ಮಿಚಿಗನ್: ಸಾವನ್ನು ಗೆದ್ದು ಬಂದ ಕತೆಗಳನ್ನು ನಾವು ಅನೇಕ ಬಾರಿ ಕೇಳುತ್ತೇವೆ. ಉಸಿರಾಟ ನಿಂತ ಬಳಿಕವೂ ವ್ಯಕ್ತಿಗಳು ಎದ್ದು ಕುಳಿತಿರುವ ಘಟನೆಗಳಿವೆ. ಇಂತಹ ಪ್ರಕರಣಗಳಲ್ಲಿ ಬದುಕುಳಿದವರನ್ನು ಮಾತನಾಡಿಸಿದಾಗ ಅವರು ಹೇಳುವುದು, ಬೆಳಕು ಒಂದು ಮೂಡಿತು. ತಮ್ಮ ಪ್ರೀತಿ ಪಾತ್ರರ ಮಾತು ಕೇಳಿದೆವು, ಅವರನ್ನು ಭೇಟಿಯಾದೆವು ಎಂಬುದು. ಅನೇಕ ಬಾರಿ ಅಚ್ಚರಿಗೆ ಕಾರಣವಾಗುವ ಇಂತಹ ಘಟನೆಗಳು ಕುರಿತು ಅಧ್ಯಯನ ನಡೆಸಲಾಗಿದೆ. ಹೃದಯದ ಬಡಿತ ನಿಂತ ಬಳಿಕವೂ ಉಳಿಯುವ ಪ್ರಜ್ಞೆ ಕುರಿತು ತಿಳಿಸಲಾಗಿದೆ. ಈ ಸಂಬಂಧ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ನ ಪ್ರೊಸೀಡಿಂಗ್ಸ್ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ಸಾಯುತ್ತಿರುವ ಮಿದುಳಿನ ಪ್ರಜ್ಞೆಯನ್ನು ಅಧ್ಯಯನ ನಡೆಸಲಾಗಿದೆ. ಜಿಮೊ ಬೊರಿಜಿಗಿನ್ ಈ ಅಧ್ಯಯನ ನಡೆಸಿದ್ದಾರೆ.
ಹೇಗೆ ನಡೆಯಿತು ಅಧ್ಯಯನ:ಸಾಯುತ್ತಿರುವ ಪ್ರಾಣಿಗಳು ಮತ್ತು ಮನುಷ್ಯನ ಮಿದುಳಿನಲ್ಲಿ ಆಮ್ಲಜನಕ ಕಳೆದುಕೊಳ್ಳುತ್ತಾನೆ. ಈ ವೇಳೆ, ಅವರಿಗೆ ಗಾಮಾ ಕಿರಣವನ್ನು ಸಕ್ರಿಯಗೊಳಿಸುವ ಮೂಲಕ ಇದನ್ನು ದಾಖಲಿಸಲಾಗಿದೆ. ಮಿದುಳಿನ ನಿಷ್ಕ್ರಿಯೆತೆಗೆ ಒಳಗಾದ ವಿವಿಧ ಅನುಭವಗಳು ಒಳಗಾಗುತ್ತದೆ ಎಂದು ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಹೃದಯ ಸ್ತಂಭನಕ್ಕೆ ಒಳಗಾಗಿ ಇಸಿಜಿ ಮೇಲ್ವಿಚಾರಣೆಯಲ್ಲಿದ್ದ ಸಾವನ್ನಪ್ಪಿದ ನಾಲ್ವರು ರೋಗಿಗಳನ್ನು ಪತ್ತೆ ಮಾಡಿದರು.
ಇವರು ನಾಲ್ಕು ರೋಗಿಗಳು ಕೋಮಾದಲ್ಲಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ವೈದ್ಯಕೀಯ ಸಹಾಯಕ್ಕೂ ಮೀರಿದ ಸ್ಥಿತಿಯಲ್ಲಿದ್ದ ಇವರನ್ನು ಕುಟುಂಬದ ಸಹಮತದ ಮೇರೆ ಅವರ ಉಸಿರಾಟಕ್ಕೆ ಹಾಕಿದ್ದ ವೆಂಟಿಲೇಟರ್ ಬೆಂಬಲವನ್ನು ತೆಗೆಯಲಾಯಿತು. ಈ ವೇಳೆ, ಇಬ್ಬರು ರೋಗಿಗಳ ಹೃದಯ ಬಡಿತ ಗಾಮಾ ಕಿರಣಗಳ ಸಕ್ರಿಯತೆಯಿಂದ ಹೆಚ್ಚಿತು. ಅಲ್ಲದೇ ಈ ವೇಳೆ ಮಿದುಳು ಹೆಚ್ಚು ಕ್ರಿಯಾಶೀಲತೆ ಮತ್ತು ಪ್ರಜ್ಞೆಯ ಸಂಬಂಧ ಕುರಿತು ಅಧ್ಯಯನ ನಡೆಸಲಾಗಿದೆ.