ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ವಿದ್ಯಾರ್ಥಿಗಳು ಮಾಡುವ ರಾತ್ರಿಯ ನಿದ್ದೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನ ಪತ್ತೆ ಹಚ್ಚಿದೆ. ಯುವ ವಯಸ್ಕರಿಗೆ ಕಾಲೇಜು ಶಿಕ್ಷಣ ಬದುಕಿನ ಪರಿವರ್ತನೆಯ ಮಹತ್ವದ ಘಟ್ಟ. ತಮ್ಮ ಅಮೂಲ್ಯ ಸಮಯವನ್ನು ಹೇಗೆ ಕಳೆಯಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಮೊದಲ ಬಾರಿಗೆ ವಿದ್ಯಾರ್ಥಿಗಳು ಬಹುಶ: ಈ ಸಮಯದಲ್ಲೇ ಅನುಭವಿಸುತ್ತಾರೇನೋ. ಈ ಸ್ವಾತಂತ್ರ್ಯ ಸ್ಪರ್ಧಾತ್ಮಕ ಆಸಕ್ತಿಯಿಂದ ಹುಟ್ಟಿಕೊಳ್ಳುತ್ತದೆ. ಆದರೆ ಸ್ಪರ್ಧಾತ್ಮಕ ಆಸಕ್ತಿ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಸನ್ನಿವೇಶಗಳು ಮಾತ್ರವಲ್ಲ, ನಿದ್ದೆಯಿಂದಲೂ ಜಾಗೃತಗೊಳ್ಳುತ್ತದೆ.
ಬಹು-ಸಾಂಸ್ಥಿಕ ಸಂಶೋಧಕರ ತಂಡವು ಸೆಮಿಸ್ಟರ್‌ನಲ್ಲಿ ರಾತ್ರಿಯ ನಿದ್ರೆಯ ಅವಧಿಯು ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಗಳ ಅಂತ್ಯದ ಸೆಮಿಸ್ಟರ್ ಗ್ರೇಡ್ ಪಾಯಿಂಟ್ ಸರಾಸರಿ (GPA) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ಮೊದಲ ಅಧ್ಯಯನ ನಡೆಸಿತು. ಫಿಟ್‌ಬಿಟ್ ಸ್ಲೀಪ್ ಟ್ರ್ಯಾಕರ್‌ಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳು ಪ್ರತಿ ರಾತ್ರಿ ಸರಾಸರಿ 6.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡರು. ಆದರೆ ವಿದ್ಯಾರ್ಥಿಗಳು ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದಾಗ ಅದರಿಂದ ನಕಾರಾತ್ಮಕ ಫಲಿತಾಂಶಗಳು ಸಂಗ್ರಹಗೊಳ್ಳುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಲಭ್ಯವಿದೆ.
ಈ ಹಿಂದಿನ ಅಧ್ಯಯನಗಳು ನಮ್ಮ ವ್ಯಾಪಕ ಶ್ರೇಣಿಯ ಆರೋಗ್ಯ ಮತ್ತು ಕಾರ್ಯಕ್ಷಮತೆ ಶ್ರೇಣಿಗೆ ನಮ್ಮ ಒಟ್ಟು ನಿದ್ದೆ ಪ್ರಮುಖ ಕಾರಣ ಎಂಬುದನ್ನು ಹೈಲೈಟ್ ಮಾಡಿದ್ದವು. ನಿದ್ರೆಯ ಮಾರ್ಗಸೂಚಿಗಳು ಹದಿಹರೆಯದವರು ಪ್ರತಿ ರಾತ್ರಿ ಕನಿಷ್ಠ ಎಂಟರಿಂದ 10 ಗಂಟೆಗಳ ನಿದ್ದೆಯನ್ನು ಪಡೆಯಬೇಕೆಂದು ಶಿಫಾರಸು ಮಾಡುತ್ತವೆ. ಕಾಲೇಜು ವಿದ್ಯಾರ್ಥಿಗಳು ಅನಿಯಮಿತ ಮತ್ತು ನಿದ್ರೆ ಕೊರತೆಯನ್ನು ಅನುಭವಿಸುತ್ತಾರೆ.
ಡೇಟ್ರಿಚ್ ಕಾಲೇಜ್ ಆಫ್ ಹ್ಯುಮಾನಿಟೀಸ್ ಆ್ಯಂಡ್ ಸೋಶಿಯಲ್ ಸೈನ್ಸಸ್‌ನಲ್ಲಿ ಸೈಕಾಲಜಿ ಮತ್ತು ನ್ಯೂರೋಸೈನ್ಸ್‌ನಲ್ಲಿ ಪ್ರೊಫೆಸರ್ ಆಗಿರುವ ಡೇವಿಡ್ ಕ್ರೆಸ್ವೆಲ್, ರಾತ್ರಿಯ ನಿದ್ರೆ ಮತ್ತು ಜಿಪಿಎ ನಡುವಿನ ಸಂಬಂಧವನ್ನು ಮೌಲ್ಯಮಾಪನ ಮಾಡಿದ ಸಂಶೋಧಕರ ತಂಡದ ಮುಂದಾಳತ್ವವನ್ನು ವಹಿಸಿದ್ದರು. "ಕಲಿಕೆ ಮತ್ತು ನೆನಪಿನ ಶಕ್ತಿಗೆ ನಿದ್ರೆ ಎಷ್ಟು ನಿರ್ಣಾಯಕವಾಗಿದೆ ಎಂಬುದನ್ನು ಪ್ರಾಣಿಗಳ ಅಧ್ಯಯನಗಳು ತೋರಿಸಿವೆ. ಇದು ಮನುಷ್ಯರಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನಾವು ಇಲ್ಲಿ ತೋರಿಸುತ್ತೇವೆ. ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಯು ಶಾಲಾ ಅವಧಿಯ ಆರಂಭದಲ್ಲಿ ಮಾಡುವ ಕಡಿಮೆ ಅವಧಿಯ ರಾತ್ರಿಯ ನಿದ್ರೆ ಸೆಮಿಸ್ಟರ್ ಕೊನೆಯಲ್ಲಿ ಕಡಿಮೆ GPA ಬರಲು ಕಾರಣವಾಗುತ್ತದೆ. ನಿದ್ರೆಯ ಕೊರತೆಕಾಲೇಜು ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು" ಎಂದು ಕ್ರೆಸ್ವೆಲ್ ಹೇಳುತ್ತಾರೆ.