ಕರ್ನಾಟಕ

karnataka

ಹುಟ್ಟು ಅಂಗವೈಕಲ್ಯದಿಂದ ಹೆಚ್ಚುತ್ತಿರುವ ಸಾವು.. ನಿಯಂತ್ರಣಕ್ಕೆ ಮುಂದಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಕರೆ

ಹುಟ್ಟು ಅಂಗವೈಕಲ್ಯದಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ - ಇದನ್ನು ನಿಯಂತ್ರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು- ವಿಶ್ವದ ರಾಷ್ಟ್ರಗಳಿಗೆ ಡಾ. ಪೂನಮ್​ ಖೇತ್ರಪಾಲ್​ ಕರೆ

By

Published : Mar 2, 2023, 3:18 PM IST

Published : Mar 2, 2023, 3:18 PM IST

the-world-health-organization-on-world-birth-defects-day
the-world-health-organization-on-world-birth-defects-day

ನವದೆಹಲಿ: ಹುಟ್ಟು ಅಂಗವೈಕಲ್ಯದಿಂದ ಬಳಲುವ ಮಕ್ಕಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಇದೇ ಕಾರಣಕ್ಕೆ ಮಾರ್ಚ್​ 2ನ್ನು ಜಾಗತಿಕ ಹುಟ್ಟು ಅಂಗವೈಕಲ್ಯ ದಿನವಾಗಿ ಆಚರಿಸಲಾಗುತ್ತದೆ. ಈ ಮೂಲಕ ಜಗತ್ತಿನ ಎಲ್ಲಾ ದೇಶಗಳು ಈ ಸಂಬಂಧ ಗಮನ ಹರಿಸಿ, ತಾಯಂದಿರ ಆರೋಗ್ಯ ಮತ್ತು ಚಿಕಿತ್ಸೆಗೆ ಒತ್ತು ನೀಡುವಂತೆ ಸೂಚನೆ ನೀಡುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾ ದೇಶಗಳಲ್ಲಿ ಗರ್ಭಿಣಿಯರಲ್ಲಿ ಮಗುವಿನ ರಚನಾತ್ಮಕ ಅಥವಾ ಕ್ರಿಯಾತ್ಮಕ ತೊಂದರೆಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ನಿರ್ವಹಿಸಲು ಮತ್ತು ಆರೈಕೆ ಮಾಡಲು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಕರೆ ನೀಡಿದ್ದಾರೆ.

ಶಿಶು ಮರಣ ಸಂಖ್ಯೆಯಲ್ಲಿ ಪ್ರಮುಖ ಕಾರಣ:ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಶಿಶು ಮರಣ ಪ್ರಮಾಣದಲ್ಲಿ ಹುಟ್ಟು ಅಂಗವೈಕಲ್ಯ ಮೂರನೇ ಸಾಮಾನ್ಯ ಕಾರಣವಾಗಿದೆ. 2010 ಮತ್ತು 2019ರಲ್ಲಿ ಹುಟ್ಟು ಅಂಗವೈಕಲ್ಯದಿಂದ ಮಕ್ಕಳು ಸಾವನ್ನಪ್ಪುವ ಸಂಖ್ಯೆಯಲ್ಲಿ ಸಾವನ್ನಪ್ಪುವ ನವಜಾತ ಶಿಶುಗಳ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇದರ ಪ್ರಮಾರ 6.2 ರಿಂದ 9.2 ಆಗಿದೆ. ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ಹುಟ್ಟು ಅಂಗವೈಕಲ್ಯತೆಯಿಂದ ಶೇ 20ರಷ್ಟು ಮಕ್ಕಳು ಸಾವನ್ನಪ್ಪುತ್ತಾರೆ. 2019ರಲ್ಲಿ ಈ ಪ್ರದೇಶದಲ್ಲಿ 117000 ಸಾವಿಗೆ ಇದು ಕಾರಣವಾಗಿದೆ. ಇದು ಜಾಗತಿಕವಾಗಿ ಶೇ 22ರಷ್ಟು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

