ನ್ಯೂಯಾರ್ಕ್: ಕಡಿಮೆ ಕೊಲೆಸ್ಟ್ರಾಲ್ ಮಟ್ಟ ನಿರ್ವಹಣೆಗೆ ಬಳಕೆ ಮಾಡುವ ಸ್ಟ್ಯಾಟಿನ್ಗಳು ದೀರ್ಘ ಕಾಲದಲ್ಲಿ ಪ್ರತಿಕೂಲ ಆರೋಗ್ಯ ಸ್ಥಿತಿಗೆ ಕಾರಣವಾಗಲಿದ್ದು, ಸ್ನಾಯು ದುರ್ಬಲತೆಗೆ ಕಾರಣವಾಗಬಹುದು ಎಂದು ಇಂಗ್ಲೆಂಡ್ನ ಮೆಡಿಸಿನ್ಸ್ ಅಂಡ್ ಹೆಲ್ತ್ಕೇರ್ ಪ್ರೊಡಕ್ಟ್ಸ್ ರೆಗ್ಯೂಲೆಟರಿ ಏಜೆನ್ಸಿ (ಎಂಎಚ್ಆರ್ಎ) ವರದಿ ನೀಡಿದೆ.
ಸ್ಟ್ಯಾಟಿನ್ಗಳು ಅಟೋರ್ವಾಸ್ಟಾಟಿನ್, ಪ್ರವಾಸ್ಟಾಟಿನ್, ಲೊವಾಸ್ಟಾಟಿನ್, ಫ್ಲೂವಾಸ್ಟಾಟಿನ್, ಸಿಮ್ವಾಸ್ಟಾಟಿನ್, ರೋಸುವಾಸ್ಟಾಟಿನ್ ಮತ್ತು ಪಿಟವಾಸ್ಟಾಟಿನ್ ಏಕ ಪದಾರ್ಥ ಮತ್ತು ಸ್ಥಿರ - ಡೋಸ್ ಸಂಯೋಜನೆಯ ಉತ್ಪನ್ನಗಳಾಗಿದೆ. ಇದು ಆಂಜಿನಾ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯರಕ್ತನಾಳದ ಸಮಸ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾಗಿ ಬಳಕೆ ಮಾಡಲಾಗುವುದು.
ಈ ಔಷದವು ಸುರಕ್ಷಿತಾರ್ಹ ಮತ್ತು ಎಲ್ಡಿಎಲ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೊಂದಿರುವ ಗುಂಪುಗಳಿಗೆ ಪರಿಣಾಮಕಾರಿಯಾಗಿದೆ. ಸ್ಟ್ಯಾಟಿನ್ಗಳು ಅಪಧಮನಿಕಾಠಿಣ್ಯದ ಹೃದಯರಕ್ತನಾಳದ ಕಾಯಿಲೆಯ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕೆಲವು ಸಂಶಯ ವರದಿಯಲ್ಲಿ ಇದರ ಬಳಕೆಯು ಮೈಸ್ತೇನಿಯಾ ಗ್ರ್ಯಾವಿಸ್ ಅಥವಾ ಆಕ್ಯುಲರ್ ಮೈಸ್ತೇನಿಯಾದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ನರ ಸಮಸ್ಯೆ: ಮೈಸ್ತೇನಿಯಾ ಗ್ರ್ಯಾವಿಸ್ ಸ್ವಯಂ ನಿರೋಧಕ ನರಸ್ನಾಯು ಸಮಸ್ಯೆಯಾಗಿದ್ದು, ಇದು ಸ್ವಯಂಪ್ರೇರಿತ ಸ್ನಾಯುಗಳ ಏರಿಳಿತದ ದೌರ್ಬಲ್ಯದಿಂದ ಆಗಿದೆ. ಇದು ಕಣ್ಣಿನ ಚಲನೆಗಳು, ಮುಖದ ಅಭಿವ್ಯಕ್ತಿ, ಮಾತನಾಡುವುದು, ನುಂಗುವಿಕೆ, ಅಂಗ ಚಲನೆ ಮತ್ತು ಉಸಿರಾಟವನ್ನು ನಿಯಂತ್ರಿಸುತ್ತದೆ.