ಕರ್ನಾಟಕ

karnataka

ETV Bharat / sukhibhava

2050ರ ಹೊತ್ತಿಗೆ ಪಾರ್ಶ್ವವಾಯುವಿನಿಂದ 10 ಮಿಲಿಯನ್​ ಸಾವು ಸಾಧ್ಯತೆ: ವರದಿ - ಚಿಕಿತ್ಸೆ ನೀಡುವ ಸ್ಥಿತಿಯಾಗಿದೆ

2020ರಲ್ಲಿ 6.6 ಮಿಲಿಯನ್​ ಮಂದಿ ಪಾರ್ಶ್ವಾವಾಯುವಿನಿಂದ ಸಾವನ್ನಪ್ಪುತ್ತಿದ್ದು, ಈ ಅಂಕಿ ಸಂಖ್ಯೆ 2050ರ ಹೊತ್ತಿಗೆ 9.7 ಮಿಲಿಯನ್​ ತಲುಪಲಿದೆ

stroke can Be cause of 10 million deaths by 2050
stroke can Be cause of 10 million deaths by 2050

By ETV Bharat Karnataka Team

Published : Oct 10, 2023, 10:46 AM IST

ನವದೆಹಲಿ: ಪಾರ್ಶ್ವವಾಯು ಎಂಬುದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡುವ ಸ್ಥಿತಿಯಾಗಿದೆ. ಇಂತಹ ಪಾರ್ಶ್ವವಾಯುವಿನಿಂದ 2050ರ ಹೊತ್ತಿಗೆ ವಾರ್ಷಿಕವಾಗಿ 10 ಮಿಲಿಯನ್​ ಜನರ ಸಾವನ್ನಪ್ಪುವ ಸಾಧ್ಯತೆ ಇದೆ. ಅದರಲ್ಲೂ ಇದು ಹೆಚ್ಚಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ವಿಶ್ವ ಪಾರ್ಶ್ವವಾಯು ಸಂಘಟನೆ ಮತ್ತು ಲ್ಯಾನ್ಸೆಟ್​ ನ್ಯೂರೋಲಾಜಿ ಕಮಿಷನ್​ (ಎಲ್​ಎನ್​ಸಿ) ಸಂಯೋಜನೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಈ ಅಧ್ಯಯನವನ್ನು ಲ್ಯಾನ್ಸೆಟ್​​ ನ್ಯೂರೋಲಾಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. 2020ರಲ್ಲಿ 6.6 ಮಿಲಿಯನ್​ ಮಂದಿ ಪಾರ್ಶ್ವಾವಾಯುವಿನಿಂದ ಸಾವನ್ನಪ್ಪುತ್ತಿದ್ದು, ಈ ಅಂಕಿ ಸಂಖ್ಯೆ 2050ರ ಹೊತ್ತಿಗೆ 9.7 ಮಿಲಿಯನ್​ ತಲುಪಲಿದೆ. ಪ್ರಾಯೋಗಿಕ ಪರಿಹಾರಗಳ ನಿರ್ಣಾಯಕ ಪಾತ್ರದ ಬಗ್ಗೆ ಅಧ್ಯಯನ ತಿಳಿಸಿದ್ದು, ಪಾರ್ಶ್ವವಾಯು ಸಂಬಂಧಿಸಿದ ಸಾವುಗಳನ್ನು ಎದುರಿಸಲು 12 ಶಿಫಾರಸುಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾಗಿರುವುದು ಪಾರ್ಶ್ವವಾಯು ಮೇಲೆ ಕಣ್ಗಾವಲು ವಹಿಸುವುದು, ತಡೆಗಟ್ಟುವುದು, ಅದಕ್ಕೆ ಚಿಕಿತ್ಸೆ ಮತ್ತು ಪುನರ್ವಸತಿ ನೀಡುವುದಾಗಿದೆ.

ಜಾಗೃತಿ ಅವಶ್ಯ: ವರದಿಯು ವೆಚ್ಚ ಪರಿಣಾಮಕಾರಿ ಕಣ್ಗಾವಲು ವ್ಯವಸ್ಥೆಯ ಮೂಲಕ ಇದರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ನಿಖರವಾದ ಸಾಂಕ್ರಾಮಿಕ ರೋಗಶಾಸ್ತ್ರೀಯ ದತ್ತಾಂಶವನ್ನು ಶಿಫಾರಸು ಮಾಡಿದೆ. ಜೊತೆಗೆ ತರಬೇತಿ ಮತ್ತು ಅರಿವು ಸೇರಿದಂತೆ ಮೊಬೈಲ್​ ಮತ್ತು ಡಿಜಿಟಲ್​ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಜನರಿಗೆ ಆರೋಗ್ಯಯುತ ಜೀವನಶೈಲಿ ಮತ್ತು ಸಾರ್ವಜನಿಕ ಅರಿವಿನ ಮೌಲ್ಯಮಾಪನ ನಡೆಸುವುದಕ್ಕೆ ಸಲಹೆ ನೀಡಿದೆ.

ತೀವ್ರವಾದ ಪಾರ್ಶ್ವವಾಯು ಆರೈಕೆ ಸೇವೆಗಳ ನಿಖರವಾದ ಯೋಜನೆಗೆ ಆದ್ಯತೆ ನೀಡುವುದು, ಸಾಮರ್ಥ್ಯ ವೃದ್ಧಿ, ತರಬೇತಿ, ಸೂಕ್ತ ಸಲಕರಣೆಗಳನ್ನು ಒದಗಿಸುವುದು, ಚಿಕಿತ್ಸೆ, ಕೈಗೆಟುಕುವ ಔಷಧಗಳು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ನಿಯೋಜಿಸಲು ಇದು ಒತ್ತು ನೀಡಿದೆ.

