ಬೆಂಗಳೂರು: ಭಾರತೀಯರ ದಿನ ಆರಂಭವಾಗುವುದೇ ಬಿಸಿ ಬಿಸಿಯ ಚಹಾದ ಕುಟುಕು ಏರಿದ ಬಳಿಕ. ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ಟೀ ಅನೇಕರ ಮೆಚ್ಚಿನ ಪಾನೀಯ. ಯಾವುದೇ ಸಾಮಾಜಿಕ ಆರ್ಥಿಕ ವ್ಯತ್ಯಾಸವಿಲ್ಲದೆ, ಪ್ರತಿಯೊಬ್ಬರು ಇಚ್ಚೆ ಪಡುವುದು ಇದರ ಮತ್ತೊಂದು ವಿಶೇಷತೆ. ಭಾರತದ ಸಾಂಸ್ಕೃತಿಯಕತೆ ಮತ್ತು ಆತಿಥ್ಯ ಸೇರಿದಂತೆ ಅನೇಕ ಸಂದರ್ಭದಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶವೂ ಅತಿಥಿ ದೇವೊ ಭವದಲ್ಲಿ ನಂಬಿಕೆ ಹೊಂದಿದ್ದು, ಯಾವುದೇ ಮನೆಯ ಅತಿಥ್ಯದಲ್ಲಿ ಟೀ ನೀಡದೇ ಇರಲು ಸಾಧ್ಯವಿಲ್ಲ. ಭಾರತದಲ್ಲಿ ಟೀ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಕಾರಣ ಏನು ಎಂಬ ಅನೇಕ ಪ್ರಶ್ನೆ ನಿಮ್ಮಲ್ಲಿದ್ದರೆ, ಅದಕ್ಕೆ ಇಲ್ಲಿದೆ ಉತ್ತರ.
ಪ್ರತಿ ಋತುಮಾನವೂ ಟೀ ಸೀಸನ್:ಟೀ ಪ್ರೇಮಿ ನೀವಾಗಿದ್ದರೆ, ಅದು ಯಾವುದೇ ವಾತಾವರಣ ಇದ್ರೂ ಕೈಯಲ್ಲಿ ಒಂದು ಕಪ್ ಚಹಾ ಇರಲೇ ಬೇಕು. ನಡುಗುತ್ತಿದ್ದರೂ ಸರಿಯೇ ಬೆವರು ಸುರಿಯುತ್ತಿದ್ದರೂ ಸರಿಯೇ. ಯಾವುದೇ ಋತುಮಾನದ ಗಡುವು ಇದಕ್ಕಿಲ್ಲ. ಅದರಲ್ಲೂ ಮಳೆಗಾಲದಲ್ಲಿ ಪಕೋಡದ ಜೊತೆಗೆ ಚಹಾ ಸೇರಿದರೆ ಮುಗಿದೇ ಹೋಯಿತು. ಚಹಾದಲ್ಲಿ ಕೆಲವು ಮಸಾಲೆಗಳನ್ನು ಏಲಕ್ಕಿ, ಶುಂಠಿ, ಚಕ್ಕೆಯನ್ನು ಸೇರಿಸುವುದರಿಂದ ಇದು ನಿಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ.
ಫಿಟ್ನೆಸ್ ಪ್ರಯಾಣಕ್ಕೆ ಸಾಥ್:ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಚಹಾ ನಿಮ್ಮಗೆ ತಾಜಾ ಅನುಭವ ಅನ್ನು ನೀಡುತ್ತದೆ. ಚಹಾ ನೈಸರ್ಗಿಕವಾಗಿ ಕೆಫಿನ್ ಅಂಶವನ್ನು ಹೊಂದಿದ್ದು, ಶಕ್ತಿ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ ಜೊತೆಗೆ ವರ್ಕ್ಔಟ್ ವೇಳೆ ಗುರಿ ಸುಧಾರಣೆಗೆ ಸಹಾಯ ಮಾಡುತ್ತದೆ. ಇನ್ನು ಚಹಾದ ವಿವಿಧ ಬಗೆಗೆ ಬಂದರೆ, ಉದಾಹರಣೆ ಹನಿ ಗ್ರೀನ್ ಚಹಾ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಚಕ್ಕೆ, ಶುಂಠಿ, ಏಲಕ್ಕಿ ಚಹಾ ವಿಭಿನ್ನ ರುಚಿ ನೀಡುವ ಜೊತೆಗೆ ಆರೋಗ್ಯದ ಲಾಭವೂ ಹೊಂದಿದೆ.
ಕಚೇರಿಯ ಒತ್ತಡ ಹೊರಹಾಕಲು: ವೀಕೆಂಡ್ ರಜೆಯಿಂದ ಮರಳಿ ಬಂದ ಬಹುತೇಕರಿಗೆ ಮಂಡೆ ಬ್ಲೂಸ್ ಕಾಡುವುದು ಸುಳ್ಳಲ್ಲ. ಅಥವಾ ಕಚೇತಿ ಒತ್ತಡ, ಪ್ರಮುಖವಾದ ಮೀಟಿಂಗ್ಗಳು ನಿಮ್ಮ ತಲೆ ಬಿಸಿ ಮಾಡಿದಾಗ ಒಮ್ಮೆ ನಿಮ್ಮಿಷ್ಟವಾದ ಚಹಾ ಸೇವಿಸಿ. ಈ ವೇಳೆ ನೀವು ಚಾರ್ಜ್ ಆಗುವವುದು ಸುಳ್ಳಲ್ಲ. ಜೊತೆಗೆ ಸಹೋದ್ಯೋಗಿನ ಸಾಮರಸ್ಯಕ್ಕೆ ಕೂಡ ಈ ಚಹಾ ಔತಣಕೂಟ ಸಹಾಯವಾಗುತ್ತದೆ.