ಹೃದಯಕ್ಕೆ ರಕ್ತದ ಹರಿವು ನಿಂತಾಗ ಹೃದಯಾಘಾತವಾಗುತ್ತದೆ. ಅದೇ ಹೃದಯ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ಅನಿರೀಕ್ಷಿತವಾಗಿ ಬಡಿತ ನಿಲ್ಲಿಸಿದ್ರೆ ಹೃದಯ ಸ್ತಂಭನ ಉಂಟಾಗುತ್ತದೆ. ಹೀಗಾದಾಗ ತಕ್ಷಣ ಚಿಕಿತ್ಸೆ ನೀಡದಿದ್ದರೆ ಹೃದಯ ಸ್ತಂಭನದಿಂದ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಹೃದಯಾಘಾತಗಳು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗುವುದಿಲ್ಲ. ಆದರೆ ಹಠಾತ್ ಹೃದಯ ಸ್ತಂಭನ ಸಂಭವಿಸಿದಾಗ, ಹೃದಯಾಘಾತವು ಸಾಮಾನ್ಯ ಕಾರಣವಾಗಿದೆ.
ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ ಎನ್‌ಎಚ್‌ಎಸ್ ಟ್ರಸ್ಟ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜ್ ನೇತೃತ್ವದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ರಿಸರ್ಚ್ ಹೆಲ್ತ್ ಇನ್ಫರ್ಮ್ಯಾಟಿಕ್ಸ್ (ಎನ್‌ಐಎಚ್‌ಆರ್-ಎಚ್‌ಐಸಿ) ಸಂಶೋಧಕರು ಈ ಸಂಬಂಧ ಅಧ್ಯಯನ ನಡೆಸಿದ್ದಾರೆ.
ಈ ಅಧ್ಯಯನವು 2010 ಮತ್ತು 2017 ರ ನಡುವೆ ಸಂಗ್ರಹಿಸಲಾದ 13,444 ರೋಗಿಗಳ ದತ್ತಾಂಶವನ್ನು ಆಧರಿಸಿದೆ.
ಹೃದಯಾಘಾತ ಮತ್ತು ನಂತರ ಹಠಾತ್ ಹೃದಯ ಸ್ತಂಭನದಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ ಎಂದು ಈ ಅಧ್ಯಯನ ಮೊದಲ ಬಾರಿಗೆ ತೋರಿಸಿಕೊಟ್ಟಿದೆ. ಹೃದಯಾಘಾತದ ಸಮಯದಲ್ಲಿ ಹೃದಯ ಸ್ತಂಭನವನ್ನು ಹೊಂದಿರುವವರು ಕೇವಲ ಹೃದಯಾಘಾತದಿಂದ ಬಳಲುತ್ತಿರುವವರಿಗಿಂತ ಎರಡು ಪಟ್ಟು ಹೆಚ್ಚಾಗಿ ವೆಂಟ್ರಿಕ್ಯುಲರ್ ಆರ್ಹೆತ್ಮಿಯಾ (VA) ಎಂದು ಕರೆಯಲ್ಪಡುವ ಅಸಹಜ ಹೃದಯದ ಲಯವನ್ನು ಹೊಂದಿರುತ್ತಾರೆ. ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿ, ಬಳಿಕ ಬಿಡುಗಡೆಯಾದವರು ಮೂರು ವರ್ಷಗಳಲ್ಲಿ ಸಾವಿಗೀಡಾಗುವ ಸಾಧ್ಯತೆ ಇದ್ದು, ಈ ಪರಿಸ್ಥಿತಿ ಶೇ.36 ರಷ್ಟು ರೋಗಿಗಳಿಗೆ ಬಂದಿದೆ ಎಂದು ಅಧ್ಯಯನ ಹೇಳುತ್ತದೆ.
ಇದನ್ನೂ ಓದಿ:ಯಶಸ್ವಿನಿ ಯೋಜನೆ: ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳೇನು?- ಯಾವೆಲ್ಲ ರೋಗಗಳಿಗೆ ಇದು ಅನ್ವಯ ಆಗುತ್ತೆ?