ಪಾರ್ಶ್ವಾವಾಯು ಆರೈಕೆ ಸೇವೆಗೆ ಸೂಕ್ಷ್ಮ ಯೋಜನೆ, ಸಾಮರ್ಥ್ಯ ಅಭಿವೃದ್ಧಿ, ತರಬೇತಿ, ಸರಿಯಾದ ಸಾಧನಗಳ ಲಭ್ಯತೆ, ಚಿಕಿತ್ಸೆ, ಕೈಗೆಟುಕುವ ಔಷಧ ಮತ್ತು ಬೇಕಾದ ಸಂಪನ್ಮೂಲಗಳ ಲಭ್ಯತೆಗೆ ಒತ್ತು ನೀಡಿದೆ. ಸಾಕ್ಷಿ ಆಧಾರಿತ ಪಾರ್ಶ್ವವಾಯು ಕೇಂದ್ರದ ಅಳವಡಿಕೆ ಮಾಡುವ ಮೂಲಕ ಹೊಸ ಪಾರ್ಶ್ವವಾಯು ತಡೆಗಟ್ಟಬಹುದು ಎಂದು ಐಸಿಎಂಆರ್​​ ಡಾ ರವಿ ಬಹಲ್ ತಿಳಿಸಿದ್ದಾರೆ. ​

ರಾಷ್ಟ್ರೀಯ ಕಾರ್ಯಕ್ರಮದ ಯೋಜನೆ: ಐಸಿಎಂಆರ್​​ ಸಾಂಕ್ರಾಮಿಕವಲ್ಲದ ರೋಗಗಳನ್ನು ಎದುರಿಸಲು ಪ್ರಾಥಮಿಕ ಆರೈಕೆ ಹಂತದಲ್ಲಿ ಮಾದರಿಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿದೆ. ಭಾರತ ಸರ್ಕಾರವೂ ಕೂಡ ಸಾಕ್ಷಿ ಆಧಾರಿತ ನಿಯಮ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಮೂಲಕ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ ಎಂದರು.

ಭಾರತದಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣ ಆರಂಭ (ಐಎಚ್​ಸಿಐ) ಯಶಸ್ಸು ಗಮನಾರ್ಹವಾಗಿದೆ. ಈ ಮೂಲಕ ಉದ್ಯೋಗಿಗಳ ತಂತ್ರಜ್ಞಾನ ಚಾಲಿತ ನಾವೀನ್ಯತೆಗಳಿಂದ 2 ಮಿಲಿಯನ್​ ಜನರನ್ನು ನಿರ್ವಹಣೆ ಮಾಡುತ್ತಿದ್ದಾರೆ. ಶೇ 50ರಷ್ಟಯ ಪ್ರಕರಣದಲ್ಲಿ ನೈಜ ಸಮಯದ ರಕ್ತದೊತ್ತಡ ನಿಯಂತ್ರಣ ಸಾಧಿಸಲಾಗಿದೆ ಎಂದರು. ವಿಶ್ವ ಪಾರ್ಶ್ವವಾಯಿ ಸಂಘಟನೆಯ ಅಧ್ಯಕ್ಷ ಚುನಾಯಿತ ಮತ್ತು ಆಯೋಗದ ಪ್ರಮುಖ ಲೇಖಕರು, ಪಾರ್ಶ್ವವಾಯುವಿನ ಸಾವಿನ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರೋ ಜಯರಾಜ್​ ಪಾಂಡಿಯನ್​ ತಿಳಿಸಿದ್ದಾರೆ.

ಈ ಅಧ್ಯಯನದ ಪ್ರಮುಖ ಲೇಖಕರಾಗಿರುವ ಕೆನಾಡದ ನ್ಯೋರೊಲಾಜಿಸ್ಟ್​​ ಮತ್ತು ಸ್ಟ್ರೋಕ್​ ಫೆಲೋ ಆಗಿರು ಡಾ ಐವೆ ಸೆಬಾಸ್ಟಿಯನ್​, ಪಾರ್ಶ್ವವಾಯು ಘಟಕದ ಆರೈಕೆಯಂತಹ ಸಮಯೋಚಿತ ಮಧ್ಯಸ್ಥಿಕೆಗೆ ಕರೆ ನೀಡಿದರು. ಭಾರತದ ರಾಷ್ಟ್ರೀಯ ಸ್ಟ್ರೋಕ್ ರಿಜಿಸ್ಟ್ರಿ ಪ್ರೋಗ್ರಾಂ ಮತ್ತು ಥೈಲ್ಯಾಂಡ್‌ನ ರಾಷ್ಟ್ರೀಯ ಡೇಟಾಬೇಸ್ ಪಾರ್ಶ್ವವಾಯುಗಳ ಮೇಲಿನ ಸಾಂಕ್ರಾಮಿಕ ರೋಗಶಾಸ್ತ್ರದ ದತ್ತಾಂಶಕ್ಕೆ ಅಮೂಲ್ಯವಾದ ಮೂಲಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನದ ಮತ್ತೊಬ್ಬ ಪ್ರಮುಖ ಲೇಖಕರಾದ ಡಾ ಯೋಗೇಶ್ವರ್​​ ಕಲ್ಕೊಂಡೆ ಹೇಳಿದ್ದಾರೆ.( ಪಿಟಿಐ)

ಇದನ್ನೂ ಓದಿ: ಫುಡ್​ ಪಾಯ್ಸನ್​, ಹೊಟ್ಟೆ ಜ್ವರ ಎರಡೂ ಒಂದೇ ಅಲ್ಲ: ವ್ಯತ್ಯಾಸ, ಲಕ್ಷಣ, ಪರಿಹಾರದ ಮಾಹಿತಿ..

ABOUT THE AUTHOR

...view details