ಕರ್ನಾಟಕ

karnataka

ETV Bharat / sukhibhava

ಪೋಷಕಾಂಶ ಸಮೃದ್ಧ ಸಿಹಿ ಗೆಣಸು ಅತಿಯಾಗಿ ತಿನ್ನ ಬಾರದು: ಯಾಕೆ ಗೊತ್ತಾ?

ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿರುವಂತೆ ಸಿಹಿ ಗೆಣಸಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಇವೆ. ಆದರೆ ಇದನ್ನು ಯಥೇಚ್ಛವಾಗಿ ಸೇವಿಸಬಾರದು.

By ETV Bharat Karnataka Team

Published : Dec 15, 2023, 11:31 AM IST

Sweet potatoes their exceptional nutritional content
Sweet potatoes their exceptional nutritional content

ಹೈದರಾಬಾದ್​: ಸಿಹಿ ಗೆಣೆಸು ಅಥವಾ ಸಿಹಿ ಆಲೂಗಡ್ಡೆಗಳು ಅತ್ಯಧಿಕ ಪೋಷಕಾಂಶಗಳಿಂದ ಕೂಡಿದೆ. ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿರುವಂತೆ ಇದರಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಆರೋಗ್ಯದ ಜೊತೆಗೆ ರುಚಿ ಹೆಚ್ಚಿಸುತ್ತದೆ.

ಪೋಷಕಾಂಶಗಳು: ಜರ್ನಲ್​ ಆಫ್​ ಫುಡ್​​ ಕಂಪೋಸಿಷನ್​ ಮತ್ತು ಅನಾಲೈಸ್​​ನಲ್ಲಿ ಪ್ರಕಟವಾದ ಸಂಶೋಧನೆ ಅನುಸಾರ, ಸಿಹಿ ಆಲೂಗಡ್ಡೆಗಳಲ್ಲಿ ವಿಟಮಿನ್​ ಎ ಸಮೃದ್ಧವಾಗಿದೆ. ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯ ನಿರ್ವಹಣೆ ಮಾಡಲು ಸಿಹಿ ಆಲೂಗಡ್ಡೆ ಸಹಾಯ ಮಾಡುತ್ತದೆ.

ಜರ್ನಲ್​ ಆಫ್​ ದಿ ಅಕಾಡೆಮಿ ಆಫ್​ ನ್ಯೂಟ್ರಿಷಿಯನ್​ ಅಂಡ್​ ಡಯಾಬೀಟಿಸ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇದರಲ್ಲಿ ವಿಟಮಿನ್​ ಸಿ, ಪೋಟಾಶಿಯಂ, ಫೈಬರ್​, ಉತ್ಕರ್ಷಣ ನಿರೋಧಕ ಗುಣ ಇದ್ದು, ಇದು ಒಟ್ಟಾರೆ ಆರೋಗ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಆರೋಗ್ಯ ಪ್ರಯೋಜನಗಳು:- ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯ: ಅಮೆರಿಕನ್​ ಜರ್ನಲ್​ ಆಫ್​​ ಕ್ಲಿನಿಕಲ್​ ನ್ಯೂಟ್ರಿಷಿಯನ್​ ಸೇರಿದಂತೆ ವಿಜ್ಞಾನಿಗಳ ಅಧ್ಯಯನ ಅನುಸಾರ, ಇದರಲ್ಲಿರುವ ವಿಟಮಿನ್​ ಎ ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ ಅಭಿವೃದ್ಧಿ:ನ್ಯೂಟ್ರಿಷಿಯನ್​ ಜರ್ನಲ್​ ಪ್ರಸ್ತುತ ಪಡಿಸದಂತೆ ಇದರಲ್ಲಿನ ವಿಟಮಿನ್​ ಸಿ ಮತ್ತು ಉತ್ಕರ್ಷಣ ನಿರೋಧಕ ಶಕ್ತಿಗಳು ದೇಹದ ರೋಘ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಅಲ್ಲದೇ ಇದು ಚಯಾಪಚಯ ಆರೋಗ್ಯ ಸುಧಾರಿಸಲಿದ್ದು, ಉಬ್ಬರವನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ: ಜರ್ನಲ್​ ಆಫ್​ ಹೈಪರ್ಟೆಷನ್​​ನಲ್ಲಿ ಪ್ರಕಟವಾದದಂತೆ ಇದರಲ್ಲಿನ ಪೋಟಾಶಿಯಂ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಿ, ಹೃದಯ ರಕ್ತನಾಳ ರೋಗದ ಅಪಾಯವನ್ನು ತಗ್ಗಿಸುತ್ತದೆ.

