ಕರ್ನಾಟಕ

karnataka

ETV Bharat / sukhibhava

ಸಸ್ಯಾಹಾರ ಸೇವನೆ ಸಂಧಿವಾತ ನೋವನ್ನು ಕಡಿಮೆ ಮಾಡುತ್ತದೆ : ಅಧ್ಯಯನ - ರುಮಟಾಯ್ಡ್ ಸಂಧಿವಾತ

ಸಸ್ಯಾಹಾರಿ ಆಹಾರ ಸೇವಿಸಿದವರಲ್ಲಿ ಊದಿಕೊಂಡ ಕೀಲುಗಳ ಸರಾಸರಿ ಸಂಖ್ಯೆಯು 7.0 ರಿಂದ 3.3ಕ್ಕೆ ಕಡಿಮೆಯಾಗಿದೆ. ಆದರೆ, ಪ್ಲಸೀಬೊ ಹಂತದಲ್ಲಿ ಆ ಸಂಖ್ಯೆಯು ವಾಸ್ತವವಾಗಿ 4.7 ರಿಂದ 5ಕ್ಕೆ ಏರಿತು. ಅಧ್ಯಯನವನ್ನು ಪೂರ್ಣಗೊಳಿಸಿದವರಿಗೆ, ಪ್ಲಸೀಬೊ ಹಂತಕ್ಕೆ ಹೋಲಿಸಿದರೆ ಸಸ್ಯಾಹಾರಿ ಹಂತದಲ್ಲಿ VAS ರೇಟಿಂಗ್‌ ಗಮನಾರ್ಹವಾಗಿ ಸುಧಾರಿಸಿದೆ..

Study finds vegan diet eases arthritis pain
ಸಂಧಿವಾತ

By

Published : Apr 10, 2022, 5:18 PM IST

ರುಮಟಾಯ್ಡ್ ಸಂಧಿವಾತದಿಂದ ಲಕ್ಷಾಂತರ ಜನರು ಬಳಲುತ್ತಿದ್ದಾರೆ. ಅವರ ಕೀಲು ನೋವನ್ನು ನಿವಾರಿಸಲು ಸಸ್ಯಹಾರಿ ಆಹಾರವು ಪ್ರಿಸ್ಕ್ರಿಪ್ಷನ್ ಆಗಬಹುದು ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ವೈದ್ಯರ ಸಮಿತಿಯ ಅಧ್ಯಕ್ಷರಾದ ನೀಲ್ ಬರ್ನಾರ್ಡ್ ಹೇಳುತ್ತಾರೆ. ಈ ರೀತಿಯ ಆಹಾರದಿಂದ ಕಡಿಮೆ ತೂಕ ಮತ್ತು ಕಡಿಮೆ ಕೊಲೆಸ್ಟ್ರಾಲ್ ಸೇರಿದಂತೆ ಇತರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ರುಮಟಾಯ್ಡ್ ಸಂಧಿವಾತವು ಸಾಮಾನ್ಯ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಅದು ಸಾಮಾನ್ಯವಾಗಿ ಕೀಲು ನೋವು, ಊತ ಮತ್ತು ಅಂತಿಮವಾಗಿ ಶಾಶ್ವತ ಜಾಯಿಂಟ್​​ ಡ್ಯಾಮೇಜ್‌ ಉಂಟು ಮಾಡುತ್ತದೆ. ಈ ಅಧ್ಯಯನದಲ್ಲಿ ಭಾಗವಹಿಸುವವರಿಗೆ ವೈದ್ಯರ ಸಮಿತಿಯೂ ಎರಡು ವಾರಗಳವರೆಗೆ ವಿಜ್ಯೂಯಲ್​ ಅನಲಾಗ್​ ಸ್ಕೇಲ್​ (VAS)ನನ್ನು ಬಳಸುವಂತೆ ಸೂಚಿಸಿದೆ.

ಕೀಲು ನೋವಿನ ತೀವ್ರತೆಯನ್ನು ರೇಟ್​ ಮಾಡಲು ಈ ರೀತಿ ಸೂಚಿಸಲಾಗಿದೆ. ಇದರ ಮೂಲಕ ನೋವು ಇದೆಯೇ ಅಥವಾ ನೋವು ತುಂಬಾ ಜೋರಾಗಿ ಇದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಈ ಅಧ್ಯಯನದಲ್ಲಿ ಭಾಗಿಯಾದ ಪ್ರತಿಯೊಬ್ಬರ ರೋಗದ ಚಟುವಟಿಕೆ ಸ್ಕೋರ್​-28 (DAS28) ಆಗಿದ್ದು, ಇದನ್ನು ಟೆಂಡರ್​ ಕೀಲುಗಳು, ಊದಿಕೊಂಡ ಕೀಲು, ಸಿ-ರಿಯಾಕ್ಟಿವ್ ಪ್ರೋಟೀನ್ ಮೌಲ್ಯಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದು ದೇಹದಲ್ಲಿ ಊರಿಯೂತವನ್ನು ಹೆಚ್ಚಿಸುತ್ತದೆ. DAS28 ರುಮಟಾಯ್ಡ್ ಸಂಧಿವಾತದ ತೀವ್ರತೆಯೊಂದಿಗೆ ಹೆಚ್ಚಾಗುತ್ತದೆ.

