ನ್ಯೂಯಾರ್ಕ್( ಅಮೆರಿಕ): ಆತಂಕವಿಲ್ಲದ ಗರ್ಭಿಣಿಯರಿಗೆ ಹೋಲಿಕೆ ಮಾಡಿದರೆ, ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ಜೈವಿಕ ಪ್ರತಿರಕ್ಷಣಾ ವ್ಯವಸ್ಥೆ ವಿಭಿನ್ನವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಂಬಂಧ ವೈಲ್ ಕೊರ್ನೆಲ್ ಮೆಡಿಸಿನ್, ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನ ನಡೆಸಿದೆ.
ಆತಂಕ ಹೊಂದಿರುವ ಮಹಿಳೆಯರಲ್ಲಿ ದೊಡ್ಡ ಪ್ರಮಾಣದಲ್ಲಿ ಸೈಟೊಟೊಕ್ಸಿಕ್ ಟಿ ಜೀವಕೋಶ, ಪ್ರತಿರಕ್ಷಣಾ ಕೋಶ ಇರುತ್ತದೆ. ಅದು ದೇಹದ ಜೀವ ಕೋಶಕ್ಕೆ ಹಾನಿ ಮಾಡುತ್ತದೆ. ಇದರ ಜೊತೆಗೆ ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ರಕ್ತದ ಪರಿಚಲನೆ, ರೋಗ ನಿರೋಧಕ ಬದಲಾವಣೆಗಳು ವಿಭಿನ್ನವಾಗಿ ಕಾರ್ಯ ನಿರ್ವಹಣೆ ಮಾಡುವುದನ್ನು ಅಧ್ಯಯನದ ವೇಳೆ ಸಂಶೋಧಕರು ಕಂಡು ಕೊಂಡಿದ್ದಾರೆ. ಆತಂಕವು ಹೇಗೆ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವಾನಂತರದ ಅವಧಿಯಲ್ಲಿ ರೋಗನಿರೋಧಕ ಬದಲಾವಣೆಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಸಂಬಂಧ ಮೊದಲ ಬಾರಿಗೆ ಇಂತಹದ್ದೊಂದು ಸಂಶೋಧನೆ ನಡೆಸಲಾಗಿದೆ.
ಆತಂಕ ಮತ್ತು ನಿರಾಂತಕ ಗರ್ಭಿಣಿಯರು:ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ರೋಗ ನಿರೋಧಕ ವ್ಯವಸ್ಥೆಯೂ ಸಾಮಾನ್ಯ ಗರ್ಭಿಣಿ ಮಹಿಳೆಯರಿಗಿಂತ ವಿಭಿನ್ನವಾಗಿದೆ ಎಂದು ಡಾ ಲಾರೂನ್ ಎಂ ಒಸ್ಬೊರ್ನೆ ತಿಳಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಕೆಲವು ದುರ್ಬಲತೆ ಉಂಟಾಗಬಹುದು. ರೋಗ ನಿರೋಧಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬಹುದಾಗಿದೆ.
ಈ ಅಧ್ಯಯನವು ಗರ್ಭಿಣಿ ರೋಗಿಗಳಲ್ಲಿ ಆತಂಕಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆಗೆ ಉತ್ತೇಜನ ನೀಡುತ್ತದೆ ಎಂದು ಡಾ ಒಸ್ಬೊರ್ನೆ ತಿಳಿಸಿದ್ದಾರೆ. ಇದೇ ವೇಳೆ, ಆತಂಕ ಹೊಂದಿರುವ ಗರ್ಭಣಿಯರು ಈ ಸಂಬಂಧ ಔಷಧವನ್ನು ನಿರಾಕರಿಸುತ್ತಾರೆ. ಕಾರಣ, ಅವರಿಗೆ ಮಗುವಿಗೆ ಏನಾದರೂ ಆಗಬಹುದು ಎಂಬ ಭಯ.