ಅತಿ ಹೆಚ್ಚಿನ ತಾಪಮಾನ ಹೃದಯ, ಮಿದುಳು, ಕಿಡ್ನಿ ಮತ್ತು ಸ್ನಾಯು ಸಮಸ್ಯೆಯಂತಹ ದೀರ್ಘಕಾಲದ ಪರಿಣಾಮ ಹೊಂದಿರುವ ಜನರಲ್ಲಿ ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿಲು ಹೆಚ್ಚಾದಂತೆ ನಮ್ಮ ದೇಹದಲ್ಲಿ ಹೆಚ್ಚಿನ ಶಾಖದಿಂದ ಹೃದಯಪಾರ್ಶ್ವವಾಯುಗೆ ಗುರಿ ಮಾಡುತ್ತದೆ. ಸಾಮಾನ್ಯವಾಗಿ ಅಧಿಕ ತಾಪಮಾನಕ್ಕೆ ದೇಹ ಒಡ್ಡಿಕೊಂಡಾಗ ಇದು ಹೆಚ್ಚಳವಾಗುತ್ತದೆ. ಬೇಸಿಗೆಯಲ್ಲಿ ಇದು ಸಾಮಾನ್ಯವಾಗಿದೆ.
ಬಿಸಿಲಿನ ಹವಾಮಾನದಿಂದ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುನಂತಹ ಪ್ರಕರಣಗಳು ಹೆಚ್ಚಾಗುತ್ತದೆ. ಹೃದಯಾಘಾತ ಮತ್ತು ಸ್ಟ್ರೋಕ್ ಹೃದಯ ಅಥವಾ ಮೆದುಳಿಗೆ ರಕ್ತದ ಸಾಮಾನ್ಯ ಹರಿವಿನಲ್ಲಿ ಅಡಚಣೆಗಳಿಂದ ಉಂಟಾಗುತ್ತದೆ. ಹೃದಯದ ಸಮಸ್ಯೆ ಹೊಂದಿರುವ ರೋಗಿಗಳು ಹೆಚ್ಚಿನ ಶಾಖದ ಪರಿಣಾಮಕ್ಕೆ ಒಳಗಾಗಬಹುದು.
ಮಿದುಳಿನ ಮೇಲೆ ಶಾಖದ ಪರಿಣಾಮ?:ಶಾಖಕ್ಕೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಕೇವಲ ಶಾಖದ ಪಾಶ್ವವಾಯುವಿನ ಅಪಾಯವನ್ನು ಹೊಂದಿರುವುದಿಲ್ಲ. ಇದು ಹೃದಯವನ್ನು ಅಪಾಯಕ್ಕೆ ದೂಡುತ್ತದೆ. ಶಾಖ ಹೃದಯದ ವ್ಯವಸ್ಥೆಯನ್ನು ಒತ್ತಡಕ್ಕೆ ಗುರಿಪಡಿಸಿ, ಕೆಲಸವನ್ನು ಕಷ್ಟಗೊಳಿಸುತ್ತದೆ. ಬಿಸಿಲುನ ಹವಾಮಾನದಿಂದ ನಮ್ಮ ಸಂಪೂರ್ಣ ದೇಹವೂ ಉಳಿದ ದಿನಗಳಿಗಿಂತ ಹೆಚ್ಚು ಕಷ್ಟಪಡುತ್ತದೆ. ಇದು ಹೃದಯ, ಶ್ವಾಸಕೋಶ ಮತ್ತು ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ.
ಶಾಖದ ಪಾರ್ಶ್ವವಾಯುವು ಮಿದುಳು ಮತ್ತು ಇನ್ನಿತರ ಅಂಗಾಂಗಳು ಊದಿಕೊಳ್ಳಲು ಕಾರಣವಾಗಬಹುದು. ಇದು ಶಾಶ್ವತ ಹಾನಿ ಮಾಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆ ಶಾಖದ ಪಾರ್ಶ್ವವಾಯು ಸಾಕಷ್ಟು ಮಾರಣಾಂತಿಕವಾಗಬಹುದು
ಹೀಟ್ ಸ್ಟ್ರೋಕ್ ಲಕ್ಷಣ:ಹೀಟ್ ಸ್ಟ್ರೋಕ್ ಅಥವಾ ಶಾಖದ ಪಾರ್ಶ್ವಾಯುವಿನಿಂದಾಗಿ ದೇಹದ ತಾಪಮಾನ ಹೆಚ್ಚಬಹುದು. ಮಾನಸಿಕ ಆರೋಗ್ಯ ಅಥವಾ ನಡುವಳಿಕೆ ಮೇಲೆ ಪರಿಣಾಮ ಬೀರಬಹುದು. ತಲೆತಿರುಗುವುದು. ಆಲಸ್ಯ, ಸ್ನಾಯು ಸೆಳೆತ, ವೇಗದ ಉಸಿರಾಟ, ದದ್ದು, ಬೆವರುವಿಕೆ ಅಥವಾ ತಲೆನೋವು ಕಾಣಿಸಬಹುದು. ಹೆಚ್ಚುವರಿಯಾಗಿ ಚರ್ಮ ಕೆಂಪಾಗುವುದು ಪಾದದ ಬಳಿಕ ಊತದಂತಹ ಲಕ್ಷಣ ಕಾಣಿಸಿಕೊಳ್ಳಬಹುದು. ಹೀಟ್ ಸ್ಟ್ರೋಕ್ನ ಪ್ರಮುಖ ಲಕ್ಷಣ ಎಂದರೆ ದೇಹದ ತಾಪಮಾನ 104 ಫ್ಯಾರನ್ಹಿಟ್ಗಿಂತ ಹೆಚ್ಚಾಗುವುದು.