ಅಧ್ಯಯನದಲ್ಲಿ ಭಾಗಿಯಾದ ರುಮಟಾಯ್ಡ್ ಸಂಧಿವಾತ ಹೊಂದಿರುವ 44 ವಯಸ್ಕರನ್ನು 16 ವಾರಗಳವರೆಗೆ ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಮೊದಲ ಗುಂಪಿನವರು ನಾಲ್ಕು ವಾರಗಳವರೆಗೆ ಸಸ್ಯಾಹಾರಿ ಆಹಾರವನ್ನು ನೀಡಲಾಯಿತು. ಮೂರು ವಾರಗಳವರೆಗೆ ಹೆಚ್ಚುವರಿಯಾಗಿ ಈ ಆಹಾರವನ್ನು ನಿಲ್ಲಿಸಲಾಯಿತು. ನಂತರ ಒಂಬತ್ತು ವಾರಗಳವರೆಗೆ ಪ್ರತ್ಯೇಕವಾಗಿ ಹೊರ ಹಾಕಲ್ಪಟ್ಟ ಆಹಾರವನ್ನು ಪುನಃ ನೀಡಲಾಯಿತು. ಇವರೆಲ್ಲಾ ಸಂಶೋಧನಾ ತಂಡದವರು ಹೇಳಿದ ಆಹಾರವನ್ನೇ ಸೇವಿಸಿದ್ದಾರೆ.

ಎರಡನೇ ಗುಂಪಿನವರಿಗೆ ಏನಾದರೂ ತಿನ್ನಬಹುದು ಎಂದು ಸೂಚಿಸಿ, ಪ್ರತಿದಿನ ಒಂದು ಪ್ಲಸೀಬೊ ಕ್ಯಾಪ್ಸುಲ್ ಅನ್ನು ತೆಗೆದುಕೊಳ್ಳುವಂತೆ ಹೇಳಲಾಯಿತು. ಇದು ಅಧ್ಯಯನದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ನಂತರ ಈ ಗುಂಪು 16 ವಾರಗಳವರೆಗೆ ಆಹಾರವನ್ನು ಬದಲಾಯಿಸಿತು. ಅಧ್ಯಯನದ ಪ್ರಕಾರ, ಸಸ್ಯಾಹಾರಿ ಆಹಾರವನ್ನು ಸೇವಿಸಿದವರ DAS28 ಸರಾಸರಿ 2 ಅಂಕಗಳಷ್ಟು ಕಡಿಮೆಯಾಗಿತ್ತು. ಇದು ಪ್ಲಸೀಬೊ ಹಂತದಲ್ಲಿ 0.3 ಅಂಕಗಳ ಇಳಿಕೆಗೆ ಹೋಲಿಸಿದರೆ ಜಂಟಿ ನೋವಿನಲ್ಲಿ ಹೆಚ್ಚಿನ ಕಡಿತವನ್ನು ಸೂಚಿಸುತ್ತದೆ.

ಸಸ್ಯಾಹಾರಿ ಆಹಾರ ಸೇವಿಸಿದವರಲ್ಲಿ ಊದಿಕೊಂಡ ಕೀಲುಗಳ ಸರಾಸರಿ ಸಂಖ್ಯೆಯು 7.0 ರಿಂದ 3.3ಕ್ಕೆ ಕಡಿಮೆಯಾಗಿದೆ. ಆದರೆ, ಪ್ಲಸೀಬೊ ಹಂತದಲ್ಲಿ ಆ ಸಂಖ್ಯೆಯು ವಾಸ್ತವವಾಗಿ 4.7 ರಿಂದ 5ಕ್ಕೆ ಏರಿತು. ಅಧ್ಯಯನವನ್ನು ಪೂರ್ಣಗೊಳಿಸಿದವರಿಗೆ, ಪ್ಲಸೀಬೊ ಹಂತಕ್ಕೆ ಹೋಲಿಸಿದರೆ ಸಸ್ಯಾಹಾರಿ ಹಂತದಲ್ಲಿ VAS ರೇಟಿಂಗ್‌ ಗಮನಾರ್ಹವಾಗಿ ಸುಧಾರಿಸಿದೆ.

