ನವದೆಹಲಿ: ಆಯುರ್ವೇದದ ಪ್ರಕಾರ ನಿದ್ದೆ ಜೀವನದ ಪ್ರಮುಖ ಪ್ರವೃತ್ತಿಯಾಗಿದ್ದು, ಎಲ್ಲ ಜೀವಿಗಳಿಗೆ ಅತ್ಯವಶ್ಯಕವಾಗಿದೆ. ಖುಷಿ, ದುಃಖ, ಆರೈಕೆ, ಅಪೋಷಣೆ, ಶಕ್ತಿ, ಜ್ಞಾನ, ನಿರ್ಲಕ್ಷ್ಯ, ಜೀವನದ ಮಟ್ಟ ಮತ್ತು ಸಾವು ಹೀಗೆ ಎಲ್ಲಾವೂ ನಿದ್ದೆಯ ಮೇಲೆ ಅವಲಂಬಿತವಾಗಿದೆ. ಆಯುರ್ವೇದದ ಅನುಸಾರ ಆರೋಗ್ಯ ಮೂರು ಕಂಬಗಳಾದ ಆಹಾರ ಮತ್ತು ಶಕ್ತಿ ನಿರ್ವಹಣೆಯ ನೀತಿಯಾದ ಬ್ರಹ್ಮಚರ್ಯ ಜೊತೆಗೆ ನಿದ್ರೆಯೂ ಒಂದಾಗಿದೆ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಿದ್ದೆ ಅತ್ಯಗತ್ಯವಾಗಿದೆ.
ನಿದ್ದೆಯ ಪ್ರಮುಖ ಕಾರ್ಯ ಎಂದರೆ ಇದು ಓಜಸ್ ಎಂದರೆ ಶಕ್ತಿಯನ್ನು ವೃದ್ಧಿಸುತ್ತದೆ. ದೇಹ ಮತ್ತು ಮನಸ್ಸು, ಆತ್ಮದ ನಡುವೆ ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಓಜಸ್ ಜೀರ್ಣಕ್ರಿಯೆ ಮತ್ತು ಜೀವನ ಪೋಷಕದ ಅಂಶವಾಗಿದ್ದು, ದೈನಂದಿನ ಒತ್ತಡ ಮತ್ತು ಕೆಲಸದಿಂದ ಮನಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಗುಣಮಟ್ಟದ ಮತ್ತು ಪ್ರಮಾಣ ನಿದ್ದೆ ಎಲ್ಲವನ್ನೂ ಸಮದೂಗಿಸುತ್ತದೆ. ಆದರೆ, ಜನರು ಈ ನಿದ್ದೆಯ ಪ್ರಾಮುಖ್ಯತೆಯನ್ನು ನಿರ್ಲಕ್ಷ್ಯಿಸುತ್ತಾರೆ. ಇದು ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ಇದಕ್ಕಾಗಿ ಸರಿಯಾದ ನಿದ್ದೆಯ ಬಗ್ಗೆ ಅರ್ಥೈಸಿಕೊಂಡು ಅದನ್ನು ರೂಢಿಸಿಕೊಳ್ಳಬೇಕು. ಮಲಗಿದಾಗ ಉಸಿರಾಟದ ಶೈಲಿ, ಗೊರಕೆ ಮತ್ತು ಸರಿಯಾಗಿ ಮಲಗುವ ವಿಧಾನ, ಸಂಜೆ ದಿನಚರಿಯಲ್ಲಿ ಉತ್ತಮ ದೈಹಿಕ ಚಟುವಟಿಕೆಗಳು ಕೂಡ ನಿದ್ರೆ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ನಿದ್ದೆ ಪಡೆಯಲು ಇಂತಹದ್ದೇ ವಿಧಾನದಲ್ಲಿ ಮಲಗಬೆಕು ಎಂಬ ನಿಯಮವಿಲ್ಲ. ಆದರೆ, ಆಯುರ್ವೇದ ತಿಳಿಸುವಂತೆ ಎಡಬದಿಗೆ ತಿರುಗಿ ಮಲಗುವುದರಿಂದ ರಕ್ತದ ಪರಿಚಲನೆ, ಚಯಾಪಚಯ ಮತ್ತು ಹೃದಯಕ್ಕೆ ಒಳ್ಳೆಯದು. ಜೊತೆಗೆ ಇದು ಉಸಿರಾಟಕ್ಕೂ ಸಹಾಯ ಮಾಡಲಿದೆ.
ಗುಣಮಟ್ಟದ ನಿದ್ದೆಗೆ ಉತ್ತಮ ಉಸಿರಾಟದ ವಿಧಾನ ಕೂಡ ಅವಶ್ಯಕ:ಬಿಡುವಿಲ್ಲದ ದಿನದಲ್ಲಿ ದಣಿವಿನಿಂದ ಮಲಗಿದಾಗ ಗೊರಕೆಗೆ ಇದು ಕಾರಣವಾಗುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ನಿಯಮಿತವಾಗಿ ನೀರು ಗೊರಕೆ ಅನುಭವ ಪಡೆಯುತ್ತಿದ್ದರೆ, ಇದು ನೀವು ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆಯುದಿಲ್ಲ ಎಂಬುದೇ ಆಗಿದೆ. ಇದರಿಂದ ಆರೋಗ್ಯ ಸಮಸ್ಯೆ ಉದ್ಭವಿಸಬಹುದಾಗಿದ್ದು, ಈ ಹಿನ್ನಲೆಯಲ್ಲಿ ಚಿಕಿತ್ಸೆಯೂ ಮುಖ್ಯ. ಇದಕ್ಕಾಗಿ ಅಭ್ಯಂಜನ ಸ್ನಾನ, ಪಾದಾಭ್ಯಂಜನ (ಪಾದದ ಮಸಾಜ್) ಮತ್ತು ನಾಸ್ಯಾ ಕರ್ಮ ಪರಿಹಾರ ಎಂದು ಆಯುರ್ವೇದ ತಿಳಿಸುತ್ತದೆ.