ಬೆಂಗಳೂರು: ನೃತ್ಯವನ್ನು ಕೆಲವರು ಕಲೆಯ ಅಭಿವ್ಯಕ್ತಿ ಎಂದರೆ, ಮತ್ತೆ ಕೆಲವರು ಅದು ಒತ್ತಡ ನಿವಾರಣೆ ಎನ್ನುತ್ತಾರೆ. ನೃತ್ಯ ದೈಹಿಕ ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಮುಖ್ಯತೆ ನೀಡುತ್ತದೆ. ಏಪ್ರಿಲ್ 29ಅನ್ನು ಅಂತರಾಷ್ಟ್ರೀಯ ನೃತ್ಯದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ಬ್ಯಾಲೆ ಸೃಷ್ಟಿಕರ್ತ ಜೀನ್ ಜಜಾರ್ಜಸ್ ನೊವೆರ್ರೆ ಅವರ ಜನ್ಮ ದಿನದ ಅಂಗವಾಗಿ ಈ ದಿನ ಆಚರಣೆ ಮಾಡಲಾಗುವುದು. ಎಲ್ಲಾ ಕಲಾ ಪ್ರಕಾರಗಳು ರಾಜಕೀಯ, ಸಾಂಸ್ಕ್ರತಿಕ ಜನಾಂಗೀಯ ಅಡೆಗಡೆಗಳನ್ನು ಹೊಡೆದೊಡಿಸಿ, ಎಲ್ಲರನ್ನು ಒಟ್ಟುಗೂಡಿಸುವ ಸಾಮರ್ಥ್ಯ ನೃತ್ಯಕ್ಕಿದೆ.
ನೃತ್ಯದಿಂದ ಆರೋಗ್ಯ:ನೃತ್ಯವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಏರೋಬಿಕ್ ನೃತ್ಯ ವ್ಯಾಯಾಮ ಮೆದುಳಿನ ಸ್ಮರಣಾ ಶಕ್ತಿ ನಿಯಂತ್ರಿಸುವ ಹಿಪೊ ಕ್ಯಾಂಪಸ್ ನಷ್ಟವನ್ನು ಕಡಿಮೆ ಮಾಡುತ್ತದೆ. ನೃತ್ಯದಲ್ಲಿ ಮುಂದಿನ ಹೆಜ್ಜೆಯನ್ನು ನೆನಪಿಟ್ಟುಕೊಳ್ಳುವ ಮೂಲಕ ಇದು ಮಿದುಳಿಗೆ ಸವಾಲನ್ನು ಒಡ್ಡುತ್ತದೆ. ಯಾವುದೇ ವಯೋಮಾನವರಿಲಿ ನೃತ್ಯದ ಪ್ರತಿ ಹೆಜ್ಜೆಯನ್ನು ನೆನಪಿನಲ್ಲಿರಿಸಿಕೊಳ್ಳುವ ಮೂಲಕ ಸ್ಮರಣಾಶಕ್ತಿ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ವ್ಯಾಯಾಮದ ಜೊತೆಗೆ ಯೋಜನೆ ಮತ್ತು ಸಂಘಟನೆ ಅಭಿವೃದ್ಧಿಗೆ ಅರಿವಿನ ಕೌಶಲ್ಯ ಹೆಚ್ಚಿಸಲು ನೃತ್ಯ ಸಹಾಯ ಮಾಡುತ್ತದೆ.
ಸ್ನಾಯುಗಳ ಸರಾಗ ಚಲನೆ :ನೃತ್ಯದಲ್ಲಿನ ಚಲನೆಗಳು ದೇಹದ ಬಿಗಿತನವನ್ನು ಹೋಗಲಾಡಿಸಿ, ಸರಾಗ ಚಲನೆಗೆ ಅವಕಾಶ ಮಮಾಡುತ್ತದೆ. ನೃತ್ಯದಲ್ಲಿನ ಸರಳ ಸ್ಟ್ರೇಚ್ ಕೂಡ ಕೀಲು ನೋವು ಮತ್ತಿತ್ತರ ಸಮಸ್ಯೆಗೆ ಪರಿಹಾರ ಆಗುತ್ತದೆ.
ಒತ್ತಡ ನಿವಾರಣೆ: ನೃತ್ಯವು ದೇಹದ ಸೆರೊಟೊನಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮೂಡ್ ಮೇಲೆ ಪರಿಣಾಮ ಬೀರಿ, ಒತ್ತಡ ನಿವಾರಣೆಗೆ ಅನುಕೂಲವಾಗುತ್ತದೆ.
ಖಿನ್ನತೆ ದೂರು: ಖಿನ್ನತೆ ಹೊಂದಿರುವ ರೋಗಿಗಳ ಮೇಲೆ ನೃತ್ಯದ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆ. ಈ ವೇಳೆ ಭಾಗಿದಾರರಲ್ಲಿ ಖಿನ್ನತೆ ಲಕ್ಷಣ ಕಡಿಮೆ ಮಾಡಿ, ಉತ್ಸಾಹ ಮೂಡಿರುವುದು ಕಂಡಿದೆ.
ತೂಕ ನಷ್ಟ: ನೃತ್ಯದ ಚಲನೆಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಏರೋಬುಕ್ ಡ್ಯಾನ್ಸ್ ತರಬೇತಿದಾರರು ಇಂತಹ ತೂಕ ನಷ್ಟಕ್ಕೆ ಸಹಾಯ ಮಾಡುವವರು