ಸಾಮರ್ಥ್ಯದಾಯಕ ಅಡ್ಡ ಪರಿಣಾಮ: ಸಂಶೋಧನಾ ಅಧ್ಯಯನಗಳ ಪ್ರಕಾರ, ಈ ಸಿಹಿ ಗೆಣಸುಗಳು ಕೆಲವು ಸಣ್ಣ ಅಡ್ಡ ಪರಿಣಾಮಗಳನ್ನು ಹೊಂದಿದೆ.

ಕಾರ್ಬೋಹೈಡ್ರೇಟ್​ ಅಂಶ: ಜರ್ನಲ್ ಆಫ್​ ಡಯಾಬೀಟಿಸ್​ ರಿಸರ್ಚ್​ ಅಧ್ಯಯನದ ಅನುಸಾರ ಮಧುಮೇಹಿಗಳು ಇದನ್ನು ಸೇವಿಸುವಾಗ ಎಚ್ಚರವಹಿಸಬೇಕು. ಇದರಲ್ಲಿ ಕಾರ್ಬೋಹೈಡ್ರೇಟ್​ ಅಂಶ ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಸುಧಾರಿತ ಪ್ರಮಾಣದಲ್ಲಿ ಇದರ ಸೇವನೆ ಮಾಡುವುದು ಒಳ್ಳೆಯದು

ಒಕ್ಸಲೆಟ್ಸ್​​: ಜರ್ನಲ್​ ಆಫ್​ ದಿ ಅಮೆರಿಕನ್​ ಸೊಸೈಟಿ ಆಫ್​ ನೆಫ್ರಾಲಾಜಿಯ ಅಧ್ಯಯನ ಅನುಸಾರ, ಇದರಲ್ಲಿನ ಒಕ್ಸಲೆಟ್ಸ್​​ ಇದ್ದು, ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.

ಅಲರ್ಜಿ: ಜರ್ನಲ್​ ಆಫ್​ ಆಲರ್ಜಿ ಮತ್ತು ಕ್ಲಿನಿಕಲ್​ ಇಮ್ಯೂನೊಲಾಜಿ ಅಧ್ಯಯನದ ಅನುಸಾರ, ಇದು ಕೆಲವರಲ್ಲಿ ಅಲರ್ಜಿ ಪ್ರತಿಕ್ರಿಯೆನ್ನು ಹೊಂದಿರಬಹುದು. ಈ ಲಕ್ಷಣ ಗಮನಿಸಿ ಸೇವಿಸುವುದು ಅಗತ್ಯವಾಗಿದೆ.

ಸಮತೋಲಿತ ಸೇವನೆ: ಸಿಹಿ ಗೆಣಸಿನಲ್ಲಿ ಸಿಹಿ ಅಂಶ ಇರುವ ಹಿನ್ನಲೆ ರಕ್ತದ ಸಕ್ಕರೆ ಮಟ್ಟ ಅಥವಾ ಕಾರ್ಬೋಹೈಡ್ರೇಟ್​​ ಗಮನಿಸಿ ಸುಧಾರಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಉತ್ತಮ.

ಇದನ್ನೂ ಓದಿ:ಚಳಿಗಾಲದಲ್ಲಿ ಕಾಡುವ ಅಸ್ಥಿಸಂಧಿವಾತ ಸಮಸ್ಯೆಗೆ ಈ ಆಹಾರಗಳ ಸೇವನೆ ಅವಶ್ಯ

ABOUT THE AUTHOR

...view details