ನವದೆಹಲಿ: ಡೇಟಿಂಗ್ ಆ್ಯಪ್ಗಳಲ್ಲಿ ಟೈರ್ 1 ಮತ್ತು ಟೈರ್ 2 ನಗರಗಳ 25 ರಿಂದ 35 ವರ್ಷದ 12 ಸಾವಿರ ಬಳಕೆದಾರರು ಇದ್ದಾರೆ ಎಂದು ಪ್ರಖ್ಯಾತ ಡೇಟಿಂಗ್ ಆ್ಯಪ್ವೊಂದು ತಿಳಿಸಿದೆ. ಈ ಡೇಟಿಂಗ್ ಆ್ಯಪ್ನಲ್ಲಿ ಒಬ್ಬ ಬಳಕೆದಾರರಿಗೆ ಮತ್ತೊಬ್ಬ ವ್ಯಕ್ತಿ ಪ್ರೊಫೈಲ್ ಇಷ್ಟವಾಗಲು ಮತ್ತು ಸಂಬಂಧವನ್ನು ಮುರಿದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಡೇಟಿಂಗ್ ಮತ್ತು ಫ್ರೆಂಡ್ಶಿಪ್ ಆ್ಯಪ್ ಸಮೀಕ್ಷೆ ನಡೆಸಿದೆ.
ಈ ಆ್ಯಪ್ಗಳು ಯುವಕರನ್ನು ಅರ್ಥೈಸಿಕೊಳ್ಳುವಿಕೆಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ವರದಿಯ ಅನುಸಾರ 30 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 24 ಪ್ರತಿಶತದಷ್ಟು ಜನರು, ಉದ್ಯೋಗ ಮತ್ತು ಶಿಕ್ಷಣದ ಮಟ್ಟವನ್ನು ಆಧಾರಿಸಿ ವ್ಯಕ್ತಿಯನ್ನು ತಿರಸ್ಕರಿಸುತ್ತಾರೆ. ಇಂತಹ ಪ್ರಮುಖ ವಿಷಯಗಳ ಹೊರತಾಗಿ ಅನೇಕ ವಿಚಾರಗಳಿಗೆ ಪ್ರೊಫೈಲ್ ತಿರಸ್ಕರಿಸುತ್ತಾರೆ ಎಂದು ಸಮೀಕ್ಷೆಯ ಸಂಶೋಧನೆಗಳಲ್ಲಿ ತಿಳಿಸಲಾಗಿದೆ.
ಡೇಟಿಂಗ್ ಆ್ಯಪ್ ಸಂಸ್ಥಾಪಕ ಮತ್ತು ಸಿಇಒ ರವಿ ಮಿಟ್ಟಲ್ ಪ್ರಕಾರ, ಕಳೆದ ತಿಂಗಳು ಸರಿ ಸುಮಾರು 24 ಮಿಲಿಯನ್ ಚಾಟ್ಗಳ ವಿನಿಮಯ ಆಗಿದೆ. ವಯಸ್ಸು ಮತ್ತು ನೈತಿಕ ಮೌಲ್ಯಗಳು ಡೇಟರ್ಗಳ ನಡುವೆ ಒಪ್ಪಂದಕ್ಕೆ ಬಾರದ ವಿಷಯಗಳಾಗಿದೆ. ಬಹುತೇಕ ಡೇಟರ್ಗಳು ಪ್ರೋಫೈಲ್ಗಳು ಸತ್ಯಾಂಶಗಳಿಂದ ಸರಿಯಾಗಿ ಇರಬೇಕು ಎಂದು ಬಯಸುತ್ತಾರೆ. ಇತ್ತೀಚೆಗೆ ನಾವು ರಿಯಲ್ ಟೈಮ್ ಡಾಟಾದ ವೈಶಿಷ್ಟವನ್ನು ಕೂಡ ಬಳಕೆದಾರರಿಗೆ ನೀಡಿದ್ದಾರೆ. ಈ ಮೂಲಕ ಅನುಮಾನ ವ್ಯಕ್ತವಾದ ಪ್ರೊಫೈಲ್ ವಿರುದ್ಧ ತಕ್ಷಣಕ್ಕೆ ಕ್ರಮಕ್ಕೆ ಮುಂದಾಗಲಾಗುವುದು
ನೈತಿಕ ಮೌಲ್ಯದಲ್ಲಿ ಸಾಮ್ಯತೆ ಅಗತ್ಯ: ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ ವಾಸಿಸುವ ಶೇ 34ರಷ್ಟು ಡೇಟರ್ಗಳು ನೈತಿಕ ಮೌಲ್ಯ ಮತ್ತು ಚಿಂತನೆ ಕುರಿತು ಗಮನ ಹರಿಸುತ್ತದೆ. ಸಂಬಂಧದ ಬಳಿಕ ಈ ಕುರಿತು ಪ್ರಶ್ನಿಸುವುದು ಏತಕ್ಕೆ ಎಂದು ಪ್ರಶ್ನಿಸಿದಾಗ ಅವರು ವಿಭಿನ್ನ ಚಿಂತನೆಗಳು ತೊಂದರೆ ಮತ್ತು ಬ್ರೇಕ್ ಅಪ್ಗೆ ಕಾರಣವಾಗುತ್ತದೆ ಎನ್ನುತ್ತಾರೆ. ಅಲ್ಲದೇ ನಿಮ್ಮ ಮೌಲ್ಯಗಳನ್ನು ಅವರು ಅರ್ಥ ಮಾಡಿಕೊಳ್ಳದಿರುವುದು ಅಥವಾ ಗೌರವ ನೀಡದರಿವುದು ಉತ್ತಮ ಅನುಭವವನ್ನು ನೀಡುವುದಿಲ್ಲ ಎನ್ನತ್ತಾರೆ ಅವರು.
ಹಸಿರು ಕಣ್ಣಿನ ಮಾನ್ಸ್ಟರ್ ಉತ್ತಮ: ಹೊಟ್ಟೆ ಉರಿಗೆ ಒಳಗಾಗುವುದು ಕೂಡ ಶೇ 37 ಡೇಟರ್ಗಳಲ್ಲಿ ಕಂಡು ಬರುತ್ತಿರುವುದಾಗಿ ತಿಳಿಸಲಾಗಿದೆ. 25 ರಿಂದ 30 ವರ್ಷದ ಉದ್ಯೋಗಿಗಳು ಕಾರಣ ರಹಿತವಾಗಿ ಸಂಬಂಧದಲ್ಲಿ ಹೊಟ್ಟೆ ಉರಿಗೆ ಒಳಗಾಗುವುದು ಕೂಡ ಗಂಭೀರ ಸಮಸ್ಯೆಯಾಗಿದೆ. ಇದರಿಂದ ನಂಬಿಕೆ ಮತ್ತು ಜೀವನ ನಿಯಂತ್ರಣ ತಪ್ಪುವ ಸಮಸ್ಯೆ ಕಾಣ ಬಹುದಾಗಿದೆ.