ವಾತಾವರಣದಲ್ಲಿನ ತಾಪಮಾನ ಏರಿಕೆಯು ಹಲವು ಜಾಗತಿಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹವಾಮಾನದ ಹೊರತಾಗಿಯೂ ಇದು ವ್ಯಕ್ತಿಯ ಉತ್ಪಾದಕತೆ ಮೇಲೆ ಕೂಡ ಪರಿಣಾಮವನ್ನು ಬೀರುತ್ತದೆ. ಬಿಸಿಲಿ ಹೊರತಾಗಿ ಹವಾನಿಯಂತ್ರಿಕ (ಎಸಿ) ಫ್ಯಾಕ್ಟರಿಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಮೇಲೆ ಕೂಡ ತಾಪಮಾನದ ಏರಿಕೆ ಪರಿಣಾಮ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಚೀನಾದ ಎಕ್ಸೆಟರ್ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಪರಿಸರದ ತಾಪಮಾನ ಒಂದು ಡಿಗ್ರಿ ಏರಿಕೆಯಾದರೂ ಅದು ಕೆಲಸದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಲೇಖಕರು ತಿಳಿಸಿದ್ದಾರೆ.
ಉತ್ಪಾದಕತೆ ಕುಸಿತ: ರಾತ್ರಿ ಸಮಯದಲ್ಲಿ ತಾಪಮಾನ ಏರಿಕೆಯಾಗುವುದರಿಂದಲೂ ಅದು ನಿದ್ರೆ ಅಥವಾ ಕೆಲಸದ ಮೇಲೆ ಪರಿಣಾಮ ಬೀರಲಿದೆ. ಕಚೇರಿಯ ಹೊರಗೆ ಕೆಲಸ ಮಾಡುವವರಿಗೆ ತಾಪಮಾನದ ಹೆಚ್ಚಳ ಪರಿಣಾಮ ಬೀರುವುದು ಸಹಜ. ಆದರೆ, ಹವಾನಿಯಂತ್ರಿತ ಕಚೇರಿಗಳಲ್ಲಿ ಕೆಲಸ ಮಾಡುವವರ ಉತ್ಪಾದಕತೆ ಕುಗ್ಗಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. 35 ಸಾವಿರ ಕೆಲಸಗಾರರು ವಿವಿಧ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಇದು ಅವರ ಉತ್ಪಾದಕತೆ ಮೇಲೆ ಪರಿಣಾಮ ಬೀರಿದೆ ಎಂದು ತೋರಿಸಿದೆ. ಹೊರಗಿನ ವಾತಾವರಣದಲ್ಲಿ ಒಂದು ಡಿಗ್ರಿ ತಾಪಮಾನ ಹೆಚ್ಚಳ ಉತ್ಪಾದಕತೆ ಸಾಧನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಪ್ರಪಂಚದಾದ್ಯಂತ ಏರುತ್ತಿರುವ ತಾಪಮಾನವು ಮಾನವೀಯತೆಯ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.