ಕರ್ನಾಟಕ

karnataka

ETV Bharat / sukhibhava

ಉದ್ದದ ಬಲಶಾಲಿ ಕೂದಲು ನಿಮ್ಮದಾಗಬೇಕೇ? ಈ ನೈಸರ್ಗಿಕ ಪದಾರ್ಥಗಳಿಂದ ಆರೈಕೆ ಮಾಡಿ ಸಾಕು! - ಬಹುತೇಕರನ್ನು ಕಾಡುವ ಸಮಸ್ಯೆ

ನೈಸರ್ಗಿಕ ವಿಧಾನಗಳನ್ನು ಬಳಸಿ ಕೂದಲಿಗೆ ಸರಳ ಆರೈಕೆ ಮಾಡುವ ಮೂಲಕ ಕೂದಲಿನ ಆರೋಗ್ಯ ಕಾಪಾಡಬಹುದಾಗಿದೆ

take care of these natural ingredients to get long and strong hair!
take care of these natural ingredients to get long and strong hair!

By

Published : Jul 21, 2023, 5:30 PM IST

ಹೈದರಾಬಾದ್​: ಕೂದಲು ಉದುರುವುದು ಮತ್ತು ತೆಳ್ಳಗೆ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಬಹುತೇಕರನ್ನು ಕಾಡುವ ಸಮಸ್ಯೆಯಾಗಿದೆ. ಆಧುನಿಕ ಜೀವನಶೈಲಿ, ಮಾಲಿನ್ಯ ಮತ್ತು ಕೂದಲಿನ ಆರೈಕೆ ಉತ್ಪನ್ನದಲ್ಲಿರುವ ರಾಸಾಯನಿಕಗಳು ಕೂದಲಿನ ಗುಣಮಟ್ಟ ಕಡಿಮೆಯಾಗಲು ಪ್ರಮುಖ ಕಾರಣವಾಗುತ್ತದೆ. ಇದರಿಂದ ಕೂದಲಿಗೆ ಹಾನಿಯಾಗಿ ಅದು ಉದುರುವಂತೆ ಆಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಅನೇಕ ಮಹಿಳೆಯರು ನೈಸರ್ಗಿಕ ವಿಧಾನದ ಮೂಲಕ ಕೂದಲಿನ ಬೆಳವಣಿಗೆ ಮುಂದಾಗುತ್ತಾರೆ. ಈ ರೀತಿಯ ನೈಸರ್ಗಿಕ ವಿಧಾನಗಳನ್ನು ಬಳಸಿ ಕೂದಲಿಗೆ ಸರಳ ಆರೈಕೆ ಮಾಡುವ ಮೂಲಕ ಕೂದಲಿನ ಆರೋಗ್ಯ ಕಾಪಾಡಬಹುದಾಗಿದೆ

ಬೆಟ್ಟದ ನೆಲ್ಲಿಕಾಯಿ

ನೆಲ್ಲಿಕಾಯಿ: ಭಾರತೀಯರಲ್ಲಿ ಸಾಮಾನ್ಯವಾಗಿ ಆಮ್ಲಾ ಎಂದು ಜನಪ್ರಿಯವಾಗಿರುವ ಈ ವಸ್ತು, ಕೂದಲಿನ ಬೆಳವಣಿಗೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಕೂದಲಿನ ಕಿರು ಚೀಲಗಳನ್ನು ಬಲಗೊಳಿಸುತ್ತದೆ. ಇದರಿಂದ ಕೂದಲು ಉದುರುವುದು ತಡೆಯಲು ಸಹಾಯ ಮಾಡುತ್ತದೆ. ಈ ಆಮ್ಲವನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಾಕಬಹುದಾಗಿದ್ದು, ಜೊತೆಗೆ ಇದರ ಸೇವನೆ ಕೂಡ ಉತ್ತಮ ಪರಿಣಾಮ ಬೀರುತ್ತದೆ. ಇದರಲ್ಲಿನ ಆ್ಯಂಟಿ ಬ್ಯಾಕ್ಟಿರೀಯಾ ಅಂಶಗಳು ಕೂದಲಿನಲ್ಲಿ ಏಳುವ ಹೊಟ್ಟಿನ ಸಮಸ್ಯೆಗೆ ಮುಕ್ತಿ ನೀಡುತ್ತದೆ.