ಈ ಸ್ಥಿತಿಯ ರೋಗಿಗಳು ಇಂಪ್ಲಾಂಟ್ ಮಾಡಬಹುದಾದ ಕಾರ್ಡಿಯೋವರ್ಟರ್-ಡಿಫಿಬ್ರಿಲೇಟರ್ (ICD) ನಂತಹ ಹೆಚ್ಚುವರಿ ಚಿಕಿತ್ಸೆಗಳಿಂದ ಪ್ರಯೋಜನ ಪಡೆಯಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ಇದು ಅವರ ದೀರ್ಘಾವಧಿಯ ಆರೋಗ್ಯದ ಸಮಸ್ಯೆಯನ್ನು ಸುಧಾರಿಸುತ್ತದೆಯೇ ಎಂದು ನೋಡಲು ಅಸಹಜ ಹೃದಯದ ಲಯ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಒಂದು ಸಣ್ಣ ಸಾಧನವಾಗಿದೆ. ಏಕೆಂದರೆ ಕೆಲವು ಸಂದರ್ಭಗಳಲ್ಲಿ ಹೃದಯಾಘಾತವು ವೆಂಟ್ರಿಕ್ಯುಲರ್ ಆರ್ಹೆತ್ಮಿಯಾ (VA) ಎಂಬ ಸ್ಥಿತಿಗೆ ಕಾರಣವಾಗಬಹುದು. ಹೀಗೆಂದರೆ ಹೃದಯವು ನಿಲ್ಲುವ ಮೊದಲು ಜೋರಾಗಿ ಬಡಿದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಸಂಪೂರ್ಣವಾಗಿ ರಕ್ತ ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ಇದು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
ಅಧ್ಯಯನದಲ್ಲಿ ಭಾಗಿಯಾಗಿದ್ದ ಹಿರಿಯ ಲೇಖಕ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಲ್ಲಿ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಯ ಕ್ಲಿನಿಕಲ್ ಹಿರಿಯ ಉಪನ್ಯಾಸಕ ಡಾ. ಫೂಸಿಯೋಂಗ್ ಎನ್‌ಜಿ, “ಹೃದಯಾಘಾತದಿಂದ ಬಳಲುತ್ತಿರುವ ಹೆಚ್ಚಿನ ರೋಗಿಗಳು ಹೃದಯ ಸ್ತಂಭನವನ್ನು ಅನುಭವಿಸುವುದಿಲ್ಲ. ಆದಾಗ್ಯೂ, ನಮ್ಮ ಅಧ್ಯಯನದಲ್ಲಿ ಈ ರೀತಿಯ ರೋಗಿಗಳಲ್ಲಿ ಒಂದು ಸಣ್ಣ ಗುಂಪು ಇದೆ. ಇವರು ಆರಂಭಿಕ ಹೃದಯ ಸ್ತಂಭನದಿಂದ ಬದುಕುಳಿದರೆ ಅವರು ಮತ್ತಷ್ಟು ಸಮಸ್ಯೆ ಮತ್ತು ಸಾಯುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಿದ್ದಾರೆ. ಈ ರೀತಿಯ ರೋಗಿಗಳಿಗೆ ನಾವು ಹೇಗೆ ಚಿಕಿತ್ಸೆ ನೀಡುತ್ತೇವೆ ಎಂಬುದನ್ನು ನಾವು ನೋಡಬೇಕಾಗಬಹುದು ಮತ್ತು ನಮ್ಮ ಪ್ರಸ್ತುತ ಮಾರ್ಗಸೂಚಿಗಳನ್ನು ನವೀಕರಿಸಬೇಕಾಗಬಹುದು ಎಂದು ಈ ಅಧ್ಯಯನವು ಹೈಲೈಟ್ ಮಾಡಿದೆ. ಹೃದಯಾಘಾತ ರೋಗಿಗಳಿಗೆ ಪ್ರಸ್ತುತ ನೀಡಲಾಗುವ ಚಿಕಿತ್ಸೆಗಳ ಜೊತೆಗೆ ಈ ರೋಗಿಗಳು ICD ಗಳಿಂದ ಪ್ರಯೋಜನ ಪಡೆಯಬಹುದು. ಆದಾಗ್ಯೂ, ಈ ಸಿದ್ಧಾಂತವನ್ನು ಮೌಲ್ಯೀಕರಿಸಲು ನಾವು ಕ್ಲಿನಿಕಲ್ ಪ್ರಯೋಗ ನಡೆಸಬೇಕಾಗಿದೆ.