ತೆಂಗಿನಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ. ಆಯುರ್ವೇದ ತಜ್ಞೆ ಡಾ. ಪ್ರಿಯಾಂಕಾ ಸಂಪತ್ ತೆಂಗಿನ ಕಾಯಿ ಎಣ್ಣೆಯ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.
ನೈಸರ್ಗಿಕ ಆರ್ದ್ರತೆ :ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ.
ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ. ಕೂದಲು ಬೆಳೆಯುವುದಕ್ಕೆ ತೆಂಗಿನ ಎಣ್ಣೆ ಅತ್ಯಂತ ಸಹಕಾರಿಯಾಗಿದೆ, ತೆಂಗಿನ ಎಣ್ಣೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ದೇಹದ ರಕ್ತ ಚಲನೆ ಹೆಚ್ಚಿಸುವುದರ ಜೊತೆಗೆ, ಕಳೆದುಹೋದ ಪೋಷಕಾಂಶಗಳನ್ನು ನೀಡುತ್ತದೆ.
ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರ ಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು. ಆಯುರ್ವೇದದಲ್ಲಿ ಪಿತ್ತ ವಿರುದ್ಧಿ ಎಂದು ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ, ಇದರಿಂದ ಅರ್ಥಿರಿಟಿಸ್ ಸಮಸ್ಯೆ ಹೋಗಲಾಡಿಸಬಹುದು ಎಂದು ಹಿಂದೂಜಾ ಹೆಲ್ತ್ ಕೇರ್ ಡಯಟಿಶಿನ್ ಇಂದ್ರಯಾಣಿ ಪವಾರ್ ತಿಳಿಸಿದ್ದಾರೆ.
ಅಡುಗೆಯಲ್ಲಿ ಕೊಬ್ಬರಿ ಎಣ್ಣೆ :ತೆಂಗಿನಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ಹಲವು ಗಿಡ ಮೂಲಿಕ ಔಷಧಗಳಿಗಾಗಿಯೂ ಬಳಸಲಾಗುತ್ತದೆ.
ಕೊಬ್ಬರಿ ಎಣ್ಣೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಯಾವುದೇ ತೊಂದರೆಯಿಲ್ಲದೇ ಬಳಸಬಹುದಾಗಿದೆ. ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು-ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಕೇಳಿದ್ದೀರಾ? ಬಹಳ ಜನ ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆಯನ್ನ ಅಡುಗೆಗೆ ಬಳಕೆ ಮಾಡೋಲ್ಲ. ಅವರಿಗೆ ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರದಿಂದ ಹಾಗೂ ತಮಗೇ ತಿಳಿಯದ ರುಚಿ ಹಾಗೂ ಪದಾರ್ಥದ ಬಗ್ಗೆ ಪಾಶ್ಚಾತ್ಯರು ನೀಡಿರುವ ವಿವರಗಳನ್ನು ಪಾಲಿಸುತ್ತಾರೆ.
ಆಹಾರ ತಯಾರಿಸಲು ಕೊಬ್ಬರಿ ಎಣ್ಣೆ ಬಳಸಿದರೆ, ಅದು ಹೆಚ್ಚಿನ ಶಾಖದ ತಾಪಮಾನದಲ್ಲಿಯೂ ಅಡುಗೆ ಸುರಕ್ಷಿತವಾಗಿ ಉಳಿಯಲು ಕಾರಣವಾಗುತ್ತದೆ. ಸಾಮಾನ್ಯ ಅಡುಗೆಯಲ್ಲಿ ಇತರ ತರಕಾರಿ ಜನ್ಯ ಎಣ್ಣೆಗಳಂತೆ, ಕೊಬ್ಬರಿ ಎಣ್ಣೆ ಹಾನಿಕಾರಕ ಉಪ ಉತ್ಪನ್ನಗಳನ್ನು ರೂಪಿಸುವುದಿಲ್ಲ.
