ಲಂಡನ್:ದಂಪತಿಗಳಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಇದ್ದರೆ, ಮತ್ತೊಬ್ಬರು ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಹೊಸ ಅಧ್ಯಯನಯೊಂದು ತಿಳಿಸಿದೆ. ಜರ್ನಲ್ ಆಫ್ ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಈ ಅಧ್ಯಯನ ಪ್ರಕಟಿಸಿದೆ. ಅಧ್ಯಯನದ ಅನುಸಾರ, ಒಂದು ವೇಳೆ ಹೆಂಡತಿಗೆ ಅಧಿಕ ರಕ್ತದೊತ್ತಡ ಇದ್ದಲ್ಲಿ, ಗಂಡನಿಗೂ ಕೂಡ ರಕ್ತದೊತ್ತಡ ಬರುವ ಸಾಧ್ಯತೆ ಇದೆ. ಅಥವಾ ಗಂಡನಿಗೆ ಅಧಿಕ ರಕ್ತದೊತ್ತಡ ಇದ್ದರೆ, ಹೆಂಡತಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅದರಲ್ಲೂ ಈ ರೀತಿಯ ಸಾಧ್ಯತೆ ಭಾರತೀಯರು ಮತ್ತು ಚೀನಿಯರಲ್ಲಿ ಅಧಿಕವಾಗಿದೆ.
ಮಧ್ಯ ಮತ್ತು ಇಳಿ ವಯಸ್ಸಿನಲ್ಲಿ ರಕ್ತದೊತ್ತಡ ಎಂಬುದು ಸಾಮಾನ್ಯವಾಗಿದೆ. ಜಗತ್ತಿನ ಉಳಿದ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತ, ಚೀನಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ರಕ್ತದೊತ್ತಡ ಪ್ರಕರಣಗಳು ಹೆಚ್ಚು. ಈ ರಕ್ತದೊತ್ತಡವೂ ವಿಭಿನ್ನ ಲಿಂಗಿಯ ಪಾಲುದಾರರಲ್ಲಿ ಇರುವ ಕುರಿತು ತಂಡವೂ ಅಧ್ಯಯನ ನಡೆಸಿದೆ. ಈ ವೇಳೆ ಫಲಿತಾಂಶವೂ ಅಚ್ಚರಿ ಮೂಡಿದೆ. ಅನೇಕ ದಂಪತಿಗಳಿಬ್ಬರು ಅಧಿಕ ರಕ್ತದೊತ್ತಡ ಹೊಂದಿರುವುದು ತಿಳಿದು ಬಂದಿದೆ. ಭಾರತದಲ್ಲಿ 50ವರ್ಷ ದಾಟಿದ ಶೇ 20ರಷ್ಟು ದಂಪತಿಗಳು ಅಧಿಕ ರಕ್ತದೊತ್ತಡ ಹೊಂದಿರುವುದು ಕಂಡು ಬಂದಿದೆ. ಇದೇ ರೀತಿಯ ಟ್ರೆಂಡ್ ಅಮೆರಿಕ, ಇಂಗ್ಲೆಂಡ್ ಮತ್ತು ಚೀನಾದಲ್ಲಿ ಕಂಡುಬಂದಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದಲ್ಲಿ ಅಧಿಕ ರಕ್ತದೊತ್ತಡ ಇಲ್ಲದ ಪುರುಷನನ್ನು ಮದುವೆಯಾದ ಮಹಿಳೆಯರಿಗೆ ಹೋಲಿಕೆ ಮಾಡಿದಾಗ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯನ್ನು ಮದುವೆಯಾದ ಮಹಿಳೆಯರಲ್ಲಿ ಈ ಅಧಿಕ ರಕ್ತದೊತ್ತಡ ಅಭಿವೃದ್ಧಿಯಾಗುವ ಸಾಧ್ಯತೆ ಶೇ 19ರಷ್ಟಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.