ಟ್ಯಾಟೂ ಅಥವಾ ಹಚ್ಚೆಗಿರುವ ಟ್ರೆಂಡ್ ಮಾತ್ರ ಕಮ್ಮಿಯಾಗುವ ಮಾತೇ ಇಲ್ಲ. ತಮ್ಮ ದೇಹದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ತಮ್ಮ ಇಷ್ಟದ ಟ್ಯಾಟೂಗಳನ್ನು ಜನರು ಹಾಕಿಸಿಕೊಂಡು ಖುಷಿ ಪಡುತ್ತಾರೆ. ಆದರೆ ಈ ಹಚ್ಚೆ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದಿಯಾ. ಹಾಗಾದರೆ ಒಮ್ಮೆ ಈ ಸುದ್ದಿಯನ್ನು ಓದಿ.
ಹೌದು, ಸ್ಟೈಲಿಶ್ ಆಗಿ ಕಾಣಲು ನೀವು ಕೈ ಮೇಲೆ, ಎದೆ ಮೇಲೆ, ಕಾಲಿನ ಮೇಲೆ, ಕುತ್ತಿಗೆಯ ಭಾಗ, ಬೆನ್ನಿನ ಮೇಲೆಲ್ಲ ಟ್ಯಾಟೂ ಹಾಕಿಸಿಕೊಂಡಿರಬಹುದು. ಇದೇ ಟ್ಯಾಟೂ ಏಡ್ಸ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗೆ ಕಾರಣವಾಗಲಿವೆ. ಇದಕ್ಕೂ ಮೊದಲೂ ಹಚ್ಚೆ ಹಾಕಿಸಿಕೊಂಡಿದ್ದರಿಂದ ಅನೇಕರು ಹೆಪಟೈಟಿಸ್ ಸಿ ಕಾಯಿಲೆಗಳಿಗೆ ತುತ್ತಾಗಿರುವುದು ನಿಮಗೆ ಗೊತ್ತೇ ಇದೆ. ಇದೇ ರೀತಿ ಏಡ್ಸ್ ನಂತರ ಅಪಾಯಕಾರಿ ಸೋಂಕಿಗೆ ನೀವು ತುತ್ತಾಗಬಹುದು.
ಟ್ಯಾಟೂಗು ಏಡ್ಸ್ಗೂ ಸಂಬಂಧ ಹೇಗೆ?:ದೇಹದ ಮೇಲ್ಭಾಗ ಹಾಕಿಸಿಕೊಳ್ಳುವ ಟ್ಯಾಟೂ ದೇಹದ ಒಳಗೆ ಹೇಗೆ ಕಾಯಿಲೆಗೆ ಕಾರಣವಾಗಬಹದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ. ನೀವು ಹಚ್ಚೆ ಹಾಕಿಸಿಕೊಳ್ಳುವಾಗ ಖಂಡಿತ ಗಮನಿಸಿರುತ್ತೀರಿ. ನಿಮ್ಮ ಚರ್ಮದ ಮೇಲೆ ಹಚ್ಚೆ ಹಾಕುವಾಗ ಸೂಜಿಯಂತಹ ಪರಿಕರಣವನ್ನು ಉಪಯೋಗಿಸುತ್ತಾರೆ. ಇದರ ಒಳಗೆ ವಿವಿಧ ಬಣ್ಣಗಳನ್ನು ಬಳಸುತ್ತಾರೆ. ಇಲ್ಲಿ ನೀವು ಹಚ್ಚೆ ಹಾಕಿಸುವುದು ತಪ್ಪಲ್ಲ. ಆದರೆ ನೀವು ಹಚ್ಚೆ ಹಾಕಿಸಿಕೊಳ್ಳುವಾಗ ಬಳಸುವ ಸೂಜಿ ಅಥವಾ ಪರಿಕರಣಗಳು ಶುದ್ಧವಾಗಿದೆಯಾ ಎಂಬುದು ಮುಖ್ಯವಾಗಿರುತ್ತದೆ.
ಎಲ್ಲಿಯಾದರು ಆ ಸೂಜಿಯನ್ನು ಈ ಮೊದಲು ಬೇರೆಯವರಿಗೆ ಟ್ಯಾಟೂ ಹಾಕಲು ಬಳಸಿ ನಂತರ ಅದೇ ಸೂಜಿಯನ್ನು ನಿಮಗೂ ಬಳಸಿದರೆ ಅಪಾಯ. ಬೇರೆಯವರ ರಕ್ತ ಆ ಸೂಜಿಯಲ್ಲಿದ್ದು, ಅದನ್ನೇ ಬೇರೆಯವರಿಗೆ ಬಳಸಿದಾಗ ಆ ರಕ್ತದ ಅಂಶಗಳು ನಿಮ್ಮ ದೇಹಕ್ಕೆ ಸೇರುವ ಸಾಧ್ಯತೆ ಶೇಕಡ 75 ರಷ್ಟಿದೆ. ಇದರಿಂದ ಬೇರೆಯವರಿಗೆ ಇರುವ ರೋಗ ನಿಮಗೂ ಹರಡುವ ಸಾಧ್ಯತೆ ಇದೆ. ಇದಲ್ಲದೆ ಚರ್ಮದ ಸಮಸ್ಯೆಗಳು, ಅಲರ್ಜಿ ಉಂಟಾಗಿ ಗುಣಪಡಿಸಲಾಗದ ಮಟ್ಟಿಗೆ ಉಲ್ಬಣಿಸಬಹುದು.