ನ್ಯೂಯಾರ್ಕ್: ಬಹುತೇಕರಿಗೆ ಕೆಲವು ಆಹಾರಗಳು ಅಲರ್ಜಿಯನ್ನು ಉಂಟು ಮಾಡುತ್ತವೆ. ಆದರೆ, ಕೆಲವರಿಗೆ ತಮಗೆ ಯಾವ ಆಹಾರ ಅಲರ್ಜಿ ತರುತ್ತದೆ ಎಂಬುದು ತಿಳಿದಿರುವುದಿಲ್ಲ. ಇಂತಹ ಅಲರ್ಜಿ ಉಂಟು ಮಾಡುವ ಆಹಾರ ಸೇವನೆ ಮಾಡದಂತೆ ನಿಮ್ಮ ಮೆದುಳೇ ನಿಮ್ಮನ್ನು ಎಚ್ಚರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದೇಹದ ಪ್ರತಿಕಾಯ ವ್ಯವಸ್ಥೆಯು ಈ ಬದಲಾಗುವ ನಡುವಳಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಕೆಲವು ಆಹಾರಗಳ ವಾಸನೆ, ರುಚಿ ಹಿಡಿಸದೇ ಅದನ್ನು ನಾವು ದೂರು ತಳ್ಳುತ್ತೇವೆ ಎಂದಿದ್ದಾರೆ.
ಈ ಸಂಬಂಧ ಅಮೆರಿಕದ ಯೇಲ್ ಯುನಿವರ್ಸಿಟಿ ಸಂಶೋಧಕರ ತಂಡ ಅಧ್ಯಯನ ನಡೆಸಿದೆ. ಅದರಲ್ಲೂ ಪ್ರಾಣಿಗಳು ಹೇಗೆ ಇಂತಹ ಅಲರ್ಜಿಕಾರಕ ಆಹಾರದಿಂದ ದೂರ ಸರಿಯುತ್ತವೆ ಎಂಬುದನ್ನು ಗಮನ ಹರಿಸಿ ಅವರು ಈ ಅಧ್ಯಯನ ನಡೆಸಿದ್ದಾರೆ. ಅರ್ಲಜಿಕಾರಕ ಆಹಾರಗಳಿಂದ ದೇಹದ ಪ್ರತಿಕಾಯ ವ್ಯವಸ್ಥೆಯು ಇಂತಹ ಅಲರ್ಜಿ ಮತ್ತು ರೋಗಕಾರಗಳ ವಿರುದ್ಧ ರಕ್ಷಣಾತ್ಮಕ ಕ್ರಮವನ್ನು ತೆಗೆದುಕೊಳ್ಳುವಂತೆ ಮೆದುಳಿಗೆ ಸಂದೇಶ ರವಾನಿಸುತ್ತದೆ. ಈ ಮೂಲಕ ಪ್ರಾಣಿಗಳು ಆಹಾರಗಳ ಆಯ್ಕೆಯನ್ನು ತಪ್ಪಿಸುತ್ತದೆ. ಇದೇ ರೀತಿಯ ತಪ್ಪಿಸುವಿಕೆ ನಡುವಳಿಕೆಗಳಿಂದ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸಿದಾಗ ಫುಡ್ ಪಾಯ್ಸನಿಂಗ್ ಆಗಿರುವುದನ್ನು ತೋರಿಸಿದೆ.
ಪ್ರತಿಕಾಯ ವ್ಯವಸ್ಥೆ ಈ ರೀತಿಯ ಸಂಪರ್ಕ ಮಾಡದೇ ಮೆದುಳು ದೇಹಕ್ಕೆ ಅಪಾಯ ಉಂಟು ಮಾಡುವ ಅಂಶಗಳ ಕುರಿತು ಎಚ್ಚರಿಕೆ ನೀಡುವುದಿಲ್ಲ ಎಂದು ಜರ್ನಲ್ ನೇಚರ್ನಲ್ಲಿ ಪ್ರಕಟಿಸಲಾಗಿದೆ. ಪ್ರತಿರಕ್ಷಣಾ ಗುರುತಿಸುವಿಕೆ ನಿಯಂತ್ರಣ ನಡುವಳಿಕೆ ಪತ್ತೆ ಮಾಡಲಾಗಿದೆ. ಇವು ನಿರ್ದಿಷ್ಟ ಜೀವಾಣುಗಳ ವಿರುದ್ಧ ರಕ್ಷಣಾತ್ಮಕ ನಡುವಳಿಕೆಯನ್ನು ನಮ್ಮ ಪ್ರತಿಕಾಯದ ಮೂಲಕ ಮೆದುಳಿಗೆ ಸಂವಹನ ನಡೆಸುತ್ತದೆ ಎಂದು ಅಧ್ಯಯನದ ಪ್ರಾಧ್ಯಾಪಕ ರುಸ್ಲಾನ್ ಮೆಡ್ಜಿಟೋವ್ ತಿಳಿಸಿದ್ದಾರೆ.