ಬೆಂಗಳೂರು: ಇಂದಿನ ಪೀಳಿಗೆಯ ಜನರು ತಮ್ಮ ಅಭಿರುಚಿ, ಅಭಿಪ್ರಾಯಗಳನ್ನು ಟ್ಯಾಟೂ ಅಥವಾ ಹಚ್ಚೆಗಳ ಮೂಲಕ ಕ್ರಿಯಾತ್ಮಕವಾಗಿ ವ್ಯಕ್ತಪಡಿಸುತ್ತಾರೆ. ಟ್ಯಾಟೂಗಳಿಗೆ ದೊಡ್ಡ ಇತಿಹಾಸವಿದೆ. ಇತಿಹಾಸಪೂರ್ವಕಾಲದಿಂದಲೂ ಭಾರತ ಸೇರಿದಂತೆ ಜಗತ್ತಿನಾದ್ಯಂತ ಎಲ್ಲ ಭೂ ಪ್ರದೇಶಗಳಲ್ಲೂ ಹಚ್ಚೆ ಅಸ್ತಿತ್ವದಲ್ಲಿತ್ತು ಅನ್ನೋದು ಗಮನಾರ್ಹ. ಭಾರತದಲ್ಲಿ ಟ್ಯಾಟೂ ಅಥವಾ ಹಚ್ಚೆಗಳಿಗೆ ಸುದೀರ್ಘ ಇತಿಹಾಸವಿದೆ. ಇದು ಮಾನ್ಯತೆ ಪಡೆದ ನಿರ್ದಿಷ್ಟ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದು ಬರುತ್ತಿರುವ ಪದ್ಧತಿಯಾಗಿ ಮುಂದುವರೆಯುತ್ತಿದೆ.
ಇಂದಿನ ಆಧುನಿಕ ತಂತ್ರಜ್ಞಾನಕ್ಕೂ ಮುನ್ನ ಟ್ಯಾಟೂಗಳನ್ನು ಸಾಂಪ್ರದಾಯಿಕ ವಿಧಾನದ ಮೂಲಕ ಹಾಕಲಾಗುತ್ತಿತ್ತು. ನಿರ್ದಿಷ್ಟವಾಗಿ ಕಡ್ಡಿಗಳ ಮೂಲಕ ಇವುಗಳನ್ನು ಕೈಯಿಂದಲೇ ಚುಚ್ಚಲಾಗುತ್ತಿತ್ತು. ಟ್ಯಾಟೂಗಳನ್ನು ಗಮನಾರ್ಹವಾಗಿ ಸಾಮಾಜಿಕ ಸ್ಥಾನಮಾನದ ಸೂಚಕ, ನಿರ್ದಿಷ್ಟ ಸಮುದಾಯ, ಜೀವನದ ಪರಿವರ್ತನೆಯ ಅಂಶ ಮತ್ತು ಶಾಶ್ವತ ಆಭರಣವಾಗಿಯೂ ಬಳಕೆ ಮಾಡಲಾಗುತ್ತಿತ್ತು.
ಟ್ಯಾಟೂಗಳನ್ನು ಹಾಕಲು ಹರಿತ ಸೂಜಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಚರ್ಮಸ್ನೇಹಿಯಾಗಿರುವ ಇವುಗಳು ಊರಿಯುತ ಕಡಿಮೆ ಮಾಡುತ್ತಿದ್ದವು. ಹಾಲು, ಗೋವಿನ ಮೂತ್ರ ಅಥವಾ ಎದೆ ಹಾಲುಗಳನ್ನು ಶಾಯಿಗಳೊಂದಿಗೆ ಬಳಕೆ ಮಾಡಲಾಗುತ್ತಿತ್ತು.
ಗುಜರಾತ್ನಲ್ಲಿ ರಾಬ್ರಿ:ಗುಜರಾತ್ನ ಬುಡಕಟ್ಟು ಸಮುದಾಯವಾದ ರಾಬ್ರಿಗಳಲ್ಲಿ ಈ ಹಚ್ಚೆಗೆ ವಿಶೇಷ ಸ್ಥಾನಮಾನಬಿದ್ದು, ಮಹಿಳೆಯರು ಹಾಕಿಕೊಳ್ಳುತ್ತಿದ್ದರು. ಇದನ್ನು ತ್ರಜ್ವಾ ಎಂದು ಅವರು ಕರೆಯುತ್ತಾರೆ. ಈ ಸಮುದಾಯದಲ್ಲಿ ಹಚ್ಚೆ ಹಾಕಿಸಿಕೊಳ್ಳದಿರುವುದು ಅವಮಾನವಂತೆ. ಕಿವಿ, ಮುಖ, ಗಂಟಲು ಮತ್ತಿತರ ಕಡೆಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಇವು ಶಕ್ತಿಯ ಸಂಕೇತವಾಗಿದ್ದು, ತ್ರಾಜ್ವಾದಲ್ಲಿ ಚೇಳು ಮತ್ತು ಹಾವಿನ ಹಚ್ಚೆ ಸಾಮಾನ್ಯವಾಗಿತ್ತು.