ಬೆಂಗಳೂರು: ಆರೋಗ್ಯಯುತ ಆಹಾರ ಪದ್ಧತಿ ನಿರ್ವಹಣೆಯಿಂದಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಇದರ ಜೊತೆಯಲ್ಲಿ ಕಣ್ಣಿನ ಆರೋಗ್ಯ ಬಗ್ಗೆಯೂ ಕಾಳಜಿವಹಿಸುವುದು ಅಗತ್ಯ. ಅದರಲ್ಲೂ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಸಮಯ ನಾವು ಗ್ಯಾಜೆಟ್ಗಳನ್ನು ನೋಡುವುದರಿಂದ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ. ಇಲ್ಲದೇ ಹೋದಲ್ಲಿ ಕಣ್ಣಿನ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಬಹುದು. ಇದರಿಂದ ದೃಷ್ಣಿ ಮಂದತೆ ಮತ್ತು ಕ್ಯಾಟರಾಕ್ಟ್ನಂತಹ ಇನ್ನಿತರ ತೊಂದರೆಗಳನ್ನು ತಪ್ಪಿಸಬಹುದು. ಈ ಹಿನ್ನೆಲೆ ಸೇವಿಸುವ ಆಹಾರದಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣವಿರುವ ವಿಟಮಿನ್, ಪೋಷಕಾಂಶ ಮತ್ತು ಮಿನರಲ್ಸ್ಗಳು ಇರುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಇನ್ನು ಕಣ್ಣಿನ ಆರೋಗ್ಯಕ್ಕೆ ಆರೋಗ್ಯಯುತವಾದ ಪೋಷಕಾಂಶಭರಿತ ಆಹಾರಗಳು ಯಾವುದು, ಇದರಿಂದ ಏನು ಲಾಭ ಎಂದು ತಿಳಿಯುವುದು ಅವಶ್ಯ.
ಮೀನು: ಕಣ್ಣಿನ ಆರೋಗ್ಯಕ್ಕೆ ಮೀನು ಹೆಚ್ಚಿನ ಪ್ರಯೋಜನ ಇರುತ್ತದೆ. ಮೀನಿನಲ್ಲಿರುವ ಸಲ್ಮೊನ್ ಅಂಶಗಳು ಉತ್ತಮ ಪರಿಣಾಮ ಬೀರಲಿದೆ. ಜೊತೆಗೆ ಇದರಲ್ಲಿನ ಒಮೆಗಾ- 3 ಫ್ಯಾಟಿ ಆಸಿಡ್ ಕೂಡ ಆರೋಗ್ಯಯುತ ಆಹಾರ ಪದ್ಧತಿಗೆ ಅಗತ್ಯವಾಗಿದೆ. ಒಮೆಗಾ-3 ಫ್ಯಾಟಿ ಆ್ಯಸಿಡ್ ದೃಷ್ಟಿ ಅಭಿವೃದ್ಧಿಗೆ ಸಹಾಯಕವಾಗುವುದರ ಜೊತೆಗೆ ಕಣ್ಣಿನ ದೃಷ್ಟಿ ಮರಳಿಸುವಲ್ಲಿ ಪ್ರಮುಖವಾಗಿದೆ.
ಮೊಟ್ಟೆ: ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಾಯಕವಾಗಿದೆ. ಇದರಲ್ಲಿನ ಹಳದಿಯಲ್ಲಿ ವಿಟಮಿನ್ ಎ, ಲ್ಯೂಟಿನ್, ಜೆಕ್ಸಂಥಿನ್ ಮತ್ತು ಜಿಂಕ್ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೇ ವಿಟಮಿನ್ ಎ ಕಾರ್ನಿಯಾ ರಕ್ಷಣೆ ಮಾಡುತ್ತದೆ.
ಬಾದಾಮಿ: ಬಾದಾಮಿ ಕೂಡ ಹೆಚ್ಚಿನ ಪೋಷಕಾಂಶ ಹೊಂದಿದ್ದು, ಇದರಲ್ಲಿ ಹೆಚ್ಚಳವಾಗಿ ವಿಟಮಿನ್ ಇ ಇರುತ್ತದೆ. ಈ ವಿಟಮಿನ್ ಕೂಡ ಆರೋಗ್ಯಯುತ ಟಿಕ್ಯೂ, ಅನಿಶ್ಚಿತ ಮೆಲೆಕ್ಯೂಲ್ ರಕ್ಷಣೆ ಮಾಡುತ್ತದೆ. ಇದರಲ್ಲಿನ ವಿಟಮಿನ್ ಇ ಕೂಡ ಕ್ಯಾಟ್ರಕ್ಟ್ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.