ಕರ್ನಾಟಕ

karnataka

ETV Bharat / sukhibhava

ಡಯಟ್​ ಸೋಡಾದಲ್ಲಿನ ಸಿಹಿಕಾರಕಗಳು ಕ್ಯಾನ್ಸರ್​ಗೆ ಕಾರಣವಾಗುವ ಏಜೆಂಟ್​ಗಳಾಗಿವೆ; ವರದಿ - ವಿಶ್ವ ಆರೋಗ್ಯ ಸಂಸ್ಥೆ

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಕೋಕಾ ಕೋಲಾ ಡಯಟ್ ಸೋಡಾಗಳಿಂದ ಚೂಯಿಂಗ್ ಗಮ್ ಉತ್ಪನ್ನಗಳಲ್ಲಿ ಬಳಸಲಾಗುವ ಆಸ್ಪರ್ಟೆಮ್​​ ಕ್ಯಾನ್ಸರ್​ ಜನಕ ಎಂದು ಪಟ್ಟಿ ಮಾಡುವ ನಿರೀಕ್ಷೆ ಇದೆ.

The sweeteners in diet soda are cancer-causing agents
The sweeteners in diet soda are cancer-causing agents

By

Published : Jun 30, 2023, 10:46 AM IST

ನವದೆಹಲಿ: ಆಸ್ಪರ್ಟೆಮ್​ ಆಹಾರ ಮತ್ತು ಪಾನೀಯಗಳಲ್ಲಿ ಕೃತಕ ಸಿಹಿಕಾರಕವಾಗಿ ಬಳಕೆ ಮಾಡಲಾಗುವುದು. ಆದರೆ, ಈ ಆಸ್ಪರ್ಟೆಮ್​ ಕ್ಯಾನ್ಸರ್​ ಉಂಟು ಮಾಡುವ ಏಜೆಂಟ್​ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಕೋಕಾ ಕೋಲಾ ಡಯಟ್ ಸೋಡಾಗಳಿಂದ ಚೂಯಿಂಗ್ ಗಮ್ ಉತ್ಪನ್ನಗಳಲ್ಲಿ ಬಳಸಲಾಗುವ ಆಸ್ಪರ್ಟೆಮ್​​ ಕ್ಯಾನ್ಸರ್​ ಜನಕ ಎಂದು ಪಟ್ಟಿ ಮಾಡುವ ನಿರೀಕ್ಷೆ ಇದೆ.

ಅಧ್ಯಯನದ ವರದಿ: ಈ ಕುರಿತು ವರದಿಯನ್ನು ಈ ತಿಂಗಳ ಆರಂಭದಲ್ಲಿ ಅಂತಿಮ ಮಾಡಲಾಗಿದ್ದು, ಈ ವರದಿ ಅಧಾರದ ಮೇಲೆ ಆಸ್ಪರ್ಟೆಮ್​ ವಿರುದ್ಧ ಸಾಕ್ಷ್ಯಧಾರಗಳು ಆಧಾರಿಸಿದೆ. ಜೆಇಸಿಎಫ್​ಎ ಜೊತೆಗೆ ರಾಷ್ಟ್ರೀಯ ನಿಯಂತ್ರಕ ಕೂಡ ಈ ಸಂಬಂಧ ಶಿಫಾರಸು ಮಾಡಿದೆ. ಐಎಆರ್​ಸಿ ಈ ಸಂಬಂದ ಜೂನ್​ನಲ್ಲಿ 1300 ಅಧ್ಯಯನಗಳನ್ನು ಪರಿಶೀಲನೆ ನಡೆಸಿದೆ.

ಈ ಫಲಿತಾಂಶಗಳನ್ನು ಗೌಪ್ಯವಾಗಿ ಇರಿಸಲಾಗಿದೆ ಎಂದು ಎಐಆರ್​ಸಿ ವಕ್ತಾರರು ತಿಳಿಸಿದ್ದಾರೆ. ಆದಾಗ್ಯೂ, ಈ ಸಂಶೋಧನೆ ರ್ಸಿನೋಜೆನೆಸಿಟಿಯನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಹೆಜ್ಜೆಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಈ ಹಿಂದೆ ಐಎಆರ್​ಸಿ ಗ್ಲೈಫೋಸೇಟ್ ಸಂಬಂಧ ಎಚ್ಚರಿಕೆ ಗಂಟೆ ಬಾರಿ ಈ ಬಗ್ಗೆ ತಿಳಿಸಿತ್ತು. 2015ರಲ್ಲಿ ಈ ಕುರಿತು ನ್ಯಾಯಾಲಯ ತೀರ್ಪು ಕೂಡ ಪ್ರಕಟಿಸಿತು. ಗ್ಲೈಫೋಸೇಟ್ ಪರ್ಯಾಯ ಬಳಕೆ ಮಾಡುವಂತೆ ಸೂಚಿಸಲಾಯಿತು.

