ಟೋಕಿಯೋ( ಜಪಾನ್): ಕಳೆದ ನಾಲ್ಕು ತಿಂಗಳವರೆಗೆ ಕಡಿಮೆ ಪ್ರಮಾಣದಲ್ಲಿದ್ದ ಕೋವಿಡ್ ಸೋಂಕು ಇದೀಗ ದೇಶದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ದಾಖಲೆಯ ಕೋವಿಡ್ ಪ್ರಕರಣದ ರೋಗಿಗಳಲ್ಲಿ ಈ ಹಿಂದೆ ಕಂಡು ಬಂದಿದ್ದ ಸೋಂಕಿನ ಲಕ್ಷಣಗಳು ಗೋಚರವಾಗುವುದರ ಜೊತೆಗೆ ಹೊಸ ಕೋವಿಡ್ ಉಪತಳಿ ಪತ್ತೆಯಾಗಿದೆ. ಸದ್ಯ ಈ XBB.1.5 ವೈರಾಣು ಹೆಚ್ಚಿನ ಸೋಂಕು ಹರಡಿವಿಕೆಗೆ ಕಾರಣವಾಗುತ್ತಿದೆ ಎಂಬುದು ವರದಿ ಆಗಿದೆ. ಈ XBB ಸೋಂಕು ಭಾರತದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಇತ್ತೀಚೆಗೆ ಏರಿಕೆಯಾದ ಪ್ರಕಾರದಲ್ಲಿ XBB.1.5 ಮತ್ತು XBB.1.6 ಕಾರಣವಾಗಿದೆ. ಇನ್ಫ್ಲುಯೆಂಜ ವೈರಸ್ ಜೊತೆಗೆ ಋತುಮಾನದ ವೈರಸ್ಗಳು ಕೂಡ ಬಂದಿವೆ.
ಹೆಚ್ಚು ಪ್ರಸರಣ ಹೊಂದಿರುವ ಸೋಂಕು: ಇತ್ತೀಚಿನ ದಿನದಲ್ಲಿ ಕೋವಿಡ್ ಸೋಂಕು ಏರಿಕೆಗೆ ಈ XBB.1.5 ಸೋಂಕು ಕಾರಣವಾಗಿದೆ. SARS-CoV-2 ಓಮ್ರಿಕಾನ್ನ ಉಪತಳಿ XBB.1.5 ವೈರಸ್ ಹೆಚ್ಚು ರೂಪಾಂತರ ಹೊಂದಿದ್ದು, ಹೆಚ್ಚು ಸೋಂಕನ್ನು ತಗುಲಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಇನ್ಫೆಕ್ಷುಸ್ ಡಿಸೀಸ್ ಜರ್ನಲ್ ತಿಳಿಸಿದೆ. ಜಪಾನ್ನ ಯುನಿವರ್ಸಿಟಿ ಆಫ್ ಟೋಕಿಯೋದ ಸಂಶೋಧಕರು, ಈ ಅಧ್ಯಯನ ನಡೆಸಿದ್ದು, XBB.1.5 ಹೆಚ್ಚು ಉತ್ಪಾದನಾ ಸಂಖ್ಯೆ ಹೊಂದಿದ್ದು, XBB.1 ಗಿಂತ 1.2 ಹೆಚ್ಚಿದೆ ಎಂದು ತಿಳಿಸಿದ್ದಾರೆ.
XBB.1 ಪೋಷಕ ತಳಿಯು XBB.1.5 ತಳಿಯು ಅತಿ ಹೆಚ್ಚು ಸೋಂಕು ಜನರಿಗೆ ಪ್ರಸರಣ ಮಾಡುವ ಸಾಮರ್ಥ್ಯ ಹೊಂದಿದೆ. XBB.1.5 ಜಗತ್ತಿನಾದ್ಯಂತ ವೇಗವಾಗಿ ಭವಿಷ್ಯದಲ್ಲಿ ಹರಡಬಲ್ಲದು ಎಂಬುದನ್ನು ನಮ್ಮ ದತ್ತಾಂಶ ತೋರಿಸುತ್ತದೆ ಎಂದು ವರ್ಸಿಟಿಯ ಡಿವಿಷನ್ ಆಫ್ ಸಿಸ್ಟಮ್ಸ್ ವೈರಾಲಾಜಿ ಜುಪೈ ತಿಳಿಸಿದ್ದಾರೆ.