ಕರ್ನಾಟಕ

karnataka

ETV Bharat / sukhibhava

ಜಗತ್ತಿನಲ್ಲಿ ಮತ್ತೆ ಕೋವಿಡ್ ಏರಿಕೆ: ಭಾರತದಲ್ಲಿ 31 ಹೊಸ ಸೋಂಕಿತ ಪ್ರಕರಣ ಪತ್ತೆ - ಭಾರತದಲ್ಲಿ ಹೊಸ ಕೋವಿಡ್​ ಪ್ರಕರಣ

Covid-19: ಚಳಿಗಾಲದಲ್ಲಿ ಕೋವಿಡ್​ ವೈರಸ್​ ಉಲ್ಬಣಗೊಳ್ಳುವ ಕುರಿತು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.

Still  Covid continues to pose a threat in globally
Still Covid continues to pose a threat in globally

By ETV Bharat Karnataka Team

Published : Nov 27, 2023, 11:01 AM IST

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 31 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಸದ್ಯ ದೇಶದಲ್ಲಿ 249 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗಿನ ಒಟ್ಟು ಸಾವಿನ ಸಂಖ್ಯೆ 5,33,298 ಎಂದು ಭಾನುವಾರ ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ನೀಡಿದೆ.

ಶನಿವಾರ ದೇಶದಲ್ಲಿ 42 ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಯುಎಸ್​, ಯುಕೆ, ಫ್ರಾನ್ಸ್​, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಫಿಲಿಪ್ಪೀನ್ಸ್‌ ಸೇರಿದಂತೆ ಹಲವೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.

ಸಾರ್ಸ್​​ ಕೋವ್​ 2 ವೈರಸ್​ ಹರಡುತ್ತಿದ್ದು, ವಿಕಸನಗೊಂಡು ಬದಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮರಿಯಾ ವನ್​ ಕೆರಕೊವ್​​ ತಿಳಿಸಿದ್ದಾರೆ. ಇವರು ಕೋವಿಡ್​ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಜಾಗತಿಕವಾಗಿ ಪ್ರಕರಣಗಳ ಏರಿಕೆ ಕುರಿತು ಮಾತನಾಡಿರುವ ಅವರು, ಕೋವಿಡ್​ ಬೆದರಿಕೆ ಮುಂದುವರೆದಿದ್ದು, ಎಲ್ಲಾ ದೇಶಗಳಲ್ಲೂ ಪ್ರಸರಣಗೊಳ್ಳುತ್ತಿದೆ ಎಂದಿದ್ದಾರೆ.

ಜಗತ್ತು ಕೋವಿಡ್​ನಿಂದ ಮುಂದೆ ಸಾಗಿದೆ. ಜನರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ವೈರಸ್​ ಎಲ್ಲೂ ಹೋಗಿಲ್ಲ. ಇದು ಪ್ರಸರಣಗೊಳ್ಳುತ್ತದೆ. ಇದು ಬದಲಾಗುತ್ತಿದ್ದು, ಸಾಕಷ್ಟು ಹಾನಿ ಮಾಡಬಲ್ಲದು. ಇದನ್ನು ನಾವು ಕಣ್ಗಾವಲಿನಲ್ಲಿರಿಸಬೇಕು ಎಂದು ಎಚ್ಚರಿಸಿದ್ದಾರೆ.

ಜಾಗತಿಕವಾಗಿ ಕೋವಿಡ್-19 ಏರಿಕೆ: ಆಸ್ಟ್ರೇಲಿಯಾ ಉತ್ತರ ಭೂ ಪ್ರದೇಶದ ರೋಗ ನಿಯಂತ್ರಣ ಕೇಂದ್ರವು ಕಳೆದ ನಾಲ್ಕು ವಾರಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್​ ಏರಿಕೆ ಕಂಡ ಹಿನ್ನೆಲೆಯಲ್ಲಿ ಜನರಿಗೆ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಮಲೇಷಿಯಾದಲ್ಲಿ 2,305 ಕೋವಿಡ್​ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದು, ಶೇ 21ರಷ್ಟು ಏರಿಕೆಯಾಗಿವೆ. 21 ಓಮ್ರಿಕಾನ್​ ಪ್ರಕರಣಗಳೂ ಇದರಲ್ಲಿ ಸೇರಿವೆ. ಫಿಲಿಪ್ಪೀನ್ಸ್​ನಲ್ಲಿ 175 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ.

ಪ್ರಕರಣಗಳ ಪೈಕಿ ಬಿಎ.2.86 ಎಂಬ ಸಾಮಾನ್ಯ ತಳಿ ಕಂಡುಬಂದಿದ್ದು, ಜಾಗತಿಕವಾಗಿ ನಿಧಾನವಾಗಿ ಪ್ರಕರಣಗಳ ಏರಿಕೆಯಾಗುತ್ತಿದೆ. ಇದನ್ನು ಡಬ್ಲ್ಯೂಎಚ್​ಒ ಆಸಕ್ತಿಯ ರೂಪಾಂತರ ಎಂದು ವರ್ಗೀಕರಿಸಿದೆ. ಇಜಿ.5 ಅನ್ನು ಎರಿಸ್​ ಎಂದು ಕರೆಯಲಾಗಿದ್ದು, ಇದು ರೂಪಾಂತರ ಎಂದು ಡಬ್ಲೂಎಚ್​ಒ ಆಗಸ್ಟ್​ನಲ್ಲಿ ಹೇಳಿದೆ. ಪ್ರಸ್ತುತ ಜಾಗತಿಕವಾಗಿ ಅರ್ಧದಷ್ಟು ಪ್ರಮಾಣದಲ್ಲಿ ಕೋವಿಡ್ ರೂಪಾಂತರವಿದೆ.

ಯುರೋಪಿಯನ್​ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಎಕ್ಸ್​ಬಿಬಿ 1.5 ತಳಿ, ಇಜಿ.5 ಸದ್ಯ ಪ್ರಾಬಲ್ಯ ಹೊಂದಿದ್ದು, ಇಯು/ಇಇಎ ದೇಶದಲ್ಲಿ ಶೇ 67ರಷ್ಟು ಪ್ರಕರಣಗಳಿವೆ.

ಈ ನಡುವೆ ಭಾರತದಲ್ಲಿ ಒಟ್ಟಾರೆ 4.50 ಕೋಟಿ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಚೇತರಿಕೆ ಕಂಡವರ ಪ್ರಮಾಣ ಶೇ 98.81ರಷ್ಟಿದೆ. ಸಾವಿನ ದರ ಶೇ 1.19ರಷ್ಟಿದೆ. ಇದುವರೆಗೆ 220.67 ಕೋಟಿ ಕೋವಿಡ್​ ಲಸಿಕೆ ನೀಡಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಚೀನಾ ನ್ಯೂಮೋನಿಯಾ ಪ್ರಕರಣ; ಭಾರತದಲ್ಲಿ ಕಣ್ಗಾವಲಿಗೆ ಕರೆ ನೀಡಿದ ವೈದ್ಯರು

ABOUT THE AUTHOR

...view details