ಕರ್ನಾಟಕ

karnataka

ETV Bharat / sukhibhava

ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರಲು ಈ ಐದು ಚಹಾ ಸೇವನೆ ಉತ್ತಮ ಪರಿಹಾರ!​​​ - ಆಹ್ಲಾದಕರ ವಾತಾವರಣ ಸೃಷ್ಟಿ ಮಾಡುವಲ್ಲಿ ಚಹಾ

ಅನೇಕರ ಯೋಚನಾ ಲಹರಿ ಹಾಗೂ ಆಹ್ಲಾದಕರ ವಾತಾವರಣ ಸೃಷ್ಟಿ ಮಾಡುವಲ್ಲಿ ಚಹಾ ಮಹತ್ವದ ಪಾತ್ರವಹಿಸುತ್ತದೆ. ಇಂತಹ ಚಹಾದಲ್ಲಿ ಹಲವು ಔಷಧ ಗುಣಗಳಿದ್ದು, ಅವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನೂ ಒದಗಿಸಿ ಕೊಡಬಹುದು.

ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರಲು ಈ ಐದು ಚಹಾ ಬೆಸ್ಟ್​​​
these-five-teas-are-best-for-keeping-body-and-mind-healthy

By

Published : Jan 24, 2023, 12:12 PM IST

ನವದೆಹಲಿ:ಜಗತ್ತಿನಾದ್ಯಂತ ಜನರಿಗೆ ಉತ್ತಮ ಆರೋಗ್ಯದ ಮಹತ್ವ ನಿಧಾನವಾಗಿ ಅರ್ಥವಾಗುತ್ತಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಅದರಲ್ಲೂ ಪ್ರಮುಖವಾಗಿ ವ್ಯಾಯಾಮ ಹಾಗೂ ಸದಾ ಕ್ರಿಯಾಶೀಲವಾಗಿರುವುದು ಅತೀ ಅವಶ್ಯಕವಾಗಿದೆ. ಇನ್ನು ಇದೇ ವೇಳೆ, ನಿತ್ಯ ಕಾಫಿ ಟೀ ಸೇರಿದಂತೆ ಪಾನೀಯಗಳ ಸೇವನೆ ಕೂಡ ಬಹಳಷ್ಟು ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರಿಗೂ ನಿತ್ಯ ತಮ್ಮ ನೆಚ್ಚಿನ ಕಾಫಿ ಅಥವಾ ಟೀ ಸೇವಿಸದೇ ದಿನ ಸಾಗಿಸುವುದೇ ಕಷ್ಟ ಎನ್ನುತ್ತಾರೆ. ಇಂತಹ ಪಾನೀಯಗಳಿಂದಲೂ ನಿಮ್ಮ ಆರೋಗ್ಯದ ಗುರಿಗಳನ್ನು ಸಾಧಿಸಬಹುದು ಎಂದರೆ ನೀವು ನಂಬಲೇಬೇಕು.

ನಿಮ್ಮ ತೂಕದ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಯಾವುದೇ ಅನಾರೋಗ್ಯ ಮತ್ತು ಒತ್ತಡಕ್ಕೆ ಒಳಗಾಗದಂತೆ ಇರಬೇಕು ಎಂಬುದು ಎಲ್ಲರ ಆಶಯ. ಟೀಯಲ್ಲಿನ ಅಂತಹ ಗುಣಗಳು ನಿಮಗೆ ಅತ್ಯವಶ್ಯಕವಾಗಿದ್ದು, ಇದು ನಿಮಗೆ ಸಾಕಷ್ಟು ನೆಮ್ಮದಿ ನೀಡುತ್ತದೆ. ಅಂತಹ ಚಹಾ ಯಾವುದು?, ಯಾವ ಚಹಾವನ್ನು ಆಯ್ಕೆ ಮಾಡಬೇಕು ಹಾಗೂ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುವುದು ಕೂಡಾ ಅಷ್ಟೇ ಅವಶ್ಯಕ. ಅದಕ್ಕೆ ಟೀ ಬ್ರಾಂಡ್​ ಸಿಇಒ ಮತ್ತು ಸಂಸ್ಥಾಪಕರಾದ ಬಾಲಾ ಸರ್ದಾ ಅವರು ಹೀಗೆ ಹೇಳುತ್ತಾರೆ. ಅವರು ಹೇಳುವ ಪ್ರಕಾರ ಈ ಐದು ಚಹಾಗಳ ಸೇವನೆ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ತರುತ್ತದೆಯಂತೆ.

ಅರಿಶಿಣ ಚಹಾ

ಅರಿಶಿಣ ಚಹಾ:ಕಡಿಮೆ ಕ್ಯಾಲೋರಿ ಜೊತೆ ಪೋಷಕಾಂಶ ಹೊಂದಿರುವ ಈ ಚಹಾದಲ್ಲಿ ಕೆಫಿನ್​​​​​ನ ಯಾವುದೇ ಅಂಶ ಇಲ್ಲದೇ ಇರುವುದರಿಂದ ಆರೋಗ್ಯಕ್ಕೆ ಅತ್ಯುತ್ತಮ. ಇದು ಹೃದಯದ ಆರೋಗ್ಯಕ್ಕೂ ಕೂಡಾ ಅತ್ಯಂತ ಲಾಭಕರ ಅಂಶವಾಗಿದೆ. 12ವಾರಗಳ ಇದನ್ನು ಸೇವಿಸುವುದರಿಂದ ಸಿಸ್ಟೊಲಿಕ್ ರಕ್ತದೊತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ. ಜೊತೆಗೆ ಇದು ಖಿನ್ನತೆ, ಮನಸ್ಸಿನ ಅಸ್ವಸ್ಥತೆಯನ್ನು ಕೂಡಾ ದೂರ ಮಾಡುತ್ತದೆ