2014ರಿಂದ ಈ ಸಂಬಂಧ ಜನರಿಗೆ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಅನೇಕ ಕ್ರಮಗಳಿಗೆ ಮುಂದಾಯಿತು. ನಿರ್ದಿಷ್ಟ ಗುರಿಯ ಮೂಲಕ ಗರ್ಭಿಣಿ ಹಂತದಲ್ಲೇ ಪತ್ತೆ, ನಿರ್ವಹಣೆ ಮಾಡುವ ಮೂಲಕ ನವಜಾತ ಶಿಶು ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲಾಗಿದೆ. ಆಸ್ಪತ್ರೆಗಳ ಸಹಾಯದಿಂದಾಗಿ ಮಕ್ಕಳ ಅಂಗವೈಕಲ್ಯವನ್ನು ಪತ್ತೆ ಮಾಡಿ ತಡೆಯಲು ಮತ್ತು ನಿರ್ವಹಣೆ ಮಾಡಲು ದೇಶಗಳು ಕಾರ್ಯ ಯೋಜನೆಯನ್ನು ಜಾರಿಗೆ ತರಲು ಎಲ್ಲಾ ಸದಸ್ಯರು ಮುಂದಾಗಬೇಕು ಎಂದು ಡಾ. ಪೂನಮ್​ ತಿಳಿಸಿದ್ದಾರೆ.

ಆಗ್ನೇಯ ಏಷ್ಯಾ ದೇಶಗಳಲ್ಲಿ ಅರಿವಿನ ಯತ್ನ: ಬಾಂಗ್ಲಾದೇಶ, ಭೂತನ್​, ಭಾರತ, ಮಾಲ್ಡೀವ್ಸ್​, ಮಯಾನ್ಮಾರ್​ ಮತ್ತು ನೇಪಾಳದ ಆರು ದೇಶದ ಸದಸ್ಯರು, ವಿಶ್ವರೋಗ್ಯ ಸಂಸ್ಥೆ ಅಭಿವೃದ್ಧಿ ಪಡಿಸಿದ ಮಕ್ಕಳ ಅಂಗವೈಕಲ್ಯ ಪತ್ತೆ ಆನ್​ಲೈನ್​ ಡೇಟಾಬೇಸ್​ ಅನ್ನು ಬೆಂಬಲಿಸಬೇಕು ಎಂದು ತಿಳಿಸಿದೆ. ಎಲ್ಲಾ ದೇಶಗಳು ಬಾಲಕಿಯರಿಗೆ ರೂಟಿನ್​ ರುಬೆಲ್ಲಾ ಚುಚ್ಚುಮದ್ದು ನೀಡಲು ಮುಂದಾಗಬೇಕು. ಇದರಿಂದ ನಾವಿನ ಶೇ 83ರಷ್ಟು ಪ್ರಕರಣ ತಡೆಯಲು ಸಾಧ್ಯ. ಶ್ರೀಲಂಕಾ ಮತ್ತು ಮಾಲ್ಡೀವ್ಸ್​ನಲ್ಲಿ ಈ ರುಬೆಲ್ಲಾವನ್ನು ತೆಗೆದು ಹಾಕಲಾಗಿದೆ. ಬಾಂಗ್ಲಾದೇಶ, ಭೂತನ್​, ನೇಪಾಳ ಮತ್ತು ಟಿಮೊರ್​ ಲೆಸ್ತೆಯಲ್ಲಿ ಈ ರುಬೆಲ್ಲಾ ಸಿಂಡ್ರೋಮ್​ ಅನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.

ಈ ಆರು ದೇಶಗಳಲ್ಲಿ ಫೋಲಿಕ್​ ಆಸಿಡ್​ ಪೂರಕಗಳನ್ನು ಜಾರಿಗೆ ತರಬೇಕು. ಗೋಧಿ ಹಿಟ್ಟು, ವಿಟಮಿನ್​ ಬಿ 12 ಮತ್ತು ಐರನ್​ ಹೊಂದಿರುವ ಫೋಲಿಕ್​ ಆಸಿಡ್​ ನೀಡಬೇಕು. ಗರ್ಭಿಣಿಯರಿಗೆ ಹಾನಿಕಾರಕ ಚಿಕಿತ್ಸೆಗಳು, ಎಕ್ಸ್​ ರೇ, ಟೊಬೊಕೊ ಉತ್ಪನ್ನ, ಆಲ್ಕೋಹಾಲ್​ ಮತ್ತು ಡ್ರಗ್ಸ್​​ ಅನ್ನು ಸೇವಿಸದಂತೆ ಅವರೊಂದಿಗೆ ಸಮಾಲೋಚನೆ ನಡೆಸಬೇಕು ಎನ್ನುತ್ತಾರೆ ಡಾ ಸಿಂಗ್​​.

ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ‌ ಪ್ರಥಮ ಬಾರಿಗೆ ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ABOUT THE AUTHOR

...view details