ಆಲೋವೆರಾ

ಆಲೋವೆರಾ: ಅಧಿಕ ಔಷಧ ಮತ್ತ ಪ್ರಯೋಜನ ಇರುವ ಈ ಆಲೋವೆರಾ ಚರ್ಮ ಮತ್ತು ಕೂದಲಿನ ಆರೈಕೆಗೆ ಅತ್ಯವಶ್ಯಕವಾಗಿದೆ. ಈ ಆಲೋವೆರಾದ ರಸವನ್ನು ನೇರವಾಗಿ ತಲೆ ಕೂದಲಿನ ಬುಡಕ್ಕೆ ಹೆಚ್ಚುವುದರಿಂದ ಕೂದಲನ್ನು ಬಲಶಾಲಿ ಮತ್ತು ದಡ್ಡವಾಗಿ ಮಾಡಬಹುದು. ಆಲೋವೆರಾವನ್ನು ಅನೇಕ ಸೌಂದರ್ಯ ವರ್ಷಗಳಾಗಿ ಕೂಡ ಬಳಕೆ ಮಾಡಲಾಗುವುದು. ತ್ವಚೆಯ ಮಾಶ್ಚರೈಸರ್​ ಕಾಪಾಡಲು ಇದು ಅವಶ್ಯಕವಾಗಿದೆ.

ಆಲಿವ್​ ಎಣ್ಣೆ

ಆಲಿವ್​ ಎಣ್ಣೆ: ಇದು ಕೂಡ ಕೂದಲಿಗೆ ನೈಸರ್ಗಿಕ ಕಂಡಿಷನರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಒರಟು ಕೂದಲನ್ನು ಮೃದುವಾಗಿ ಮಾಡುತ್ತದೆ. ಇದು ಪೋಷಕಾಂಶದ ಆಗರವಾಗಿದ್ದು, ಕೂದಲು ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಲಿವ್​ ಎಣ್ಣೆ ರಾಸಾಯನಿಕಗಳಿಂದ ಹಾನಿಗೊಂಡ ಕೂದಲನ್ನು ರಕ್ಷಣೆ ಮಾಡುತ್ತದೆ. ಇದನ್ನು ಬುಡಕ್ಕೆ ನೇರವಾಗಿ ಹಾಕುವುದರಿಂದ ಆಲಿವ್​ ಎಣ್ಣೆ ದಟ್ಟ ಕೂದಲ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಇದು ಕೂದಲಿಗೆ ಮಾಶ್ಚರೈಸರ್​ ಒದಗಿಸಿ, ಮೃದುಗೊಳಿಸುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಕೂಡ ಆರೋಗ್ಯಯುತವಾಗಿದೆ. ಇದು ಕೂದಲಿನ ಪ್ರೋಟಿನ್​ ನಷ್ಟವನ್ನು ತಡೆಯುತ್ತದೆ. ಕೂದಲಿನ ಸ್ವಚ್ಚತೆಗೆ ಅರ್ಧ ಗಂಟೆ ಮುಂಚೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ತೆಂಗಿನ ಎಣ್ಣೆಗೆ ಒಂದೆರಡು ನಿಂಬೆ ಹನಿಗಳನ್ನು ಹಾಕಿ ಕೂದಲಿಗೆ ಹಚ್ಚುವುದರಿಂದ ಇದು ಕೂದಲನ್ನು ಬಲಗೊಳಿಸಿ, ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಮೊಟ್ಟೆ

ಮೊಟ್ಟೆ: ಪ್ರೋಟಿನ್​ ಸಮೃದ್ಧ ಗುಣವೊಂದಿರುವ ಮೊಟ್ಟೆಯೂ ಕೂದಲಿನ ಮೃದುತ್ವಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ನೈಸರ್ಗಿಕವಾಗಿ ಕೂದಲಿನ ಕಂಡಿಷನರ್​ ಆಗಿ ವರ್ತಿಸುತ್ತದೆ. ವಾರದಲ್ಲಿ ಒಂದೆರಡು ದಿನ ಇದನ್ನು ಬಳಕೆ ಮಾಡುವುದರಿಂದ ಕೂದಲಿನ ವಿನ್ಯಾಸ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೊಟ್ಟೆಯನ್ನು ಹಚ್ಚಿನ ಅರ್ಧಗಂಟೆ ಬಳಿಕ ಶ್ಯಾಂಪೂವಿನಿಂದ ಕೂದಲನ್ನು ಸ್ವಚ್ಛಗೊಳಿಸಬೇಕು.

ಇದನ್ನೂ ಓದಿ: Benefits of Amla.. ಆಮ್ಲಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ; ವೈದ್ಯರ ವಿವರಣೆ ಇಲ್ಲಿದೆ..

ABOUT THE AUTHOR

...view details