ಸಸ್ಯಾಹಾರಿ ಆಹಾರ ಸೇವಿಸಿದವರಲ್ಲಿ DAS28ನಲ್ಲಿ ಇಳಿಕೆಯಾಗಿದೆ. ಇದು ಅಧ್ಯಯನದ ಸಮಯದಲ್ಲಿ ಔಷಧಿ ಮತ್ತು ಎಲ್ಲಾ ರೀತಿಯ ಆಹಾರವನ್ನು ಸೇವಿಸಿದ ವ್ಯಕ್ತಿಗಳನ್ನು ಹೊರತುಪಡಿಸುತ್ತದೆ. ನೋವು ಮತ್ತು ಊತದಲ್ಲಿನ ಕಡಿತದ ಜೊತೆಗೆ, ಸಸ್ಯಾಹಾರಿ ಆಹಾರದಲ್ಲಿ ದೇಹದ ತೂಕವು ಸರಾಸರಿ 14 ಪೌಂಡ್‌ಗಳಷ್ಟು ಕಡಿಮೆಯಾಗಿದೆ. ಸಸ್ಯಾಹಾರಿ ಆಹಾರ ತಿಂದವರಲ್ಲಿ ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್‌ನಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಇದನ್ನೂ ಓದಿ:ತ್ವಚೆಯ ಆರೋಗ್ಯಕ್ಕಾಗಿ ಇಲೆಕ್ಟ್ರಾನಿಕ್​ ಗಾಜೆಟ್​ಗಳಿಂದ ದೂರವಿರಿ..

ರುಮಟಾಯ್ಡ್‌ ಸಂಧಿವಾತವು ಆಟೋ ಇಮ್ಯೂನ್‌ ಕಾಯಿಲೆಯಾಗಿದ್ದು, ಇದರಲ್ಲಿ ಸಾಮಾನ್ಯವಾಗಿ ಹೊರಗಿನ ವಸ್ತುಗಳು, ಬ್ಯಾಕ್ಟೀರಿಯಾ, ವೈರಸ್‌ ಮುಂತಾದವುಗಳ ಮೇಲೆ ದಾಳಿ ಮಾಡಿ ಆರೋಗ್ಯವನ್ನು ಸಂರಕ್ಷಿಸುವ ಶರೀರದ ಪ್ರತಿರಕ್ಷಣಾ ವ್ಯವಸ್ಥೆಯು ತಪ್ಪಾಗಿ ಕೀಲುಗಳ ಮೇಲೂ ದಾಳಿ ಮಾಡಿಬಿಡುತ್ತವೆ. ಇದು ಉರಿಯೂತವನ್ನು ಹೆಚ್ಚಿಸಿ ಕೀಲುಗಳ ಒಳಗಿನ ಲೈನ್‌ಗಳನ್ನು ದಪ್ಪಗೊಳಿಸುವ ಕೋಶಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರ ಪರಿಣಾಮವಾಗಿ ಕೀಲುಗಳ ಸುತ್ತಲೂ ಊತ ಹಾಗೂ ನೋವು ಉಂಟು ಮಾಡುತ್ತದೆ.

ಸಂಧಿವಾತ ಸಮಸ್ಯೆ ಯುವಜನತೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿದ್ದು, ಇದಕ್ಕೆ ಬದಲಾದ ಜೀವನಶೈಲಿಯೇ ಕಾರಣ ಎನ್ನಲಾಗಿದೆ. ವ್ಯಾಯಾಮದ ಕೊರತೆ, ಅಸಹಜ ಭಂಗಿ, ಕಂಪ್ಯೂಟರ್‌ ಮುಂದೆ ದೀರ್ಘಾವಧಿ ಕೆಲಸ ಮಾಡುವುದು, ಅಸಮತೋಲಿತ ಆಹಾರ ಪದ್ಧತಿ ಮುಂತಾದ ಜೀವನಶೈಲಿಗೆ ಸಂಬಂಧಿಸಿದಂತೆ ಉದ್ಭವವಾಗುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರ ಜೀವನಶೈಲಿಯೇ ಯೌವನಾವಸ್ಥೆಯಲ್ಲೇ ಸಂಧಿವಾತ ಹಾಗೂ ಕೀಲು ನೋವಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.

ABOUT THE AUTHOR

...view details