ಕರ್ನಾಟಕ

karnataka

ETV Bharat / sukhibhava

ಗರ್ಭಿಣಿಯರ ಮೇಲಿನ ಒತ್ತಡದಿಂದ ಮಕ್ಕಳ ಜೀವಕೋಶಗಳಿಗೆ ಹಾನಿ - ರ್ಭಿಣಿ ಮಹಿಳೆ ಆರೋಗ್ಯದ ಮೇಲೆ ಒತ್ತಡ

ಗರ್ಭಾವಸ್ಥೆಯಲ್ಲಿ ಉಂಟಾಗುವ ಕೆಲಸ ಕಳೆದುಕೊಳ್ಳುವುದು. ಬಿಲ್​ ಪಾವತಿ ಸಾಧ್ಯವಾಗದಿರುವಂತಹ ಹಣಕಾಸಿನ ಒತ್ತಡಗಳು ಬಿಳಿ ಮಕ್ಕಳ ಜೀವ ಕೋಶದ ಮೇಲೆ ಪರಿಣಾಮ ಬೀರಿದೆ. ಆದರೆ, ಕಪ್ಪು ಮಕ್ಕಳ ಮೇಲೆ ಪರಿಣಾಮ ಬೀರವುದಿಲ್ಲ.

ಗರ್ಭಿಣಿಯರಲ್ಲಿ ಉಂಟಾಗುವ ಒತ್ತಡ ಮಕ್ಕಳ ಜೀವಕೋಶಗಳ ಮೇಲೆ ಬೀರಲಿದೆ ಪರಿಣಾಮ
The stress caused in pregnant women will affect the cells of the children

By

Published : Dec 6, 2022, 5:26 PM IST

ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡ ಮಗುವಿನ ಜೀವಕೋಶ ವಯಸ್ಸಾಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ಬಯಲಾಗಿದೆ. ಸೈಕಲಾಜಿಕ್​ ಮೆಡಿಸಿನ್​ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನಕ್ಕೆ 100 ಬಿಳಿ ಮತ್ತು 112 ಕಪ್ಪು ಮಹಿಳೆಯರನ್ನು ಒಳಪಡಿಸಲಾಗಿತ್ತು. ಈ ವೇಳೆ ಗರ್ಭಿಣಿ ಮಹಿಳೆಯ ಆರೋಗ್ಯದ ಮೇಲೆ ಬೀರುವ ಒತ್ತಡ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಅಧ್ಯಯನ ನಡೆದಿದೆ.

ಈ ಫಲಿತಾಂಶ ಅಚ್ಚರಿಗೂ ಕಾರಣವಾಗಿದೆ. ಗರ್ಭಾವಸ್ಥೆಯಲ್ಲಿ ಕೆಲಸ ಕಳೆದುಕೊಳ್ಳುವುದು, ಬಿಲ್​ ಪಾವತಿ ಸಾಧ್ಯವಾಗದಿರುವಂತಹ ಹಣಕಾಸಿನ ಒತ್ತಡಗಳು ಬಿಳಿ ಮಕ್ಕಳ ಜೀವಕೋಶದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆದರೆ, ಕಪ್ಪು ಮಕ್ಕಳ ಮೇಲೆ ಇದು ಪರಿಣಾಮ ಬೀರುವುದಿಲ್ಲ.

ಈ ಹಿಂದಿನ ಅಧ್ಯಯನದಲ್ಲಿ ಪೋಷಕರ ಒತ್ತಡವೂ ಶಾರ್ಟರ್​ ಆಫ್​ಸ್ಟ್ರಿಂಗ್​ ಟೆಲೊಮೊರ್ಸ್​ಗೆ ಸಂಬಂಧಿಸಿತ್ತು. ಆದರೆ, ಈ ಅಧ್ಯಯನ ಬಹುತೇಕ ಬಿಳಿ ತಾಯಂದಿರೊಂದಿಗೆ ಸಂಬಂಧಿಸಿತ್ತು. ಯುಸಿಎಸ್​ಎಫ್​ ಅಧ್ಯಯನವು ಸಮಾನ ಸಂಖ್ಯೆಯ ಬಿಳಿ ಮತ್ತು ಕಪ್ಪು ತಾಯಂದಿರನ್ನು ಒಳಗೊಂಡಿದೆ. ಗರ್ಭಾವಸ್ಥೆಗೆ ಮುನ್ನ, ಗರ್ಭಾವಸ್ಥೆಯಲ್ಲಿ ಮತ್ತು ಅವರ ಜೀವಿತಾವಧಿಯಲ್ಲಿ ಸಂಭವಿಸುವ ಒತ್ತಡಗಳು ಅವರ ಮಕ್ಕಳ ಟೆಲೋಮಿಯರ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸಿದೆ.

