ನವದೆಹಲಿ: ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಬಿಸಿಲಿನ ಝಳಕ್ಕೆ ಜನರು ಪರಿತಪಿಸುತ್ತಿದ್ದಾರೆ. ಬಿಸಿ ಅಲೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಹಿನ್ನೆಲೆ ಈ ಸಂಬಂಧ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಈ ಬೇಸಿಗೆಯ ಬಿಸಿಲಿನ ತಾಪ ಹಲವು ಪ್ರದೇಶದಲ್ಲಿ 40 ರಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುತ್ತದೆ. ಭಾರತದಲ್ಲಿ ಅನೇಕ ಮಂದಿ ಈ ಬಿಸಿಲಿನ ಅಲೆಗೆ ಸಾವನ್ನಪ್ಪಿದ ದಾಖಲೆ ಕೂಡ ಇದೆ. ಈ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಕ್ಕೆ ಮುಂದಾಗಲಾಗಿದೆ. ಇದರ ಜೊತೆಗೆ ಪ್ರತಿಯೊಬ್ಬರು ವೈಯಕ್ತಿಕವಾಗಿ ಕಾಳಜಿ ವಹಿಸುವ ಮೂಲಕ ಈ ಬೇಗೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಬೇಸಿಗೆಯಲ್ಲಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ನಿರ್ಜಲೀಕರಣ ಮತ್ತು ಶಾಖದ ಬಳಲಿಕೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈ ಋತುಮಾನದಲ್ಲಿ ಗಾಳಿಯಾಡುವ ತೆಳುವಾದ ಬಟ್ಟೆ ಧರಿಸುವುದು, ಹೆಚ್ಚಿನ ನೀರು, ಎಳನೀರು ಮತ್ತಿತರ ಪಾನೀಯ ಸೇವನೆ ಅತ್ಯವಶ್ಯ. ಜೊತೆಗೆ ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಬೇಸಿಗೆಯ ಬಳಲಿಕೆ ನಿವಾರಣೆಗೆ ಮತ್ತು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡುವಲ್ಲಿ ಎಳನೀರು ಪ್ರಮುಖವಾಗಿದೆ. ಈ ಎಳನೀರು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತು ಕೃಷಿ ತಂತ್ರಜ್ಞಾನದ ಸ್ಟ್ರಾರ್ಟ್ ಅಪ್ ಸಂಸ್ಥಾಪಕರು ಮತ್ತು ಸಿಇಒ ವರುಣ್ ಖುರಾನ್ ತಿಳಿಸಿದ್ದಾರೆ.
ಎಲೆಕ್ಟ್ರಾಲೈಟ್ಸ್: ಎಳನೀರಿನಲ್ಲಿ ಪೋಷಾಶಿಯಂ, ಸೋಡಿಯಂ ಮತ್ತು ಮ್ಯಾಂಗನೀಸ್ನಂತ ಎಲೆಕ್ಟ್ರಾಲೈಟ್ಸ್ ಅನ್ನು ಕಾಣಬಹುದು. ಈ ಪಾನಿಯ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಎದುರಾಗದಂತೆ ಮಾಡುತ್ತದೆ.
ಹೈಡ್ರೇಷನ್:ದೇಹಕ್ಕೆ ಬೇಕಾದ ಜಲ ಸಂಚಯವನ್ನು ಈ ಏಳನೀರು ಮಾಡುತ್ತದೆ. ಜೊತೆಗೆ ಇದು ಬೆವರಿನಿಂದ ನಷ್ಟವಾಗುವ ನೀರಿನಾಂಶವನ್ನು ಮರು ಸ್ಥಾಪಿಸುತ್ತದೆ. ಜೊತೆಗೆ ನಿರ್ಜಲೀಕರಣ ಮಾಡುವ ಸಕ್ಕರೆ ಅಥವಾ ಹೈ ಕ್ಯಾಲೋರಿ ಪಾನೀಯದಂತೆ ಇದು ಅಲ್ಲ.