ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆ 75ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಡಬ್ಲ್ಯೂಎಚ್ಒನ 76ನೇ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭವಾಗಿದೆ. ಈ ಬಾರಿ ಜೀವ ಉಳಿಸುವಿಕೆ, ಎಲ್ಲರಿಗೂ ಆರೋಗ್ಯ ಎಂಬ ನಿಟ್ಟಿನಲ್ಲಿ ಸಂಸ್ಥೆ ಗಮನ ಹರಿಸಿದೆ.
ಸಂಘಟನೆಯ ತಕ್ಷಣದ ಮತ್ತು ದೀರ್ಘಾವಧಿ ಭವಿಷ್ಯಕ್ಕೆ ಹೊಸ ನಿರ್ಣಯದೊಂದಿಗೆ ಭಾನುವಾರ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭವಾಗಿದ್ದು, ಮುಂದಿನ ಎರಡು ವರ್ಷದ ಬಜೆಟ್ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಸುಸ್ಥಿರ ಹಣಕಾಸು ಮತ್ತು ಡಬ್ಲ್ಯೂಎಚ್ಒ ಪ್ರಕ್ರಿಯೆ ಸುಧಾರಣೆಗೆ ಬದಲಾವಣೆ, ಹೊಣೆಗಾರಿಕೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
‘10 ದಿನದ ಸಭೆಯಲ್ಲಿ ಪ್ರತಿನಿಧಿಗಳು ಜಾಗತಿಕ ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ಗಂಭೀರ ಪಾತ್ರದಲ್ಲಿ ಡಬ್ಲ್ಯೂಎಚ್ಒ ನಿರ್ಣಯಕ ಪರಿಸ್ಥಿತಿಗಳ ಚರ್ಚೆ ನಡೆಸಲಿದ್ದಾರೆ. ಕಳೆದ ವರ್ಷದ ಪ್ರಗತಿ, ಸಾಧನೆ, ಸವಾಲು ಮತ್ತು ಭವಿಷ್ಯದ ಆದ್ಯತೆಗಳಾದ ವಿಶ್ವ ಆರೋಗ್ಯ ಕವರೇಜ್, ತುರ್ತು ಸ್ಥಿತಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉತ್ತೇಜನೆಯ ಡಬ್ಲ್ಯೂಎಚ್ಒ ಕೆಲಸದ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಶಾಂತಿ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಒಂದು ರಾಷ್ಟ್ರದ ರೋಗಗಳು ಎಲ್ಲರಿಗೂ ಅಪಾಯ ಮಾಡುತ್ತದೆ. ಎಲ್ಲೆಡೆ, ಎಲ್ಲರಿಗೂ ಆರೋಗ್ಯ ಸುಧಾರಣೆಗೆ ಸಹಕಾರ ನೀಡುತ್ತದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟ್ಟೆರೆಸ್ ತಿಳಿಸಿದರು. 75 ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಉಗಮವಾದಾಗಿನಿಂದಲೂ ಮಾನವನ ಆರೋಗ್ಯ ಹೆಚ್ಚು ಸುಧಾರಣೆ ಕಂಡಿದೆ. ಜಾಗತಿಕ ಜೀವನ ನಿರೀಕ್ಷೆಯೂ ಶೇ 50ರಷ್ಟು ಹೆಚ್ಚಾಗಿದೆ. ಶಿಶುಗಳ ಸಾವಿನ ಪ್ರಮಾಣ ಶೇ 60ರಷ್ಟು ಕುಸಿದಿದೆ, ಸಿಡುಬು ರೋಗವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ತಿಳಿಸಿದರು.