ಪತ್ತೆ ಮಾಡುವ ಆ್ಯಪ್. ಇದೂ ಕೂಡ ಕಾಲ್ ಫೀಚರ್ನೊಂದಿಗೆ ನಿಧಾನ ಎಚ್ಚರ ವಿಧಾನ ಹೊಂದಿದೆ. ಅಲ್ಲದೇ ಪ್ರತಿನಿತ್ಯ ನಿಮ್ಮ ನಿದ್ರೆಯ ಮಾದರಿಯ ಪತ್ತೆಗೆ ಸಹಾಯಕ. ರಾತ್ರಿ ಉತ್ತಮ ನಿದ್ರೆಗೆ ಸಹಾಯ ಮಾಡುವ ಸಂಗೀತ ಮತ್ತು ಕಥೆಗಳ ಗ್ರಂಥಾಲಯವನ್ನು ಇದು ಹೊಂದಿದೆ.