ನವದೆಹಲಿ: ಕೋವಿಡ್ ಸೋಂಕಿನ ಪರಿಣಾಮಕಾರಿತ್ವದ ಕುರಿತು ಈಗಾಗಲೇ ಅನೇಕ ಅಧ್ಯಯನಗಳು ನಡೆದಿದೆ. ಆದರೆ, ಇದೇ ಮೊದಲ ಬಾರಿಗೆ ಕೋವಿಡ್ ಲಸಿಕೆ ಮತ್ತು ಮಾಲಿನ್ಯ ಕುರಿತು ಸಂಶೋಧನೆ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕೋವಿಡ್ ಸೋಂಕು ಆರಂಭಕ್ಕೂ ಮುನ್ನ ಅಧಿಕ ಮಾಲಿನ್ಯಕ್ಕೆ ತುತ್ತಾದವರ ಮೇಲೆ ಕೋವಿಡ್ ಲಸಿಕೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ. ವಾಯು ಮಾಲಿನ್ಯಕಾರಕಗಳು ಅದರಲ್ಲೂ ಸೂಕ್ಷ್ಮ ಕಣಗಳಾದ ನೈಟ್ರೊಜೆನ್ ಡೈಆಕ್ಸೈಡ್ (ಎನ್ಒ2) ಮತ್ತು ಬ್ಲಾಕ್ ಕಾರ್ಬನ್ (ಬಿಸಿ) ಒಡ್ಡಿಕೊಳ್ಳುವುದರಿಂದ ಸೋಂಕಿತರಲ್ಲದವರಲ್ಲೂ ಐಜಿಎಂ ಮತ್ತು ಐಜಿಜಿ ಪ್ರತಿಕಾಯ ಪ್ರತಿಕ್ರಿಯೆಗಳಲ್ಲಿ ಸುಮಾರು 10 ಪ್ರತಿಶತದಷ್ಟು ಇಳಿಕೆ ಕಂಡಿದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್, ಮತ್ತು ಸ್ಪೇನ್‌ನಲ್ಲಿರುವ ಜರ್ಮನ್ನರ ಟ್ರಿಯಾಸ್ ಐಪುಜೊಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಸಂಬಂಧ ಅಧ್ಯಯನ ನಡೆಸಿದೆ.
ಲಸಿಕೆಯ ಪರಿಣಾಮಕಾರಿತ್ವ: ಮಾಲಿನ್ಯಕಾರಕಗಳ ಪರಿಣಾಮವನ್ನು ಮೊದಲು ಸೋಂಕಿಗೆ ತುತ್ತಾಗದ ಜನರಲ್ಲಿ ಮಾತ್ರ ಏಕೆ ಗಮನಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ. ಹೈಬ್ರಿಡ್ ಇಮ್ಯೂನಿಟಿ ಮೇಲೆ ದೀರ್ಘಾವಧಿ ವಾಯುಮಾಲಿನ್ಯಕ್ಕೆ ತುತ್ತಾದವರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್ನಲ್ಲಿ ಪ್ರಕಟಿಸಲಾಗಿದೆ. ವಾಯು ಮಾಲಿನ್ಯವು ದೀರ್ಘಕಾಲದ ಉರಿಯೂತವನ್ನು ಉಂಟುಮಾಡುತ್ತದೆ. ಇದರ ಜೊತೆಗೆ ಇದು ಲಸಿಕೆ ಪರಿಣಾಮಕಾರಿತ್ವದ ಮೇಲೆ ನಕಾರಾತ್ಮಕ ಪರಿಣಾಮದೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ.
ಆರೋಗ್ಯದ ಮೇಲೆ ಪ್ರತಿಕೂಲದ ಪರಿಣಾಮ: ವಾಯು ಮಾಲಿನ್ಯಕಾರಕಗಳು ಪ್ರತಿರಕ್ಷಣಾ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಅಧ್ಯಯನ ತೋರಿಸಿದೆ. ಹಿಂದೆ ಇದು ಶ್ವಾಸಕೋಶದ ಕ್ಯಾನ್ಸರ್, ಹೃದಯರಕ್ತನಾಳ ಮತ್ತು ಉಸಿರಾಟದ ಕಾಯಿಲೆ ಮತ್ತು ಮಧುಮೇಹ ಸೇರಿದಂತೆ ಪ್ರತಿಕೂಲ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗುತ್ತದೆ