ಬೆಂಗಳೂರು: ಅನೇಕ ಮಕ್ಕಳು ಬಹು ಸಂಸ್ಕೃತಿಗೆ ಹೊಂದಿಕೊಳ್ಳದೇ ತೊಳಲಾಡುತ್ತಾರೆ. ಅದರಲ್ಲೂ ವಲಸೆ ಅಥವಾ ಜನಾಂಗೀಯ ಸಮುದಾಯದ ಮಕ್ಕಳು ಒಳಗೊಂಡಿರುವ ಶಾಲೆಗಳಲ್ಲಿ ಈ ಪರಿಸರಕ್ಕೆ ಹೊಂದಿಕೊಳ್ಳುವುದು ಅವಶ್ಯಕವಾಗಿದೆ. ಈ ರೀತಿ ಹೊಂದಿಕೊಳ್ಳಲು ಹದಿಹರೆಯದ ಮಕ್ಕಳು ತಮ್ಮದೇ ಶಾಲೆ, ಮನೆ ಮತ್ತು ಸಹಚರರಿಂದ ಸ್ಥಿರವಾದ ಮತ್ತು ಸಕಾರಾತ್ಮಕ ಸಂದೇಶ ಅಗತ್ಯವಾಗಿದೆ. ಒಂದು ವೇಳೆ, ಅವರಿಗೆ ಈ ರೀತಿ ಬೆಂಬಲ ಸಿಗದೇ ಹೋದಲ್ಲಿ ಅವರು ಬಹು ಸಂಸ್ಕೃತಿ ವಾತಾವರಣದ ಶೈಕ್ಷಣಿಕತೆಯಿಂದ ಬಳಬಹುದು. ಇದು ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ತಿಳಿಸಿದೆ.
ಅಮೆರಿಕದ ಸೌತ್ವೆಸ್ಟರ್ನ್ ನಲ್ಲಿನ ಪಬ್ಲಿಕ್ ಸ್ಕೂಲ್ನ 700 ರೂ ಹದಿಹರೆಯದವರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಜನಾಂಗೀಯವಾಗಿ ವೈವಿಧ್ಯಮಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಬಹು ಸಂಸ್ಕೃತಿ ವರದಿ ಕಲಿಯುವಾಗ ಸ್ನೇಹಿತರು ಮತ್ತು ಕುಟುಂಬದಿಂದ ಅವರು ಯಾವುದೇ ಸಂದೇಶವನ್ನು ಪಡೆಯುವುದಿಲ್ಲ. ಇದು ಶೈಕ್ಷಣಿಕತೆ ಚಟುವಟಿಕೆಯಲ್ಲಿನ ಭಾಗವಹಿಸುವಿಕೆ ಮತ್ತು ಉನ್ನತ ಶಿಕ್ಷಣ ಗುರಿಗಳ ಮೇಲೆ ಪರಿಣಾಮ ಬೀರುತ್ತದೆ.
ಇದು ಭಾವಾನಾತ್ಮಕವಾಗಿ ವಿಭಿನ್ನ ಸಂದೇಶವನ್ನು ಸ್ವೀಕಾರ ಮಾಡುತ್ತದೆ. ಇದು ಅವರ ಶೈಕ್ಷಣಿಕ ಸಾಧನೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಲೇಖಕ ಮ್ಯಾಸಿಯಲ್ ಎಂ ಹೆರ್ನನಡೆಸ್ ತಿಳಿಸಿದ್ದಾರೆ. ವೈವಿಧ್ಯಮಯ ಹಿನ್ನೆಲೆ ಹೊಂದಿರುವ ಜನರೊಂದಿಗೆ ಮಕ್ಕಳು ಉತ್ತಮ ಸಂಪರ್ಕವನ್ನು ಹೊಂದಿದ್ದು, ಅವರು ಉತ್ತಮ ಸಾಮಾಜಿಕ ಸಂವಹನ ಹೊಂದಿದ್ದಾರೆ. ಜನರು ತಮ್ಮದೇ ಸಂಪ್ರದಾಯದ ಜನರನ್ನು ಪ್ರಶಂಸಿಸುವುದು ಮುಖ್ಯ ಎಂದು ಕೂಡ ತಿಳಿಸಿದ್ದಾರೆ
ಈ ಅಧ್ಯಯನವನ್ನು ಜುಲೈ 26ರಂದು ಜರ್ನಲ್ ಆಫ್ ಯುತ್ ಅಂಡ್ ಅಡೊಲೆಸೆನ್ಸ್ನಲ್ಲಿ ಪ್ರಕಟಿಸಲಾಗಿದೆ. ಸಮೀಕ್ಷೆಯಲ್ಲಿ ಸುಸ್ಥಿರ ಸಂದೇಶ ಲಭ್ಯವಾಗಿದೆ.