ಪ್ರೌಢಾವಸ್ಥೆಗೆ ಬಂದ ಯುವಕ-ಯುವತಿಯರಲ್ಲಿ ಕಾಮ ಭಾವನೆಗಳು ಉದ್ರೇಕಗೊಳ್ಳುವುದು ಸಹಜ. ಅವರಲ್ಲಿ ಲೈಂಗಿಕ ಸಾಮರ್ಥ್ಯ ಸಂತೃಪ್ತವಾಗಿರಬೇಕಾದರೆ ಅವರ ದೈಹಿಕ ಆರೋಗ್ಯವೂ ಕೂಡ ಉತ್ತಮವಾಗಿರಬೇಕು.
ಪುರುಷ ಮತ್ತು ಮಹಿಳೆಯಲ್ಲಿ ಲೈಂಗಿಕ ಭಾವನೆಗಳು ಕುಗ್ಗಿದ್ದರೆ, ಕಾಮ ಭಾವನೆಗಳನ್ನು ತೋರ್ಪಡಿಸದಿದ್ದರೆ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಯಾವುದೋ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದರ್ಥ.
ಮಹಿಳೆಯರು ಮತ್ತು ಪುರುಷರಲ್ಲಿ ಲೈಂಗಿಕ ಸಮಸ್ಯೆಗಳಿದ್ದರೆ ಅಂಥವರು ಲೈಂಗಿಕ ಭಾವನೆ ತೋರ್ಪಡಿಸುವುದು ಮತ್ತು ಸಂಭೋಗದಿಂದ ದೂರವಿರಲು ಬಯಸುತ್ತಾರೆ. ಸಮಸ್ಯೆಯ ಕಾರಣ ಅವರು ಲೈಂಗಿಕ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿರುತ್ತಾರೆ. ಹಾಗಾದರೆ, ಪುರುಷ- ಮಹಿಳೆಯಲ್ಲಿ ಲೈಂಗಿಕ ಭಾವನೆ ಮತ್ತು ದಾಂಪತ್ಯ ಜೀವನ ಸುಖಮಯವಾಗಿರಲು ಏನು ಮಾಡಬೇಕು? ಲೈಂಗಿಕತೆಯನ್ನು ಮತ್ತೆ ಮರಳಿ ಹೇಗೆ ಪಡೆಯಬಹುದು. ಯಾವ ಅಂಶಗಳು ಲೈಂಗಿಕತೆಯನ್ನು ಉದ್ರೇಕಿಸುತ್ತವೆ ಎಂಬ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
ಪ್ರಣಯಕ್ಕೆ ಫೀಲ್ಗುಡ್ ಹಾರ್ಮೋನ್
ಅದೆಷ್ಟೋ ಜನ ಪ್ರಣಯದ ಸುಖ ಅನುಭವಿಸಬೇಕು ಎಂದು ಹಾತೊರೆಯುತ್ತಿದ್ದರೂ ಅವರಲ್ಲಿ ಕೆಲ ಹಾರ್ಮೋನ್ಗಳ ಸಮಸ್ಯೆಯಿಂದ ಅವರು ಸುಖಾನುಭವವನ್ನು ಪಡೆಯುವಲ್ಲಿ ಸೋತಿರುತ್ತಾರೆ. ಗಂಡು- ಹೆಣ್ಣಿನ ನಡುವಿನ ಪ್ರಣಯ ನೆಮ್ಮದಿ ಮತ್ತು ಆರೋಗ್ಯವನ್ನು ನೀಡುತ್ತದೆ. ಪ್ರಣಯ ಸುಖಾನುಭವದಲ್ಲಿ 'ಫೀಲ್ ಗುಡ್ ಹಾರ್ಮೋನ್' (Feel Good Hormones)ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಪ್ರೀತಿಯ ಹಾರ್ಮೋನ್‌ಗಳು ಎಂದೂ ಕೂಡ ಕರೆಯುತ್ತಾರೆ. ಮನುಷ್ಯ ಖುಷಿ ಕೊಡುವ, ಸಂತೋಷಕರವಾದ ವಿಷಯಗಳಲ್ಲಿ ಭಾಗವಹಿಸಿದಾಗ ಈ ಫೀಲ್ ಗುಡ್ ಹಾರ್ಮೋನ್‌ಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ವಿರುದ್ಧ ಲಿಂಗಗಳನ್ನು ಸೆಳೆಯುತ್ತವೆ ಎಂಬುದು ಅಧ್ಯಯನದ ಸಾರ.
ಭಾವನೆಗಳನ್ನು ಉದ್ರೇಕಿಸುವ 'ಡೋಪಮೈನ್'