ಐಎಆರ್​ಸಿ ಬಗ್ಗೆ ಅಪಸ್ವರ: ಐಎಆರ್​ಸಿ ಆಹಾರ ಸುರಕ್ಷತೆ ಮಂಡಳಿ ಅಲ್ಲ. ಇದರ ವಿಮರ್ಶೆಯು ವೈಜ್ಞಾನಿಕವಾಗಿ ಸಮಗ್ರವಾಗಿಲ್ಲ. ವ್ಯಾಪಕವಾಗಿ ಅಪಖ್ಯಾತಿ ಪಡೆದ ಸಂಶೋಧನೆಯ ಮೇಲೆ ಆಧಾರಿತವಾಗಿದೆ ಎಂದು ಇಂಟರ್ನ್ಯಾಷನಲ್ ಸ್ವೀಟೆನರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಅಲ್ಲದೇ, ಇವರು ಆಹಾರ ಮತ್ತು ಪಾನೀಯಗಳಲ್ಲಿ ದಶಕಗಳಿಂದ ಬಳಕೆಯಾಗುತ್ತಿರುವ ಆಸ್ಪರ್ಟೆಮ್​ ಅನ್ನು ಸಮರ್ಥಿಸಿಕೊಂಡಿದ್ದಾರೆ. 2022ರಲ್ಲಿ ಫ್ರಾನ್ಸ್​ನ ಅಧ್ಯಯನವೊಂದು ಕೂಡ ಆಸ್ಪರ್ಟೆಮ್​ ಸೇರಿದಂತೆ ಕೃತಕ ಸಿಹಿಕಾರಕಗಳು ಹೆಚ್ಚಿನ ಕ್ಯಾನ್ಸರ್​ ಅಪಾಯವನ್ನು ಹೊಂದಿದೆ ಎಂದು ತಿಳಿಸಿತು. ಈ ಸಂಬಂಧ 1,00,00 ವಯಸ್ಕರನ್ನು ಅಧ್ಯಯನ ನಡೆಸಿತ್ತು.

ಐಎಆರ್​​ಸಿ ಆಪ್ತವಾಗಿರುವ ಮೂಲದ ಪ್ರಕಾರ, ಆಸ್ಪರ್ಟೆಮನ್​ ಕ್ಯಾನ್ಸರ್​ಕಾರಕ ಎಂದು ಪಟ್ಟಿ ಮಾಡುವುದು. ಹೆಚ್ಚಿನ ಸಂಶೋಧನೆಯನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಇದೇ ವೇಳೆ ಐಎಆರ್​ಸಿ ಪಾತ್ರದ ಕುರಿತು ಕೂಡ ಮತ್ತೊಮ್ಮೆ ಚರ್ಚೆ ಮೂಡಿಸಿದೆ. ಕಳೆದ ತಿಂಗಳು, ವಿಶ್ವ ಆರೋಗ್ಯ ಸಂಸ್ಥೆ ತೂಕ ನಿಯಂತ್ರಣಕ್ಕಾಗಿ ಸಕ್ಕರೆಯೇತರ ಸಿಹಿಕಾರಕಗಳನ್ನು ಬಳಸದಂತೆ ಗ್ರಾಹಕರಿಗೆ ಸಲಹೆ ನೀಡುವ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಭಾರತೀಯ ಆರೋಗ್ಯ ತಜ್ಞರ ಪ್ರಕಾರ, ಸಕ್ಕರೆಯೇತರ ಸಿಹಿಕಾರಕಗಳನ್ನು ಮಿತವಾಗಿ ಬಳಸುವುದರಿಂದ ಮಧುಮೇಹ ಇರುವವರಲ್ಲಿ ಹಾನಿಯಾಗುವುದಿಲ್ಲ.

ಆತಂಕದೊಂದಿಗೂ ಸಂಬಂಧ:ಕೃತಕ ಸಿಹಿಕಾರಕವಾದ ಅಸ್ಪರ್ಟಮೆ ಆತಂಕದೊಂದಿಗೆ ಸಂಬಂಧ ಹೊಂದಿದೆ ಎಂದು ಪ್ಲೊರಿಡಾ ಸ್ಟೇಟ್​ ಯುನಿವರ್ಸಿಟಿ ಕಾಲೇಜ್​ ಆಫ್​ ಮೆಡಿಸಿನ್​ ಸಂಶೋಧನೆ ನಡೆಸಿತು. 5000 ಡಯಟ್​ ಸರಕು ಮತ್ತು ಪಾನೀಯಗಳನ್ನು ಹೊಂದಿರುವ ಅಸ್ಪರ್ಟಮೆಯನ್ನು ಇಲಿಗಳ ವರ್ತನೆಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಅಸ್ಪರ್ಟಮೆ ಸೇವಿಸಿದ ಇಲಿಗಳಲ್ಲಿ ಉಂಟಾಗುವ ಆತಂಕ, ಸಿಹಿಕಾರಕದ ಪರಿಣಾಮ ಎರಡೂ ತಲೆಮಾರುಗಳವರೆಗೆ ವಿಸ್ತರಿಸಲ್ಪಟ್ಟಿದೆ ಎಂಬ ವಿಚಾರವನ್ನು ಸಂಶೋಧನೆಯಲ್ಲಿ ತಿಳಿಸಿತು.

ಇದನ್ನೂ ಓದಿ: ಸ್ವಯಂ ನಿರೋಧಕ ಕಾಯಿಲೆಯ ಚಿಕಿತ್ಸಾ ಗುಣಹೊಂದಿದೆ ಕೃತಕ ಸಿಹಿಕಾರಕಗಳು

ABOUT THE AUTHOR

...view details