ಕರ್ನಾಟಕ

karnataka

ETV Bharat / sukhibhava

ನಕಾರಾತ್ಮಕ ಅಂಶಗಳನ್ನು ಹತ್ತಿಕ್ಕುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ: ಅಧ್ಯಯನ - ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ

ಭಯದಂತಹ ನಕಾರಾತ್ಮಕ ಅಂಶಗಳನ್ನು ಮನಸ್ಸಿನಿಂದ ತೊಡೆದು ಹಾಕುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

Suppressing negative aspects is good for mental health
Suppressing negative aspects is good for mental health

By ETV Bharat Karnataka Team

Published : Sep 23, 2023, 6:28 AM IST

ಲಂಡನ್​​:ನಕಾರಾತ್ಮಕ ಯೋಚನೆಗಳನ್ನು ಹತ್ತಿಕ್ಕುವ ಪ್ರಯತ್ನ ತಪ್ಪು. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಚಾರವೇ ತಪ್ಪಾಗಿರಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ. ಕೇಂಬ್ರಿಡ್ಜ್​​ ಯುನಿವರ್ಸಿಟಿಯ ವಿಜ್ಞಾನಿಗಳು ಈ ಸಂಬಂಧ 16 ದೇಶದಲ್ಲಿ 120 ಭಾಗಿದಾರರ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ವೇಳೆ ನಕಾರಾತ್ಮಕ ಅಂಶಗಳನ್ನು ಹತ್ತಿಕ್ಕಲು ತಿಳಿಸಿದಾಗ ಅವರ ಮಾನಸಿಕ ಆರೋಗ್ಯ ಸುಧಾರಣೆ ಕಂಡಿದೆ ಎಂದಿದ್ದಾರೆ.

ಸಿಗ್ಮಂಡ್​ ಫ್ರಾಯಿಡ್​​ ಚಿಂತನೆಯ ಪ್ರಕಾರ, ನಕಾರಾತ್ಮಕ ಚಿಂತನೆಗಳನ್ನು ಹತ್ತಿಕ್ಕುವುದರಿಂದ ಅದು ಸುಪ್ತ ಮನಸ್ಸಿನಲ್ಲಿ ಒಳಿಯುತ್ತದೆ. ಇದು ನಮ್ಮ ನಡವಳಿಕೆ ಮತ್ತು ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದರು ಎಂದು ವಿಶ್ವವಿದ್ಯಾಲದ ಮೆಡಿಕಲ್​ ರಿಸರ್ಚ್​ ಕೌನ್ಸಿಲ್​ನ ಪ್ರೋ ಮೈಕೆಲ್​ ಆ್ಯಂಡ್ರೆಸನ್​ ತಿಳಿಸಿದ್ದಾರೆ.

ಆದರೆ ಸೈಕೋಥೆರಪಿ ಅಂದರೆ ಮಾನಸಿಕ ಚಿಕಿತ್ಸೆ ಅಂಶದಲ್ಲಿ ಈ ರೀತಿಯ ಚಿಂತನೆಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಇವುಗಳನ್ನು ಒಮ್ಮೆ ಹತ್ತಿಕ್ಕಿದರೆ ಅದರ ಶಕ್ತಿಯನ್ನು ನಿವಾರಣೆ ಮಾಡಬಹುದು. ಇತ್ತೀಚಿನ ಅಧ್ಯಯನ ಪ್ರಕಾರ, ಚಿಂತನೆಗಳನ್ನು ಹತ್ತಿಕ್ಕುವುದರಿಂದ ಅವರು ಪರಿಣಾಕಾರಿಯಾಗುವುದಿಲ್ಲ. ಇದು ಜನರಿಗೆ ಬೇರೆ ಚಿಂತನೆ ಮಾಡಲು ಸಾಧ್ಯವಾಗಿಸುತ್ತದೆ. ಇದು ಒಂದು ರೀತಿ ಗುಲಾಬಿ ಬಣ್ಣದ ಆನೆ ಬಗ್ಗೆ ಚಿಂತಿಸಬೇಡ ಎಂಬ ಐಡಿಯಾದಂತೆ ಎಂದಿದ್ದಾರೆ.

ಖಿನ್ನತೆ, ಆತಂಕ, ಪಿಟಿಎಸ್​ಟಿಯಂತಹ ಸಮಸ್ಯೆ ನಿವಾರಣೆಗೆ ಮತ್ತು ಅವುಗಳ ಸಮರ್ಪಕವಾಗಿ ನಿರ್ವಹಿಸಲು ನಕಾರಾತ್ಮಕ ಅಂಶಗಳನ್ನು ಹತ್ತಿಕ್ಕುವುದು ಅತ್ಯವಶ್ಯಕವಾಗಿದೆ ಎಂದು ಆಂಡ್ರಸನ್​ ತಿಳಿಸಿದ್ದಾರೆ.

