ಕರ್ನಾಟಕ

karnataka

ETV Bharat / sukhibhava

ಸಾಮಾಜಿಕ ಪ್ರತ್ಯೇಕೀಕರಣದಿಂದ ಹಿರಿಯ ವಯಸ್ಕರ ಮಿದುಳಿನ ಮೇಲೆ ಪರಿಣಾಮ: ಅಧ್ಯಯನ - ಸಾಮಾಜಿಕ ಸಂಪರ್ಕವನ್ನು ಹೊಂದುವುದು

ಮಿದುಳಿನ ಕ್ಷೀಣತೆ ಮತ್ತು ಡೆಮೆನ್ಶಿಯಾ ಅಭಿವೃದ್ಧಿ ಹೊಂದುವುದನ್ನು ತಡೆಯಲು ಕಡಿಮೆ ಸಂಪರ್ಕ ಹೊಂದಿರುವ ಜನರಲ್ಲಿ ಹೊಸ ಸಂಪರ್ಕ ಸಾಧಿಸುವುದು ಮತ್ತು ಬೆಂಬಲ ನೀಡುವುದು ಅಗತ್ಯ ಎಂಬುದನ್ನು ಅಧ್ಯಯನದಲ್ಲಿ ಕಂಡು ಕೊಳ್ಳಲಾಗಿದೆ.

The effect of social isolation on the brain of older adults
The effect of social isolation on the brain of older adults

By

Published : Jul 13, 2023, 5:05 PM IST

ನವದೆಹಲಿ: ಆಗಾಗ್ಗೆ ಸಾಮಾಜಿಕ ಸಂಪರ್ಕ ಬೆಳೆಸುವವರಿಗೆ ಹೋಲಿಕೆ ಮಾಡಿದಾಗ ಕಡಿಮೆ ಸಾಮಾಜಿಕ ಸಂಪರ್ಕ ಹೊಂದುವುದು ಹಿರಿಯ ವ್ಯಕ್ತಿಗಳ ಮಿದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೊಸ ಅಧ್ಯಯನವೊಂದು ಕಂಡು ಹಿಡಿದಿದೆ. ಜರ್ನಲ್​ ನ್ಯೂರೊಲಾಜಿಯಲ್ಲಿ ಈ ಕುರಿತು ಸಂಶೋಧನಾ ವರದಿಯನ್ನ ಪ್ರಕಟಿಸಲಾಗಿದೆ.

ಈ ವೇಳೆ, ಸಾಮಾಜಿಕ ಪ್ರತ್ಯೇಕೀಕರಣ ಮಿದುಳಿನ ಸಂಕೋಚನಕ್ಕೆ ಕಾರಣವಾಗುತ್ತದೆ ಎಂಬುದನ್ನು ನಿರೂಪಿಸಲು ಸಾಧ್ಯವಾಗಿಲ್ಲ. ಆದರೆ, ಇದು ಸಂಬಂಧವನ್ನು ತೋರಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾಜಿಕ ಪ್ರತ್ಯೇಕೀಕರಣ ಹಿರಿಯ ವಯಸ್ಕರರಲ್ಲಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ ಎಂದು ಜಪಾನ್​ನ ಪುಕೌಕಾದ ಕ್ಯುಶು ಯುನಿವರ್ಸಿಟಿಯ ಲೇಖಕ ತೊಶಿಹರು ನಿನೊಮಿಯಾ ತಿಳಿಸಿದ್ದಾರೆ.

ಮಿದುಳಿನ ಕ್ಷೀಣತೆ ಮತ್ತು ಡೆಮೆನ್ಶಿಯಾ ಅಭಿವೃದ್ಧಿ ಹೊಂದಲು ತಡೆಯಲು ಕಡಿಮೆ ಸಂಪರ್ಕ ಹೊಂದಿರುವ ಜನರಲ್ಲಿ ಹೊಸ ಸಂಪರ್ಕ ಸಾಧಿಸುವುದು ಬೆಂಬಲ ನೀಡುವುದು ಅಗತ್ಯವಾಗುತ್ತದೆ ಎಂದು ಫಲಿತಾಂಶ ತಿಳಿಸಿದೆ. ಈ ಅಧ್ಯಯನಕ್ಕಾಗಿ ಸರಾಸರಿ 73 ವರ್ಷ ವಯೋಮಾನದ 8,896 ಮಂದಿಯನ್ನು ಭಾಗಿಯಾಗಿಸಲಾಗಿದೆ. ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಆರಂಭದಲ್ಲಿ ಯಾವುದೇ ರೀತಿಯ ಡೆಮನ್ಶಿಯಾ ಕಂಡು ಬಂದಿಲ್ಲ.

