ನ್ಯೂಯಾರ್ಕ್: ನಾಲ್ಕು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಸಣ್ಣ ಮಕ್ಕಳಿಗೆ ಕೋವಿಡ್ 19 ವಿರುದ್ಧ ನೀಡಲಾಗುತ್ತಿರುವ mRNA ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು ಹೊಸ ಅಧ್ಯಯನ ತಿಳಿಸಿದೆ. ಮಕ್ಕಳಿಗೆ 2,45,00 ಡೋಸ್ಗಳ ಲಸಿಕೆ ನೀಡಿದ ಬಳಿಕ ಈ ವಿಚಾರ ಗೊತ್ತಾಗಿದೆ.
mRNA ಲಸಿಕೆ ಮಕ್ಕಳಲ್ಲಿ ಗಂಭೀರ ಅಡ್ಡ ಪರಿಣಾಮ ಹೊಂದಿದೆಯೇ ಎಂಬ ಬಗ್ಗೆ ಮೊದಲ ಅಧ್ಯಯನ ನಡೆಸಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗ ಜೂನ್ 2022ರಿಂದ ಮಾರ್ಚ್ 2023ರವರೆಗೆ ಅಧ್ಯಯನ ನಡೆಸಿದ್ದು, ಫೈಜರ್ ಮತ್ತು ಮೊಡಾರ್ನೊ ಎಂಬ ಎರಡು ಲಸಿಕೆಗಳನ್ನು ವಿಶೇಷವಾಗಿ ಗಮನಿಸಲಾಗಿದೆ.
ಅಧ್ಯಯನ ವರದಿಯನ್ನು ಜರ್ನಲ್ ಪಿಡಿಯಾಟ್ರಿಕ್ಸ್ನಲ್ಲಿ ಪ್ರಕಟಿಸಲಾಗಿದೆ. ಚಿಕ್ಕ ಮಕ್ಕಳಿಗೆ ಲಸಿಕೆ ನೀಡಿದಾಗ ಅವರ ಹೃದಯದಲ್ಲಿ ಊರಿಯೂತದಂತಹ ಮಯೋಕಾರ್ಡಿಯಾಟಿಸ್ಟ್ಗಳ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಸಣ್ಣ ಮಕ್ಕಳ ಗುಂಪಿನಲ್ಲಿ ನಾವು ಮಯೋಕಾರ್ಡಿಯಟಿಸ್ಟ್ ಅಥವಾ ಪೆರಿಕಾರ್ಡಿಯಟಿಸ್ಟ್ಗಳು ಪತ್ತೆಯಾಗಿಲ್ಲ. ಇದು ಹೆಚ್ಚು ಭರವಸೆ ನೀಡಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಕ್ರಿಸ್ಟಿನ್ ಗೊಡರ್ಡ್ ಹೇಳಿದ್ದಾರೆ.
ಕೋವಿಡ್ ಲಸಿಕೆಯಿಂದಾಗಿ ಮಯೋಕಾರ್ಡಿಟಿಸ್ಟ್ ಪತ್ತೆ ಮಾಡುತ್ತದೆ. ಇದು ಅನೇಕ ಬಾರಿ ಹದಿಹರೆಯದ ಮತ್ತು ವಯಸ್ಕರಲ್ಲಿ ಕಾಣಿಸಿಕೊಂಡಿದೆ. ತಜ್ಞರ ತಂಡವು 23 ಗಂಭೀರ ಸಾಮರ್ಥ್ಯದ ಅಡ್ಡ ಪರಿಣಾಮ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇದರಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು, ಮಿದುಳಿನ ಉರಿಯೂತ ಸೇರಿದೆ.