ಕರ್ನಾಟಕ

karnataka

ETV Bharat / sukhibhava

ಆತ್ಮಹತ್ಯೆ ಆಲೋಚನೆಯನ್ನು ರಕ್ತದ ಬಯೋಮಾರ್ಕರ್​ ಗುರುತಿಸುತ್ತದೆ: ಅಧ್ಯಯನ - ಮೈಟೊಕಾಂಡ್ರಿಯ

ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗೆ ಗುರಿಯಾಗುವವರನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ ನೆರವಾಗಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ರಕ್ತದ ಬಯೋಮಾರ್ಕರ್
ರಕ್ತದ ಬಯೋಮಾರ್ಕರ್

By ETV Bharat Karnataka Team

Published : Dec 17, 2023, 7:03 PM IST

ನ್ಯೂಯಾರ್ಕ್: ಆತ್ಮಹತ್ಯಾ ಆಲೋಚನೆಗಳಿಗೆ ಸಂಬಂಧಿಸಿರುವ ರಕ್ತದ ಬಯೋಮಾರ್ಕರ್‌ಗಳನ್ನು ಅಧ್ಯಯನ ಗುರುತಿಸಿದೆ. ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗೆ ಗುರಿಯಾಗುವವರನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ ಸಹಾಯಕವಾಗಲಿದೆ ಎಂದು ಹೇಳಿದೆ.

ಖಿನ್ನತೆಯಿರುವ ಅನೇಕರು ಮಾನಸಿಕ ಚಿಕಿತ್ಸೆ ಮತ್ತು ಔಷಧಗಳೊಂದಿಗೆ ಸ್ವಲ್ಪಮಟ್ಟಿಗೆ ಸುಧಾರಣೆ ಹೊಂದುತ್ತಾರೆ. ಆದರೆ ಕೆಲವರಿಗೆ ಚಿಕಿತ್ಸೆ ಯಾವುದೇ ಪರಿಣಾಮ ಬೀರುವುದಿಲ್ಲ. ಖಿನ್ನತೆಯನ್ನು ಹೊಂದಿರುವ ಹೆಚ್ಚಿನ ರೋಗಿಗಳು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುತ್ತಾರೆ ಮತ್ತು ಶೇ 30 ದಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂಬುದನ್ನು ಈ ಅಧ್ಯಯನ ಕಂಡುಕೊಂಡಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕರು ಸೆಲ್ಯುಲಾರ್ ಚಯಾಪಚಯ ಮತ್ತು ಖಿನ್ನತೆಯ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದ್ದಾರೆ. ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆ ಹೊಂದಿರುವ ಜನರು ತಮ್ಮ ರಕ್ತದಲ್ಲಿ ಪತ್ತೆ ಮಾಡಬಹುದಾದ ಸಂಯುಕ್ತಗಳನ್ನು ಹೊಂದಿದ್ದಾರೆ ಎಂದು ಅವರು ಕಂಡುಕೊಂಡಿದ್ದಾರೆ. ಅದು ಆತ್ಮಹತ್ಯೆ ಮಾಡಿಕೊಳ್ಳುವ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಖಿನ್ನತೆಯು ಜೀವಕೋಶದ ಚಯಾಪಚಯ ಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಲಿಂಗ ಆಧಾರಿತ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಜರ್ನಲ್ ಟ್ರಾನ್ಸ್ಲೇಶನಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಸಂಶೋಧನೆಗಳು ಮಾನಸಿಕ ಆರೋಗ್ಯ ರಕ್ಷಣೆಯನ್ನು ವೈಯಕ್ತೀಕರಿಸಲು ಮತ್ತು ಭವಿಷ್ಯದಲ್ಲಿ ಔಷಧಿಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

"ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ಮಿದುಳಿನ ಆಚೆಗೆ ಪರಿಣಾಮ ಬೀರುತ್ತವೆ" ಎಂದು ಯುಸಿ (ಯುನೈಟೆಡ್ ಕಿಂಗ್​ಡಮ್​) ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಮೆಡಿಸಿನ್, ಪೀಡಿಯಾಟ್ರಿಕ್ಸ್ ಮತ್ತು ಪೆಥಾಲಜಿ ವಿಭಾಗದ ಪ್ರಾಧ್ಯಾಪಕ ರಾಬರ್ಟ್ ನವಿಯಾಕ್ಸ್ ಹೇಳಿದ್ದಾರೆ.

