ಕರ್ನಾಟಕ

karnataka

ETV Bharat / sukhibhava

ಬೇಸಿಗೆಯ ಡಯಟ್​ನಲ್ಲಿ ಈ ಆಹಾರ ಸೇವಿಸಿ ತಂಪಾಗಿರಿ - ಋತುಮಾನದಲ್ಲಿ ಬಿಸಿಲನ ಬೇಗೆ ಹೆಚ್ಚು ಊಟ ಸೇರುವುದಿಲ್ಲ

ಬೇಸಿಗೆಯಲ್ಲಿ ಭಾರಿ ಆಹಾರ ಬದಲಾಗಿ ಹಗುರ, ಪೋಷಕಾಂಶ ಮತ್ತು ನೀರಿನಾಂಶ ಹೊಂದಿರುವ ಆಹಾರಗಳ ಆಯ್ಕೆ ಉತ್ತಮ

Stay cool with this summer diet
Stay cool with this summer diet

By

Published : Apr 24, 2023, 11:37 AM IST

ಸಾಮಾನ್ಯ ಡಯಟ್​ಗೂ ಬೇಸಿಗೆ ಡಯಟ್​ಗೂ ಬಹಳ ವ್ಯತ್ಯಾಸವಿದೆ. ಕಾರಣ ಈ ಋತುಮಾನದಲ್ಲಿ ಬಿಸಿಲಿನ ಬೇಗೆ ಹೆಚ್ಚು ಊಟ ಸೇರುವುದಿಲ್ಲ. ಅಲ್ಲದೇ, ಹೊಟ್ಟೆ ಸಮಸ್ಯೆ, ಅಜೀರ್ಣ ಸಾಮಾನ್ಯವಾಗಿ ಕಾಡುತ್ತದೆ. ರುಚಿಕರ ಸಮೃದ್ಧ ಆಹಾರಗಳು ಇಷ್ಟವಾದರೂ ಅವರುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ, ನಿರ್ಜಲೀಕರಣಕ್ಕೆ ಒಳಗಾಗದಂತೆ ಗಟ್ಟಿ ಆಹಾರ ಬದಲು ದ್ರವ ಆಹಾರ ಸೇವನೆ ಮಾಡುವುದು ಉತ್ತಮ. ಈ ಹಿನ್ನೆಲೆ ಈ ಬೇಸಿಗೆ ಡಯಟ್​​ನಲ್ಲಿ ತಾಪಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅವಶ್ಯ. ಪ್ರೋಟಿನ್​ಗಿಂತ ಹೆಚ್ಚಾಗಿ, ನೀರಿನಾಂಶ ಸೇವನೆ ಅಗತ್ಯವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಹಾರ ಆಯ್ಕೆ ಉತ್ತಮ. ಇಲ್ಲದೇ ಹೋದಲ್ಲಿ ಕೆಲವು ವೈದ್ಯಕೀಯ ಸಮಸ್ಯೆಗಳು ಕೂಡ ಉದ್ಭವಿಸುತ್ತದೆ. ಈ ಹಿನ್ನೆಲೆ ಬೇಸಿಗೆಯಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಈ ವಸ್ತುಗಳನ್ನು ಬಳಸುವುದು ಅವಶ್ಯವಾಗುತ್ತದೆ.

ಈರುಳ್ಳಿ: ಈರುಳ್ಳಿಯಲ್ಲಿ ಆ್ಯಂಟಿ ಅಲರ್ಜಿನ್​ ಗುಣ ಇದ್ದು, ಇದು ಸನ್​ ಸ್ಟೋಕ್​ ಆಗದಂತೆ ತಡೆಯುತ್ತದೆ. ಅಲ್ಲದೇ ಅಜೀರ್ಣದಂತಹ ಸಮಸ್ಯೆ ನಿವಾರಣೆ ಮಾಡುತ್ತದೆ. ಈರುಳ್ಳಿಯಲ್ಲಿ ವಿಟಮಿನ್​ ಎ, ಬಿ6, ಸಿ ಸೇರಿದಂತೆ ಸಮೃದ್ಧಿ ಪೋಷಕಾಂಶ ಇರುವುದಿರಂದ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ.