ಸಾಂಕ್ರಾಮಿಕತೆಯಿಂದ ಈಗಾಗಲೇ ಜನರಲ್ಲಿ ಆತಂಕ ಸಮಸ್ಯೆ ಹೆಚ್ಚು ಕಾಣುತ್ತಿದ್ದೇವೆ. ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಾಣುತ್ತಿದ್ದು, ಇದು ಒಳಗೆಯೇ ಅಭಿವೃದ್ಧಿ ಆಗುತ್ತಿದೆ. ಈ ಹಿನ್ನಲೆ ಇದರ ನಿವಾರಣೆಗೆ ಇದು ಸಹಾಯಕವಾಗಲಿದೆಯೇ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಕೇಂಬ್ರಿಡ್ಜ್​ನ ಟ್ರಿನಿಟಿ ಕಾಲೇಜ್​ನ ಡಾ ಜುಲ್ಕಯ್ಡಾ ಮಮತ್​​ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಸೈನ್ಸ್​ ಅಡ್ವಾನ್ಸಸ್​ನಲ್ಲಿ ಪ್ರಕಟಿಸಲಾಗಿದೆ. ಎರಡು ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ಭಾಗಿದಾರರಿಗೆ ಅವರ ಜೀವನದ ಘಟನೆಗಳ ಬಗ್ಗೆ ಚಿಂತಿಸಲು ಕೇಳಲಾಯಿತು. ಇದರಲ್ಲಿ 20 ಮಂದಿ ನಕಾರಾತ್ಮಕ ಭಯ ಮತ್ತು ಚಿಂತೆ ಬಗ್ಗೆ ತಿಳಿಸಿದರೆ, 20 ಮಂದು ಸಕಾರಾತ್ಮಕ ಭರವಸೆ ಕುರಿತು ತಿಳಿಸಿದರೆ, 36 ಮಂದಿ ದೈನಂದಿನ ಘಟನೆಗಳ ಬಗ್ಗೆ ತಿಳಿಸಿದರು.

ಭಯ ಎಂಬುದು ಅವರ ಪ್ರಸ್ತುತ ಕಾಳಜಿಯ ವಿಷಯವಾಗಿದ್ದು, ಅವರ ಆಲೋಚನೆ ಮೇಲೆ ಪದೇ ಪದೇ ಪ್ರಭಾವ ಬೀರುತ್ತಿದೆ. ಇಂತಹ ನಕಾರಾತ್ಮಕ ಅಂಶಗಳನ್ನು ಹತ್ತಿಕ್ಕಿದ್ದಾಗ ಭಾಗಿದಾರರ ಮಾನಸಿಕ ಆರೋಗ್ಯ ಸುಧಾರಣೆ ಕಂಡಿದೆ. ಆದರೆ, ಇಲ್ಲಿರುವ ಪ್ರಮುಖ ಪರಿಣಾಮ ಎಂದರೆ ಭಾಗಿದಾರರಿಗೆ ಭಯ ಮತ್ತು ತಟಸ್ಥ ಭಾವನೆಗಳಂತ ವಿಚಾರಗಳನ್ನು ಹತ್ತಿಕ್ಕಿಸುವ ಪ್ರಯತ್ನವಾಗಿದೆ ಎಂದು ಡಾ.ಮಮತ್​ ತಿಳಿಸಿದ್ದಾರೆ.

ಪಿಟಿಎಸ್ಡಿ (ಪೋಸ್ಟ್​ ಟ್ರಾಮಾಟಿಕ್​ ಸ್ಟ್ರೆಸ್​​ ಡಿಸಾರ್ಡರ್​​) ಸಮಸ್ಯೆ ಹೊಂದಿರುವವರಲ್ಲಿ ಇದು ಉತ್ತಮ ಕಾರ್ಯ ನಿರ್ವಹಿಸಿದ್ದು ಶೇ 16ರಷ್ಟು ಸಕಾರಾತ್ಮಕತೆ ಸ್ಕೋರ್​ ಕಂಡಿದೆ. ಆದಾಗ್ಯೂ ಈ ಪ್ರಯತ್ನದ ದೃಢೀಕರಣ ಬಗ್ಗೆ ಮತ್ತಷ್ಟು ಕೆಲಸ ನಡೆಯಬೇಕಿದೆ. ನಕಾರಾತ್ಮಕ ಅಂಶಗಳು, ಭಯದಂತಹ ಚಿಂತನೆಗಳನ್ನು ಹತ್ತಿಕ್ಕುವುದರಿಂದ ಪ್ರಯೋಜನ ಪಡೆಯಲು ಸಾಧ್ಯ ಎಂಬುದು ಇದರಲ್ಲಿ ಕಾಣುತ್ತಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ-ಎನ್​ಸಿಆರ್​ ವ್ಯಾಪ್ತಿಯ 50 ವರ್ಷದೊಳಗಿನ ಜನರಲ್ಲಿ ಸ್ಮರಣೆ ನಷ್ಟ ಹೆಚ್ಚು: ಕಾರಣವೇನು?

ABOUT THE AUTHOR

...view details