ಕರ್ನಾಟಕ

karnataka

By

Published : May 20, 2023, 3:22 PM IST

ETV Bharat / sukhibhava

ಬಿಸಿಲಿನ ಶಾಖದಲ್ಲಿ ತಂಪು ಅನುಭೂತಿ ನೀಡುವ ಕ್ಯಾಂಡಿಗಳಿವು

ಈ ಕ್ಯಾಂಡಿಗಳು ಮನೆಯಲ್ಲಿಯೇ ಸರಳವಾಗಿ ಮಾಡಿಕೊಳ್ಳಬಹುದು. ಉತ್ತಮ ವಿಟಮಿನ್​ ಮತ್ತು ಆ್ಯಂಟಿ ಆಕ್ಸಿಡೆಂಟ್​ ಇರುವ ಹಣ್ಣುಗಳ ಈ ಕ್ಯಾಂಡಿಗಳು ಎಲ್ಲ ವಯೋಮಾನದವರಿಗೆ ಅಚ್ಚುಮೆಚ್ಚು.

These are the candies that give a cool feeling in the heat of the sun
These are the candies that give a cool feeling in the heat of the sun

ಬೆಂಗಳೂರು:ಸೂರ್ಯ ನೆತ್ತಿ ಸುಡುತ್ತಿರುವಾಗ ತಣ್ಣಗೆ ಐಸ್​ಕ್ರೀಂ ಅಥವಾ ತಂಪು ಪಾನೀಯವನ್ನು ತಿನ್ನಲು ಮನಸು ಬಯಸುತ್ತದೆ. ಅದರಲ್ಲೂ ಕ್ಯಾಂಡಿಗಳು ಬಿಸಿಲಿನ ಬೇಗೆ ಓಡಿಸಲು ಅತ್ಯುತ್ತಮವಾಗಿರುತ್ತದೆ. ರುಚಿಕರ ತಾಜಾ ಹಣ್ಣಿನ ಕ್ಯಾಂಡಿಗಳು ನೀರಿನ ಅಂಶದ ಜೊತೆಗೆ ದೇಹವನ್ನು ತಣ್ಣಾಗಾಗಿಸುತ್ತದೆ. ಇನ್ನು ಈ ಕ್ಯಾಂಡಿಗಳು ಮನೆಯಲ್ಲಿಯೇ ಸರಳವಾಗಿ ಮಾಡಿಕೊಳ್ಳಬಹುದು. ಉತ್ತಮ ವಿಟಮಿನ್​ ಮತ್ತು ಆ್ಯಂಟಿ ಆಕ್ಸಿಡೆಂಟ್​ ಇರುವ ಹಣ್ಣುಗಳ ಈ ಕ್ಯಾಂಡಿಗಳು ಎಲ್ಲ ವಯೋಮಾನದವರಿಗೆ ಅಚ್ಚುಮೆಚ್ಚು.

ಮ್ಯಾಂಗೋ ಕ್ಯಾಂಡಿ

ಮ್ಯಾಂಗೋ ಕ್ಯಾಂಡಿ: ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿ ಸಿಗುವ ಹಿನ್ನೆಲೆ ಇದನ್ನು ತಯಾರಿಸಬಹುದು. ಈ ಹಣ್ಣು ರುಚಿಕರ ಆರೋಗ್ಯಕರವಾಗಿರುವ ಹಿನ್ನೆಲೆ ಮಕ್ಕಳು ಕೂಡ ಇಷ್ಟಪಟ್ಟು ಸವಿಯುತ್ತಾರೆ. ಮಾವಿನ ಈ ರುಚಿಕರ ಕ್ಯಾಂಡಿ ಮಾಡುವ ವಿಧಾನ ಕೂಡ ಸುಲಭವಾಗಿದ್ದು, ಮನ ತಣಿಸುತ್ತದೆ. ಅಧಿಕ ರಕ್ತದೊತ್ತಡ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕಲ್ಲಂಗಡಿ ಕ್ಯಾಂಡಿ