ಮೊಸರು: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದು ಅಗತ್ಯವಾಗಿದೆ. ಮೊಸರನ್ನು ಲಸ್ಸಿ ಅಥವಾ ಮಜ್ಜಿಗೆ ಮಾಡಿ ಕೂಡ ಸೇವಿಸಬಹುದು. ಇದು ತ್ವಚೆ ಸೇರಿದಂತೆ ಆರೋಗ್ಯಕ್ಕೆ ಪ್ರಯೋಜವಾಗಿದ್ದು, ಇದು ಕೂಡ ಜೀರ್ಣಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಏಳನೀರು:ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳದಂತೆ ಕಾಪಾಡಲು ಏಳನೀರು ಅತ್ಯವಶ್ಯಕವಾಗಿದೆ. ಅಲ್ಲದೇ ಇದರಲ್ಲಿ ಮಿನರಲ್ಸ್​, ವಿಟಮಿನ್​ ಮತ್ತು ಇನ್ನಿತರ ಪೋಷಕಾಂಶ ಇದ್ದು, ಶಾಖದ ವಿರುದ್ಧ ಹೋರಾಡುತ್ತದೆ. ಅಲ್ಲದೇ, ಗಂಭೀರ ರೋಗದ ವಿರುದ್ಧ ಹೋರಾಡಲು ಪ್ರಯೋಜನ ಮಾಡುತ್ತದೆ.

ನಿಂಬೆ ಮತ್ತು ಪುದಿನ: ಬೇಸಿಗೆಯಲ್ಲಿ ನೈಸರ್ಗಿಕವಾಗಿ ತಾಜಾತನ ಗೊಳಿಸುವ ಪಾನೀಯ ಇದಾಗಿದೆ. ನಿಂಬೆ ಹಣ್ಣು ಕೂಡ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪುದಿನ ಪೋಷಕಾಂಶಗಳನ್ನು ನೀಡುತ್ತದೆ. ಇವರೆಡರ ಸೇವನೆ ಬಿಸಿಲಿನಿಂದ ದೇಹ ಬಳಲದಂತೆ ಕಾಪಾಡುತ್ತದೆ

ಕಲ್ಲಂಗಡಿ: ಬಿಸಿಲಿನ ವಿರುದ್ಧ ತಂಪು ನೀಡುವ ಹಣ್ಣು ಕಲ್ಲಂಗಡಿ, ಹೆಚ್ಚಿನ ನೀರಿನಾಂಶ ಹೊಂದಿರುವ ಈ ಹಣ್ಣು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾದಂತೆ ತಡೆಯುತ್ತದೆ. ಕಲ್ಲಂಗಡಿಯಲ್ಲಿ ಶೇ 91.45ರಷ್ಟು ನೀರಿನಾಂಶ ಇದ್ದು, ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಇದ್ದು, ಇದು ಕೂಡ ಸಹಾಯ ಮಾಡುತ್ತದೆ.

ಕಾಮ ಕಸ್ತೂರಿ ಬೀಜ:ಬೇಸಿಗೆಯಲ್ಲಿ ಆರೋಗ್ಯದ ಜೊತೆಗೆ ದೇಹಕ್ಕೆ ತಂಪು ನೀಡುವ ಮತ್ತೊಂದು ಆಹಾರ ಎಂದು ಕಾಮ ಕಸ್ತೂರಿ ಬೀಜ. ದೇಹದಲ್ಲಿ ಹೆಚ್ಚು ಶಾಖಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಇತರ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ. ಹೀಗಾಗಿ ಡಯಟ್​ನಲ್ಲಿ ಅಳವಡಿಸಿಕೊಳ್ಳಬಹುದು. ತೂಕ ನಿರ್ವಹಣೆಗೂ ಕೂಡ ಚಿಯಾ ಬೀಜಗಳು ಉಪಯುಕ್ತ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೇಗ ಹಾಳಾಗುತ್ತದೆ ಆಹಾರ; ಈ ವಿಚಾರದಲ್ಲಿ ಬೇಡ ನಿರ್ಲಕ್ಷ್ಯ

ABOUT THE AUTHOR

...view details