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ: ಸಾಂಂಪ್ರದಾಯಿಕ ಔಷಧವಾಗಿರುವ ಇದು ಅನೇಕ ಆರೋಗ್ಯ ಸಮಸ್ಯೆ ನಿವಾರಣೆ ಮಾಡುತ್ತದೆ. ಇದು ರೋಗ ನಿವಾರಣೆ ಮತ್ತು ಕ್ಯಾನ್ಸರ್​ ಹಾಗೂ ಡಯಾಬೀಟಿಸ್​ಗೆ ಪರಿಣಾಮಕಾರಿಗೆಯಾಗಿದೆ ಎಂದು ಸಂಶೋಧಕರು ತಿಳಿಸುತ್ತಾರೆ. ಹರ್ಬಲ್​ ಔಷಧ ಗುಣಹೊಂದಿರುವ ಈ ಚಹಾ ಸೇವನೆ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿದೆ. ಇದನ್ನು ಸೇವಿಸುವುದರಿಂದ ಋತುಚಕ್ರದ ನೋವನ್ನು ಶಮನಮಾಡಬಹುದಾಗಿದೆ. ಊರಿಯುತ, ಕ್ಯಾನ್ಸರ್​ ತಡೆ, ಅಸ್ಥಿಮಜ್ಜೆ ತಡೆಗೆ ಈ ಕ್ಯಾಮೊಮೈಲ್​ ಚಹಾ ಅತ್ಯಂತ ಪರಿಣಾಮಕಾರಿ. ಈ ಚಹಾ ವಿಶ್ರಾಂತಿ ನೀಡುವ ಜೊತೆಗೆ ಉತ್ತಮ ನಿದ್ರೆಗೂ ಸಹಾಕಾರಿಯಾಗಿದೆ.

ದಾಸವಾಳದ ಚಹಾ

ದಾಸವಾಳದ ಚಹಾ: ರೋಗ ನಿರೋಧಕ ಗುಣ ಹೊಂದಿರುವ ಈ ಚಹಾ ತೂಕ ನಷ್ಟ, ಬ್ಯಾಕ್ಟೀರಿಯಾ ಬೆಳವಣಿಗೆಗೆ ತಡೆಗೆ ಸಹಾಯ ಮಾಡುತ್ತದೆ. ಜೊತೆಗೆ ಹೃದಯ ಮತ್ತು ಯಕೃತ್​ ಆರೋಗ್ಯಕ್ಕೆ ಉತ್ತಮವಾಗಿದೆ. ರಕ್ತದೊತ್ತಡ ತಡೆ ಜೊತೆಗೆ ಯಕೃತ್​ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.

ಊಲಾಂಗ್​ ಚಹಾ

ಊಲಾಂಗ್​ ಚಹಾ: ಇದು ಚೀನಿ ಸಂಪ್ರದಾಯಿಕ ಚಹಾ ಆಗಿದೆ. ಕ್ಯಾಮೆಲಿಯಾ ಸಿನೆನ್ಸಿಸ್​ ಗಿಡದಿಂದ ಇದನ್ನು ತಯಾರಿಸಲಾಗುತ್ತದೆ. ಇದೇ ಗಿಡದಿಂದ ಗ್ರೀನ್​ ಟೀಯನ್ನು ತಯಾರಿಸಲಾಗುವುದು. ಇದರಲ್ಲಿ ವಿಟಮಿನ್​ ಮತ್ತು ಮಿನರಲ್ಸ್​ ಇದೆ. ಇದು ಡಯಾಬೀಟಿಸ್​ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡುವ ಈ ಚಹಾ ತೂಕ ನಷ್ಟಕ್ಕೆ ಕೂಡ ಪರಿಣಾಮಕಾರಿಯಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ. ಮಿದುಳಿನ ಕ್ರಿಯೆ ಚುರುಕಿಗೆ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ.

ಶುಂಠಿ ಚಹಾ

ಶುಂಠಿ ಚಹಾ;ಬಹುತೇಕರ ನೆಚ್ಚಿನ ಚಹಾಗಳಲ್ಲಿ ಒಂದಾಗಿರುವ ಇದರಲ್ಲಿ ಯಾವುದೇ ರೀತಿಯ ಕೆಫೆನ್​ ಅಂಶ ಇರುವುದಿಲ್ಲ. ವಯಸ್ಸಾಗುವಿಕೆಗೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖವಾಗಿದೆ. ಜೊತೆಗೆ ರಕ್ತದೊತ್ತಡ, ನೋವು ಶಮನಕಾರಿಯಾಗಿದ್ದು, ದೇಶದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಫೈಬರ್​, ಪ್ರೋಟಿನ್​, ಸೋಡಿಯಂ, ಇದ್ದು ರೋಗ ಉತ್ಕರ್ಷಣ ಗುಣ ಹೊಂದಿದೆ.

ಇದನ್ನೂ ಓದಿ: ಕಡಿಮೆ ಕ್ಯಾಲೋರಿಯ ಈ 5 ಆಹಾರ ನಿಮ್ಮ ಡಯಟ್​ನಲ್ಲಿರಲಿ

ABOUT THE AUTHOR

...view details