ಬೆಂಗಳೂರು: ಉತ್ತಮವಾದ ಊಟದ ಅಭ್ಯಾಸ ರೂಢಿಸಿಕೊಳ್ಳುವುದರ ಜೊತೆಗೆ ರಾತ್ರಿ ಉತ್ತಮ ನಿದ್ದೆ ಮಾಡುವುದು ಅವಶ್ಯ. ಈ ನಿದ್ದೆ ಸಮಸ್ಯೆ ಉಲ್ಬಣವಾಗುವವರೆಗೂ ಯಾರೂ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾತ್ರಿ ಸಮಯದಲ್ಲಿ ರೂಢಿಸಿಕೊಳ್ಳುವ ಅಭ್ಯಾಸಗಳು ನಿದ್ದೆ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲ, ಆರೋಗ್ಯದ ಮೇಲೂ ಇವು ಪರಿಣಾಮ ಬೀರುತ್ತವೆ. ಇದರಿಂದಾಗಿ ನಮ್ಮ ನಿದ್ರೆಯ ಅಭ್ಯಾಸವನ್ನು ಬದಲಾಯಿಸುವುದು ಅತ್ಯವಶ್ಯಕ. ಇದು ಜೀವನ ಮಟ್ಟ ಸುಧಾರಣೆಗೂ ಸಹಾಯ ಮಾಡುತ್ತದೆ.
ಈ ಸಂಬಂಧ ದಿ ಸ್ಲೀಪ್ ಕಂಪನಿಯ ಸಹ ಸಂಸ್ಥಾಪಕಿಯಾಗಿರುವ ಪ್ರಿಯಾಂಕಾ ಸಾಲೋಟ್ ಪ್ರಮುಖವಾಗಿ ಐದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ನಿದ್ದೆ ಅಭ್ಯಾಸಗಳು ಉತ್ತಮ ನಿದ್ರೆಗೆ ತೊಡಕಾಗುತ್ತದೆ ಎಂದಿದ್ದಾರೆ.
ಸ್ಕ್ರೀನ್ ಟೈಂ: ರಾತ್ರಿ ಮಲಗುವ ಮುನ್ನ ಒಮ್ಮೆ ಮೊಬೈಲ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮೇಲೆ ಕಣ್ಣು ಆಡಿಸುವುದು ಅನೇಕ ಜನರ ಅಭ್ಯಾಸ. ಆದರೆ, ಈ ಅಭ್ಯಾಸ ಬಹಳ ಕೆಟ್ಟದ್ದು. ಸ್ಕ್ರೀನ್ ಬೆಳಕು. ಮೊಬೈಲ್ ವೀಕ್ಷಣೆ ವೇಳೆ ಹೊರಹೊಮ್ಮುವ ಬೆಳಕು ನಿದ್ರೆಯ ಕ್ರಮಕ್ಕೆ ಅಡ್ಡಿ ಪಡಿಸುತ್ತದೆ. ಅನೇಕ ಮಂದಿ ಟಿವಿ, ಮೊಬೈಲ್, ಲ್ಯಾಪ್ಟಾಪ್ ವೀಕ್ಷಣೆ ಬಳಿಕ ನಿದ್ರಿಸಲು ಕಷ್ಟಪಡುತ್ತಾರೆ. ಈ ಹಿನ್ನೆಲೆ ನಿದ್ದೆ ಸಮಯದಲ್ಲಿ ಇಂತಹ ಗ್ಯಾಜೆಟ್ಗಳಿಂದ ದೂರು ಇರುವುದು ಉತ್ತಮ. ಇದಕ್ಕೆ ಪರ್ಯಯಾವಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.
ವ್ಯಾಯಾಮ: ವ್ಯಾಯಾಮ ದೇಹಕ್ಕೆ ಅಗತ್ಯ. ಆದರೆ, ಮಲಗುವ ಮುನ್ನ ನಡೆಸುವ ವ್ಯಾಯಾಮಗಳು ನಿದ್ರೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವ್ಯಾಯಾಮದ ವೇಳೆ ಬಿಡುಗಡೆಯಾಗುವ ಶಕ್ತಿಗಳು, ಹಾರ್ಮೋನುಗಳು ಹೆಚ್ಚು ಕ್ರಿಯಾಶೀಲರಾಗುವಂತೆ ನೋಡಿಕೊಳ್ಳುತ್ತವೆ. ಇದರಿಂದ ನಿದ್ರೆಗೆ ಭಂಗ ಉಂಟಾಗುತ್ತದೆ. ಭಾರೀ ವ್ಯಾಯಾಮದ ಬದಲಾಗಿ ಸ್ಟ್ರೆಚಿಂಗ್ ಅಥವಾ ಸರಳ ಯೋಗಾಭ್ಯಾಸ ಉತ್ತಮ.