ತೈಪೈ: ಚರ್ಮದ ಊರಿಯುತದಂತಹ ಸಮಸ್ಯೆಗಳಿಗೆ ಸಾಮಾನ್ಯವಾಗಿ ಬಳಕೆ ಮಾಡುವಂತ ಕಾರ್ಟಿಕೊಸ್ಟೆರಾಯ್ಡ್‌ಗಳು ಅತಿ ಹೆಚ್ಚು ಬಳಕೆ ಮಾಡಿದಲ್ಲಿ ಅದು ಅಸ್ಥಿರಂದ್ರತೆ ಮತ್ತು ಮೂಳೆ ಮುರಿತದಂತಹ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ವ್ಯವಸ್ಥಿತ ಕಾರ್ಟಿಕೊಸ್ಟೆರಾಯ್ಡ್‌ಗಳು ಮೂಳೆ ಮರು ರೂಪಿಸುವಿಕೆಗೆ ಅಡ್ಡಿಪಡಿಸುತ್ತವೆ. ಇವು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತವೆ ಎಂದು ತಿಳಿದು ಬಂದಿದೆ. ಆದರೂ ಮೂಳೆ ಆರೋಗ್ಯದ ಮೇಲೆ ಟಾಪಿಕಲ್ ಕಾರ್ಟಿಕೊಸ್ಟೆರಾಯ್ಡ್ಗಳ ಅನಿರ್ದಿಷ್ಟವಾಗಿದೆ.
ಈ ಕುರಿತು ಜರ್ನಲ್ ಆಫ್ ದಿ ಯುರೋಪಿಯನ್ ಅಕಾಡಮಿ ಆಫ್ ಡರ್ಮಟಾಲಾಜಿ ಮತ್ತು ವೆನೆರಿಯಲಾಜಿಯಲ್ಲಿ ಪ್ರಕಟಿಸಲಾಗಿದೆ. ದೀರ್ಘ ಕಾಲದವರೆಗೆ ಕಾರ್ಟಿಕೊಸ್ಟೆರಾಯ್ಡ್ಗೆ ಒಡ್ಡಿಕೊಳ್ಳುವುದರಿಂದ ಅಪಾಯ ಹೆಚ್ಚಿದೆ. ಇದರಲ್ಲಿ ಹಿರಿಯರು ಮತ್ತು ಮಕ್ಕಳು ಅತಿ ಹೆಚ್ಚಿನ ಅಪಾಯ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನ ಟಾಪಿಕಲ್ ಕಾರ್ಟಿಕೊಸ್ಟೆರಾಯ್ಡ್ಗಳ ಚಿಕಿತ್ಸೆಯಲ್ಲಿ ಚರ್ಮದ ಪರಿಸ್ಥಿತಿಗಳ ನಿರ್ವಹಣೆಗೆ ಎಚ್ಚರದಿಂದ ನಿರ್ವಹಣೆ ಮಾಡಬೇಕಿದೆ. ಇದರ ಅಡ್ಡ ಪರಿಣಾಮದ ಬಗ್ಗೆ ಆರೋಗ್ಯ ವೃತ್ತಿಪರರಲ್ಲಿ ಅರಿವು ಮತ್ತು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನ್ಯಾಷನಲ್ ತೈವಾನ್ ಯುನಿವರ್ಸಿಟಿ ಹಾಸ್ಪಿಟಲ್ ಮತ್ತು ನ್ಯಾಷನಲ್ ತೈವಾನ್ ಯುನಿವರ್ಸಿಟಿ ಕಾಲೇಜ್ ಆಫ್ ಮಡಿಸಿನ್ ನ ಚಿಯಾಯು ಚು ತಿಳಿಸಿದ್ದಾರೆ.