ಗರ್ಭಾವಸ್ಥೆಯ ವೇಳೆ ಉಂಟಾಗುವ ಒತ್ತಡದಿಂದ ಬಿಳಿ ಮಕ್ಕಳಲ್ಲಿ ಟೆಲೋಮಿಯರ್‌ ಪರಿಣಾಮ ಕಾಣಬಹುದಾಗಿದೆ. ವಯಸ್ಕರಲ್ಲಿ ಅಥವಾ ಜೀವನಾದ್ಯಂತ ಕಾಣುವುದಿಲ್ಲ. ವಿಚ್ಛೇದನ, ಪ್ರೀತಿಪಾತ್ರರ ಸಾವು ಹಣಕಾಸೇತರ ಒತ್ತಡಗಳು ಯಾವುದೇ ಟೆಲೋಮಿಯರ್‌ ಪರಿಣಾಮ ಹೊಂದಿರುವುದಿಲ್ಲ. ವರ್ಣಾಧರಿತವಾಗಿ ತಾಯಂದಿರ ಫಲಿತಾಂಶದಲ್ಲಿ ವ್ಯತ್ಯಾಸಕ್ಕೆ ಕಾರಣ ತಿಳಿದಿಲ್ಲ. ಸಂಶೋಧಕರು ಅನೇಕ ಸಾಧ್ಯತೆ ತಿಳಿಸುತ್ತಾರೆ. ಕಪ್ಪು ತಾಂಯಂದಿರಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.

ಪೋಷಕರ ಬೆಂಬಲ ಪ್ರಮುಖ: ಗರ್ಭಾವಸ್ಥೆಯ ಒತ್ತಡವು ಕಪ್ಪು ಮಕ್ಕಳ ಟೆಲೋಮಿಯರ್‌ದಲ್ಲಿ ಈ ಗರ್ಭಾವಸ್ಥೆ ಒತ್ತಡ ಹೇಗೆ ಪರುಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ, ತಾರತಮ್ಯ ಮತ್ತು ಸಾಂಸ್ಥಿಕ ವರ್ಣಭೇದದಂತಹ ಅಂಶಗಳು ಕಪ್ಪು ಮಹಿಳೆಯರ ವಿಶೇಷ ಒತ್ತಡಗಳು ಹಿಡಿದಿಡಲು ಸಾಧ್ಯವಾಗಿಲ್ಲ.

ಜನಾಂಗೀಯ ಆರೋಗ್ಯ ಅಸಮಾನತೆಗಳು ಮತ್ತು ಇತರ ಪ್ರಮುಖ ಗರ್ಭಧಾರಣೆಯ ಆರೋಗ್ಯದ ಫಲಿತಾಂಶಗಳಲ್ಲಿ ಒತ್ತಡದ ಪಾತ್ರವನ್ನು ನೀಡಲಾಗಿದೆ. ಉದಾಹರಣೆಗೆ, ಜನನ ತೂಕ ಮತ್ತು ಅಕಾಲಿಕ ಜನನ, ಈ ಪ್ರಮುಖ ಅವಧಿಯಲ್ಲಿ ಎಲ್ಲಾ ಮಹಿಳೆಯರನ್ನು ಬೆಂಬಲಿಸುವುದು ನಿರ್ಣಾಯಕವಾಗಿದೆ.

ಇದನ್ನೂ ಓದಿ: ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ಲಕ್ಷಣಗಳು ಕಾಲಾಂತರದಲ್ಲಿ ಬದಲು: ಅಧ್ಯಯನ

ABOUT THE AUTHOR

...view details