ಕಪ್ಪು-ದಟ್ಟ ಕೂದಲಿಗೆ ಕೊಬ್ಬರಿ ಎಣ್ಣೆ: ಸ್ವಾಭಾವಿಕ ಅಂಶದ ಅದ್ಭುತ ಗುಣಗಳಿದ್ದರೂ, ಜನರಿಗೆ ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಕೇರಳದ ಜನರ ಸೌಂದರ್ಯ ರಕ್ಷಣೆಯ ಮುಖ್ಯ ವಿಧಾನ ಎಂದರೆ ಅದು ಆರ್ಯುವೇದ. ಇಲ್ಲಿಯ ಜನ ದಿನ ನಿತ್ಯದ ಸೌಂದರ್ಯ ಕಾಳಜಿಗೆ ಮನೆಯಲ್ಲಿ ಮಾಡಿದ ಹಾಗೂ ಸ್ವಾಭಾವಿಕ ಚಿಕಿತ್ಸೆಗಳತ್ತಲೇ ನಂಬಿಕೆಯಿಟ್ಟು ಅಳವಡಿಸಿಕೊಂಡಿದ್ದಾರೆ. ಕೇರಳದ ಮಹಿಳೆಯರು ತಮ್ಮ ತಲೆಕೂದಲಿಗೆ ಹೇರಳವಾಗಿ ಕೊಬ್ಬರಿ ಎಣ್ಣೆ ಹಚ್ಚುವುದರಿಂದ, ಅವರ ತಲೆಕೂದಲು ಕಪ್ಪಗೆ, ದಟ್ಟವಾಗಿ ಮಿಂಚುತ್ತದೆ.
ಅವರ ಆಹಾರದಲ್ಲಿ ಮುಖ್ಯವಾಗಿ ತೆಂಗು ಹಾಗೂ ಕೊಬ್ಬರಿ ಎಣ್ಣೆ ಇರುತ್ತದೆ. ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ ಕೊಡುಗೆ ತೆಂಗಿನ ತಿರುಳಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಇವೆ. ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಹಾಗೂ ಬಿ6, ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕಗಳು ತೆಂಗಿನಲ್ಲಿ ತುಂಬಿವೆ. ಪ್ರತಿದಿನ ಎಣ್ಣೆ ಹಚ್ಚಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದರುವುದನ್ನು ನಿಯಂತ್ರಿಸುವುದರ ಜೊತೆಗೆ, ತಲೆಹೊಟ್ಟು ನಿವಾರಿಸುತ್ತದೆ.
ದೇಹದಲ್ಲಿಯ ಸ್ನಾಯುಗಳು ಹಾಗೂ ನರಗಳು ಚೆನ್ನಾಗಿ ಕೆಲಸ ಮಾಡುವಂತಾಗಲು, ಶರೀರದಲ್ಲಿ ಸಾಕಷ್ಟು ಜಲವಿರಬೇಕು. ಇದಕ್ಕೆ ಎಳನೀರು ನೆರವು ನೀಡುತ್ತದೆ. ಎಳನೀರಿನಲ್ಲಿ ಕ್ಯಾಲೋರಿಗಳು, ಪಿಷ್ಟ, ಸಕ್ಕರೆ ಕಡಿಮೆ ಇದ್ದು, ಅದು ಸಂಪೂರ್ಣ ಕೊಬ್ಬು ಮುಕ್ತವಾಗಿದೆ. ತೆಂಗಿನ ಒಳಗಿನ ಮೃದು ಅಂಶ, ಉತ್ಕರ್ಷಣದಿಂದಾದ ಜೀವಕೋಶ ನಾಶ ತಡೆದು, ಮೂಲಸ್ಥಿತಿಗೆ ಒಯ್ಯಲು ನೆರವು ನೀಡುತ್ತದೆ. ತೆಂಗಿನಕಾಯಿ-ಸಂಸ್ಕರಿಸದ, ಪರಿಶುದ್ಧಗೊಳಿಸದ ಕಚ್ಛಾ ಹಾಗೂ ಜಲಜನಕೀಕರಣಕ್ಕೊಳಗಾಗದ ಕೊಬ್ಬರಿ ಎಣ್ಣೆಯು ಬಳಕೆಗೆ ಉತ್ತಮ ಆಯ್ಕೆಯಾಗಿದೆ.