ಜೀವಕೋಶಗಳ ಸಂಭಾಷಣೆ : "ಸುಮಾರು ಹತ್ತು ವರ್ಷಗಳ ಹಿಂದೆ, ಇಡೀ ದೇಹದ ರಸಾಯನಶಾಸ್ತ್ರವು ನಮ್ಮ ನಡವಳಿಕೆ ಮತ್ತು ಮನಸ್ಸಿನ ಸ್ಥಿತಿಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿತ್ತು. ಆದರೆ ಮೆಟಾಬೊಲೊಮಿಕ್ಸ್​ನಂತಹ ಆಧುನಿಕ ತಂತ್ರಜ್ಞಾನಗಳು ಜೀವಕೋಶಗಳ ಸಂಭಾಷಣೆಗಳನ್ನು ಅವರ ಸ್ಥಳೀಯ ಭಾಷೆಯಲ್ಲಿ ಕೇಳಲು ನಮಗೆ ಸಹಾಯ ಮಾಡುತ್ತಿವೆ'' ಎಂದು ನವಿಯಾಕ್ಸ್ ತಿಳಿಸಿದ್ದಾರೆ.

ಸಂಶೋಧಕರು ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದ 99 ಜನರ ರಕ್ತವನ್ನು ಈ ಅಧ್ಯಯನದಲ್ಲಿ ವಿಶ್ಲೇಷಿಸಿದ್ದಾರೆ. ಇದರ ಜೊತೆಗೆ ಸಮಾನ ಸಂಖ್ಯೆಯ ಆರೋಗ್ಯವಂತರನ್ನು ವಿಶ್ಲೇಷಿಸಿದ್ದಾರೆ. "ನಾವು ಖಿನ್ನತೆಯನ್ನು ಹೊಂದಿರದ/ ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರುವ 100 ಜನರನ್ನು ಹೊಂದಿದ್ದರೆ, ಅದರಲ್ಲಿ ಪುರುಷರಲ್ಲಿ ಐದು ಮೆಟಾಬಾಲೈಟ್‌ಗಳು ಮತ್ತು ಮಹಿಳೆಯರಲ್ಲಿ 5 ಮೆಟಾಬಾಲೈಟ್‌ಗಳ ಆಧಾರದ ಮೇಲೆ ಹೆಚ್ಚಿನ ಅಪಾಯದಲ್ಲಿರುವ 85-90 ಜನರನ್ನು ನಾವು ಸರಿಯಾಗಿ ಗುರುತಿಸಲು ಸಾಧ್ಯ'' ಎಂದು ಅವರು ವಿವರಿಸಿದ್ದಾರೆ.

ಅಸಮರ್ಪಕ ಕಾರ್ಯನಿರ್ವಹಣೆ: ಗಂಡು ಮತ್ತು ಹೆಣ್ಣು ನಡುವಿನ ರಕ್ತದ ಚಯಾಪಚಯ ಕ್ರಿಯೆಯಲ್ಲಿ ಸ್ಪಷ್ಟ ವ್ಯತ್ಯಾಸಗಳಿದ್ದರೂ, ಆತ್ಮಹತ್ಯಾ ಕಲ್ಪನೆಯ ಕೆಲವು ಚಯಾಪಚಯ ಗುರುತುಗಳು ಎರಡೂ ಲಿಂಗಗಳಲ್ಲಿ ಸ್ಥಿರವಾಗಿರುತ್ತವೆ. ಇದು ಮೈಟೊಕಾಂಡ್ರಿಯದ ಅಪಸಾಮಾನ್ಯ ಕ್ರಿಯೆಗಾಗಿ ಬಯೋಮಾರ್ಕರ್‌ಗಳನ್ನು ಒಳಗೊಂಡಿತ್ತು. ಇದು ನಮ್ಮ ಜೀವಕೋಶಗಳ ಶಕ್ತಿ-ಉತ್ಪಾದಿಸುವ ರಚನೆಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಸಂಭವಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಅಂಧತ್ವ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಿದೆ AI

ABOUT THE AUTHOR

...view details