ವಯಸ್ಸಾದವರಲ್ಲಿ ಅತ್ಯಂತ ಹೆಚ್ಚು ಗೋಚರಿಸುವ ಲಕ್ಷಣ ಎಂದರೆ ಚರ್ಮದ ಸುಕ್ಕುಗಟ್ಟುವಿಕೆ. ನಿಮ್ಮ ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಸುಕ್ಕುಗಟ್ಟುವಿಕೆಯ ಪರಿಣಾಮವು ಹೆಚ್ಚಾಗಿ ಮುಖದ ಮೇಲೆ ಕಂಡುಬರುತ್ತದೆ. ಚರ್ಮವು ಸುಕ್ಕುಗಟ್ಟುಲು ಕಾರಣಗಳನ್ನು ನೀವು ತಿಳಿದಿದ್ದರೆ, ಅವುಗಳನ್ನು ತಡೆಗಟ್ಟಲು ಪ್ರಮುಖ ಕ್ರಮಗಳನ್ನು ಇಲ್ಲಿ ಕಾಣಬಹುದು. ತ್ವಚೆಯ ಮೇಲಿನ ಸುಕ್ಕುಗಳಿಗೆ ವಯಸ್ಸಾಗುವುದೊಂದೇ ಕಾರಣವಲ್ಲ. ಸೌಂದರ್ಯದ ಆರೈಕೆಯಲ್ಲಿನ ಕೆಲವು ತಪ್ಪುಗಳು ಮತ್ತು ನಮ್ಮ ಜೀವನಶೈಲಿಯೂ ಕಾರಣವಾಗುತ್ತದೆ.
ಉರಿಯುವ ಬಿಸಿಲಿನಿಂದ ಹೆಚ್ಚು ತಿರುಗಾಡಬೇಡಿ: ಉರಿಯುವ ಬಿಸಿಲಿನಲ್ಲಿ ಹೊರಗೆ ನಡೆಯುವಾಗ ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಧ್ಯಾಹ್ನದ ಅವಧಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚಿಕ್ಕ ವಯಸ್ಸಿನವರಲ್ಲಿ ಈ ರೀತಿ ಎಫೆಕ್ಟ್ ಹೆಚ್ಚಾಗಿ ಕಾಣಿಸಲಿದೆ. ಅದಕ್ಕಾಗಿಯೇ ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಅನ್ವಯಿಸುವ ರಕ್ಷಣಾತ್ಮಕ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು.
ಮೇಕಪ್ ಹಾಕಿಕೊಂಡು ಮಲಗುವುದು ಒಳ್ಳೆಯದಲ್ಲ:ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಅಗತ್ಯ ಬಿದ್ದರೆ, ಮೇಕಪ್ ಮಾಡಿಕೊಳ್ಳುತ್ತೇವೆ. ಆದರೆ, ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಮೇಕಪ್ ತೆಗೆದು ಮುಖವನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮೇಕಪ್ ಉತ್ಪನ್ನಗಳಲ್ಲಿ ಇರುವ ಫ್ರೀ ರಾಡಿಕಲ್ಗಳು ಮತ್ತು ಮಾಲಿನ್ಯಕಾರಕಗಳು ಎಲ್ಲ ಪ್ರಕಾರದ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಸುಕ್ಕುಗಟ್ಟವಂತೆ ಮಾಡುತ್ತವೆ. ಹಾಗಾಗಿ ಮೇಕಪ್ ಹಾಕಿಕೊಂಡು ಮಲಗುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು.
ತೂಕದಲ್ಲಾಗುವ ಬದಲಾವಣೆ:ನಮ್ಮ ದೇಹದ ತೂಕದಲ್ಲಿನ ಬದಲಾವಣೆಗಳು ಕೂಡಾ ಚರ್ಮದ ಮೇಲೆ ಸುಕ್ಕುಗಳನ್ನು ಉಂಟುಮಾಡಬಹುದು. ಅದೇ ಸಮಯದಲ್ಲಿ ತೂಕ ಕಡಿಮೆಯಾಗುವುದು ಅಥವಾ ತೂಕ ಹೆಚ್ಚಾಗುವುದು ಇದ್ದರೆ, ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಂಡು ಚರ್ಮವು ಸುಕ್ಕುಗಟ್ಟುವಿಕೆಯು ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ತೂಕ ತುಂಬಾ ಕಡಿಮೆ ಅಥವಾ ಹೆಚ್ಚು ಆಗದಂತೆ ಎಚ್ಚರಿಕೆ ವಹಿಸಬೇಕು.