ಕಲ್ಲಂಗಡಿ ಕ್ಯಾಂಡಿ: ಬೇಸಿಗೆಯ ಬೇಗೆ ಓಡಿಸುವ ಜೊತೆಗೆ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ಇದು ಕಾಡುತ್ತದೆ. ಕಲ್ಲಂಗಡಿಯಲ್ಲಿ ಶೇ 92ರಷ್ಟು ಪ್ರತಿಶತ ನೀರಿನಾಂಶ ಇರುವ ಹಿನ್ನಲೆ ಇದು ಈ ಕಾಲಮಾನಕ್ಕೆ ಹೆಚ್ಚು ಸೂಕ್ತವಾಗುತ್ತದೆ. ರುಚಿಕರ ಈ ಕ್ಯಾಂಡಿಗಳು ಕೂಡ ಬಾಯಲ್ಲಿ ನೀರಿರುವಂತೆ ಮಾಡುತ್ತದೆ. ಇದರಲ್ಲಿ ವಿಟಮಿನ್​ ಎ ಅಂಶ ಹೆಚ್ಚು ಇದ್ದು, ಆ್ಯಂಟಿ ಆಕ್ಸಿಡೇಂಟ್​ ಗುಣಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ರಕ್ತದೊತ್ತಡ ನಿಯಂತ್ರಿಸುವ ಜೊತೆಗೆ ಹೃದಯ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಸಹಾಯ ಮಾಡುತ್ತದೆ.

ಸ್ಟ್ರಾಬೆರಿ ಕ್ಯಾಂಡಿ

ಸ್ಟ್ರಾಬೆರಿ ಕ್ಯಾಂಡಿ: ಸಮೃದ್ದ ಪೋಷಕಾಂಶವಾಗಿರುವ ಸ್ಟ್ರಾಬೆರಿಗಳ ಕ್ಯಾಂಡಿಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಸರಳವಾಗಿ ಬೇಗವಾಗಿ ರುಚಿಕರವಾದ ಕ್ಯಾಂಡಿಗಳು ತಯಾರಿಸಬಹುದು. ಊರಿಯುತ ನಿವಾರಣೆ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಈ ಸ್ಟ್ರಾಬೆರಿಗೆ ಇದೆ. ಇದರಲ್ಲಿನ ಪಾಲಿಪೆನಲ್​ ಹಲವು ರೋಗಗಳ ವಿರುದ್ಧ ಹೋರಾಡುತ್ತದೆ.

ನಿಂಬೆ ಕಿವಿ

ನಿಂಬೆ ಕಿವಿ: ಹುಳಿ ಸಿಹಿ ಮಿಶ್ರಣಗಳ ರುಚಿಗಳು ಈ ಬೇಸಿಗೆ ಬಿಸಿಯಲ್ಲಿ ಇನ್ನಷ್ಟು ಕಡಿಮೆ ಮಾಡುವಂತೆ ಮಾಡುತ್ತದೆ. ನಿಂಬೆ ರಸ, ಸಕ್ಕರೆ, ಕಿವಿ ಹಣ್ಣನ್ನು ನೀರಿನೊಂದಿಗೆ ಚೆನ್ನಾಗಿ ಬೆರಸಿ ಅದನ್ನು ಫ್ರಿಜ್​ ಮಾಡಿ ಸವಿಯಬಹುದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚಯಪಯನ ವೃದ್ಧಿ ಮಾಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಇದರ ಮತ್ತೊಂದು ಪ್ರಮುಖ ಗುಣ ಎಂದರೆ, ತಕ್ಷಣಕ್ಕೆ ಇದು ಶಕ್ತಿ ಮತ್ತು ಮೂಡ್​​ ರಿಫ್ರೇಶ್​ ಮಾಡುವಲ್ಲಿ ಸಹಾಯ ಮಾಡುತ್ತದೆ.

ಕಿತ್ತಳೆ

ಕಿತ್ತಳೆ: ಕ್ಯಾಂಡಿಗಳಲ್ಲಿ ಅತ್ಯಂತ ಜನಪ್ರಿತೆ ಹೊಂದಿರುವ ಕ್ಯಾಂಡಿ ಅದು ಕಿತ್ತಳೆ. ಇದನ್ನು ಕೂಡ ಸುಲಭವಾಗಿ ಮಾಡಬಹುದಾಗಿದೆ. ಇದು ಕೂಡ ಹುಳಿ-ಸಿಹಿ ಮಿಶ್ರಣದ ಅನುಭೂತಿ ಹೊಂದಿದ್ದು, ಇದರಲ್ಲಿನ ವಿಟಮಿನ್​ ಸಿ ಬಿಸಿಲಿನ ವಿರುದ್ಧ ಹೋರಾಡಲು ಚೇತರಿಕೆ ನೀಡುತ್ತದೆ. ಕೋಶಗಳು ಹಾನಿಯಾಗದಂತೆ ತಡೆಯುತ್ತದೆ. ರಕ್ತ ಹೀನತೆ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೀಟಾಣುಗಳ ವಿರುದ್ಧ ಹೋರಾಟ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಸವಿಯಲೇ ಬೇಕು ಈ 8 ಮಾವಿನ ರುಚಿ!

ABOUT THE AUTHOR

...view details