ಭಾಗಿದಾರರನ್ನು ಎಂಆರ್​ಐ ಮಿದುಳಿನ ಸ್ಕ್ಯಾನ್​ ಮತ್ತು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ. ಜನರ ಸಾಮಾಜಿಕ ಸಂಪರ್ಕ ತಿಳಿಯಲು ಅವರಿಗೆ ಪ್ರಶ್ನಾವಳಿಗಳನ್ನು ಕೇಳಲಾಗಿದೆ. ತಮ್ಮ ಸಂಬಂಧಿಗಳು ಅಥವಾ ಸ್ನೇಹಿತರನ್ನು ಎಷ್ಟು ಸಮಯಕ್ಕೆ ಒಮ್ಮೆ ಅವರು ಸಂಪರ್ಕಕ್ಕೆ ಒಳಗಾಗುತ್ತಾರೆ ಎಂದು ಕೇಳಲಾಗಿದೆ. ಇದರಲ್ಲಿ ನಿತ್ಯ, ವಾರದಲ್ಲಿ ಕೆಲವು ದಿನ, ತಿಂಗಳಲ್ಲಿ ಕೆಲವು ದಿನ ಎಂಬ ಆಯ್ಕೆ ನೀಡಲಾಗಿತ್ತು. ಕಡಿಮೆ ಸಮಯದ ಸಾಮಾಜಿಕ ಸಂಪರ್ಕವೂ ಒಟ್ಟಾರೆ ಮಿದುಳಿನ ಮೌಲ್ಯದ ಮೆಲೆ ಗಮನಾರ್ಹವಾಗಿ ಪರಿಣಾಮ ಬೀರಿರುವುದು ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಟ್ಟು ಮೆದುಳಿನ ಪರಿಮಾಣ ಅಥವಾ ಬಿಳಿ ಮತ್ತು ಬೂದು ದ್ರವ್ಯದ ಮೊತ್ತ, ಒಟ್ಟು ಇಂಟ್ರಾಕ್ರೇನಿಯಲ್ ಪರಿಮಾಣಕ್ಕೆ ಹೋಲಿಸಿದರೆ ಕಡಿಮೆ ಸಂಪರ್ಕ ಗುಂಪಿನಲ್ಲಿ 67.3 ಶೇಕಡಾ. ಹೆಚ್ಚಿನ ಸಂಪರ್ಕ ಗುಂಪಿನಲ್ಲಿ 67.8 ಪ್ರತಿಶತದಷ್ಟು ಹೆಚ್ಚಿದೆ. ಈ ತಂಡವು ಮೆದುಳಿನ ಪ್ರದೇಶಗಳಲ್ಲಿ ಹಿಪೊಕ್ಯಾಂಪಸ್ ಮತ್ತು ಅಮಿಗ್ಡಾಲದಂತಹ ಕಡಿಮೆ ಪರಿಮಾಣಗಳನ್ನು ಹೊಂದಿದ್ದು, ಅದು ಸ್ಮರಣೆಯ ಪಾತ್ರವನ್ನು ವಹಿಸುತ್ತದೆ.

ವಯಸ್ಸು, ಮಧುಮೇಹ, ಧೂಮಪಾನ ಮತ್ತು ವ್ಯಾಯಾಮದಂತಹ ಮೆದುಳಿನ ಪರಿಮಾಣದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಸಾಮಾಜಿಕವಾಗಿ ಪ್ರತ್ಯೇಕಿಸಲ್ಪಟ್ಟ ಜನರು ಆಗಾಗ್ಗೆ ಸಾಮಾಜಿಕ ಸಂಪರ್ಕಕ್ಕೆ ಒಳಗಾಗುವ ಜನರಿಗಿಂತ ಹೆಚ್ಚು ಪರಿಣಾಮ ಹೊಂದಿರುತ್ತಾರೆ. ಇದನ್ನು ವೈಟ್ ಮ್ಯಾಟರ್ ಲೆಸಿಯಾನ್ ಎಂದು ಕರೆಯುತ್ತಾರೆ. ಖಿನ್ನತೆಯ ಲಕ್ಷಣಗಳು ಸಾಮಾಜಿಕ ಪ್ರತ್ಯೇಕತೆ ಮತ್ತು ಮೆದುಳಿನ ಪರಿಮಾಣಗಳ ನಡುವಿನ ಸಂಬಂಧವನ್ನು ಇದು ವಿವರಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಯಸ್ಸಾದವರನ್ನು ಸಾಮಾಜಿಕವಾಗಿ ಉತ್ತೇಜಿಸುವ ಗುಂಪುಗಳಲ್ಲಿ ಭಾಗಿಯಾಗುವಂತೆ ಉತ್ತೇಜಿಸುವುದರಿಂದ ಮೆದುಳಿನ ಪರಿಮಾಣ ಮತ್ತು ಸ್ಮರಣಶಕ್ತಿಯ ಕುಸಿತ ತಡೆಯಬಹುದು ಎಂದು ಇದು ತೋರಿಸಿದೆ.

ಇದನ್ನೂ ಓದಿ: ಬಾಲ್ಯದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತಕ್ಕೆ ಬಡತನ ಕಾರಣ: ಓದುವಿಕೆಯೇ ಇದಕ್ಕೆ ಔಷಧ

ABOUT THE AUTHOR

...view details