ಹೈದರಾಬಾದ್: ಚಳಿಗಾಲದಲ್ಲಿ ಆರೋಗ್ಯಯುತ ಕೂದಲು ನಿರ್ವಹಣೆ ಮಾಡುವುದು ಕೊಂಚ ಸವಾಲಿನ ಕೆಲಸ. ಈ ಋತುಮಾನದಲ್ಲಿ ಕೂದಲು ಎಣ್ಣೆ ಅಂಶವನ್ನು ಕಳೆದುಕೊಂಡು ನಿಸ್ತೇಜವಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಅಗತ್ಯ. ಇವು ಸರಿಯಾದ ಎಣ್ಣೆ ಅಂಶದಿಂದ ಲಭ್ಯವಾಗಿದೆ. ವಿವಿಧ ಎಣ್ಣೆಗಳು ಕೂದಲಿಗೆ ವಿವಿಧ ಪ್ರಯೋಜನವನ್ನು ನೀಡಿ ಪರಿಣಾಮ ಬೀರುತ್ತದೆ. ಈ ಎಣ್ಣೆಗಳ ಪ್ರಯೋಜನ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿದೆ. ಅಂತಹ ಪ್ರಮುಖ ಐದು ಎಣ್ಣೆಗಳು ಇಲ್ಲಿದ್ದು, ಇವು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಕೊಬ್ಬರಿ ಎಣ್ಣೆ: ಕೊಬ್ಬರಿ ಪ್ರೋಟಿನ್ ಮತ್ತು ಮಾಶ್ಚರೈಸರ್ ಕಳೆದುಕೊಂಡಾಗ ಅದಕ್ಕೆ ಕೊಬ್ಬರಿ ಎಣ್ಣೆ ಬಳಕೆ ಅಗತ್ಯ. ಇದರಲ್ಲಿನ ಆ್ಯಂಟಿ ಬ್ಯಾಕ್ಟಿರಿಯಲ್ ಅಂಶಗಳು ಬುಡಕ್ಕೆ ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯನ್ನು ಕೂದಲು ಮತ್ತು ಬುಡಕ್ಕೆ ಹಚ್ಚುವ ಮೊದಲು ಅದನ್ನು ಚೆನ್ನಾಗಿ ಕಾಯಿಸಿ ಹಚ್ಚಬೇಕು ಬಳಿಕ 30 ನಿಮಿಷ ಅಥವಾ ರಾತ್ರಿ ಇಡೀ ಬಿಟ್ಟು ಬಳಿಕ ತಲೆ ಸ್ನಾನ ಮಾಡಿ.
ಅರ್ಗನ್ ಎಣ್ಣೆ: ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಪ್ರಮಾಣ ಹೆಚ್ಚಿರುತ್ತದೆ. ಇದು ಕೂದಲನ್ನು ಹೈಡ್ರೇಟ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಕೂದಲನ್ನು ಮೃದುವಾಗಿಸುತ್ತದೆ. ಕೂದಲಿಗೆ ಕಂಡಿಷನರ್ ರೀತಿಯಾಗಿ ಕೆಲಸ ಮಾಡುತ್ತದೆ.