ಕಾನ್ಸಾಸ್(ಅಮೆರಿಕ): 2023ರ ಹೊಸ ವರ್ಷಕ್ಕೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ನಿರ್ಣಯ ಮಾಡಿದ್ದರೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ಮತ್ತು ಕಾನ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಸಂಶೋಧನೆಗಳು ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ನಿಖರವಾದ ಸೂಚನೆಗಳನ್ನು ನೀಡಬಹುದು. ಹೇಗೆ ಎಂದು ಯೋಚಿಸುತ್ತಿದ್ದೀರಾ ಹಿಂದಿನ ಅಧ್ಯಯನಗಳ ಅಂಕಿ- ಅಂಶಗಳನ್ನು ಬಳಸಿಕೊಂಡು ಎಷ್ಟು ಕ್ಯಾಲೊರಿಗಳನ್ನು ಸೇವಿಸಲಾಯಿತು ಎಂಬುದನ್ನು ನಿರ್ಧರಿಸಲು, ಊಟದ ಯಾವ ಅಂಶಗಳು ನಿರ್ಣಾಯಕವಾಗಿವೆ ಎಂಬುದನ್ನು ಗುರುತಿಸಲು ಸಂಶೋಧಕರು ಈ ಪ್ರಯತ್ನ ಮಾಡಿದ್ದಾರೆ.
ಸಂಶೋಧಕರು ಪ್ರಮುಖವಾಗಿ ನಮ್ಮ ಊಟದ ಮೂರು ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಊಟದ ಶಕ್ತಿಯ ಸಾಂದ್ರತೆ (ಅಂದರೆ, ಪ್ರತಿ ಗ್ರಾಂ ಆಹಾರಕ್ಕೆ ಲಭ್ಯವಾಗುವ ಕ್ಯಾಲೊರಿಗಳು), ಅತಿ ರುಚಿಕರ ಆಹಾರದ ಪ್ರಮಾಣ, ಮತ್ತು ಊಟವನ್ನು ಎಷ್ಟು ವೇಗವಾಗಿ ಸೇವಿಸಲಾಗುತ್ತದೆ ಎಂಬುದನ್ನು ಈ ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ನಾಲ್ಕು ವಿಭಿನ್ನ ಆಹಾರ ಪದ್ಧತಿಗಳಲ್ಲಿ ಹೆಚ್ಚಿನ ಕ್ಯಾಲೋರಿ ಸೇವನೆ ಮಾಡುವುದು ಆರೋಗ್ಯಕ್ಕೆ ಸ್ಥಿರವಾದ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಊಟದಲ್ಲಿ ಪ್ರೋಟೀನ್ ಸಂಯೋಜನೆಯು ಕ್ಯಾಲೋರಿ ಹೆಚ್ಚಾಗಲು ಕೊಡುಗೆ ನೀಡುತ್ತದೆ, ಆದರೆ ಅದರ ಪರಿಣಾಮವು ಕಡಿಮೆ ಸ್ಥಿರವಾಗಿತ್ತು ಎಂಬುದು ಅಧ್ಯಯನದ ವೇಳೆ ತಿಳಿದು ಬಂದಿದೆ.
ಏನು ಹೇಳುತ್ತೆ ಹೊಸ ಅಧ್ಯಯನ:2019 ರಲ್ಲಿ ಕೆಯು ವಿಜ್ಞಾನಿ ಟೆರಾ ಫಾಝಿನೊ ಅವರು ಮೊದಲ ಬಾರಿಗೆ ಈ ಕುರಿತು ವಿವರಿಸಿದ್ದಾರೆ, ಅತಿ ರುಚಿಕರ ಆಹಾರಗಳು ಕೊಬ್ಬು, ಸಕ್ಕರೆ ಸೋಡಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ನಿರ್ದಿಷ್ಟ ಸಂಯೋಜನೆಯನ್ನು ಹೊಂದಿವೆ. ಉದಾಹರಣೆಗೆ ಆಲೂಗಡ್ಡೆ ಚಿಪ್ಸ್ ಬಗ್ಗೆ ಯೋಚಿಸಿದರೆ, ಅವು ತಿನ್ನಲು ರುಚಿಕರವಾಗಿತ್ತದೆ ಮತ್ತು ಒಮ್ಮೆ ತಿನ್ನಲು ಪ್ರಾರಂಭಿಸಿದರೆ ತಿನ್ನುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಈ ಆಧಾರದ ಮೇಲೆ ಒಬ್ಬ ವ್ಯಕ್ತಿಯು ಊಟದಲ್ಲಿ ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಾನೆ. ಅದು ಹೇಗೆ ಆತನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳುವುದಕ್ಕೋಸ್ಕರ ಈ ಅಧ್ಯಯನ ಎಂದು ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಫಾಝಿನೊ ಹೇಳಿದರು. ಕೋಫ್ರಿನ್ ಲೋಗನ್ ಸೆಂಟರ್ ಫಾರ್ ಅಡಿಕ್ಷನ್ ರಿಸರ್ಚ್ ಅಂಡ್ ಟ್ರೀಟ್‌ಮೆಂಟ್‌ನ ಸಹಾಯಕ ನಿರ್ದೇಶಕರಾಗಿ ಫಾಝಿನೋ ಕಾರ್ಯನಿರ್ವಹಿಸುತ್ತಿದ್ದಾರೆ.